ಅವರಿಬ್ಬರದು ಪ್ರೇಮ ವಿವಾಹ. ಮದುವೆಗಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ, ಅನಿರೀಕ್ಷಿತವಾಗಿ ಸಂಭವಿಸಿದ ಕಾರು ಅಪಘಾತ ಎಲ್ಲವನ್ನು ಹಾಳು ಮಾಡಿತು. ಆದರೆ, ಅವರಿಬ್ಬರ ಪ್ರೀತಿಯನ್ನು ಮಾತ್ರ ಕುಗ್ಗಿಸಲು ವಿಧಿಯಿಂದಲೂ ಸಾಧ್ಯವಾಗಲಿಲ್ಲ. ನಿಗದಿತ ಅಂದರೆ, ಮುಹೂರ್ತದ ಸಮಯದಲ್ಲೇ ವರನು, ತನ್ನ ನಿಶ್ಚಿತ ವಧುವನ್ನು ಆಸ್ಪತ್ರೆಯಲ್ಲಿ ಎಲ್ಲರ ಮುಂದೆಯೇ ತನ್ನ ಜೀವನ ಸಂಗಾತಿಯನ್ನಾಗಿ ಮಾಡಿಕೊಂಡನು. ಗಂಭೀರ ಗಾಯದ ನಡುವೆಯೂ ಶರೋನ್ ಮತ್ತು ಅವನಿ ಕೈ ಹಿಡಿದು ಹೊಸ ಜೀವನವನ್ನು ಆರಂಭಿಸಿದರು.