ಜಾಲತಾಣದಲ್ಲಿ ಹರಿದಾಡಿದ ಅಶ್ಲೀಲ ಫೋಟೋಗಳು... ನಟಿ ಕೀರ್ತಿ ಸುರೇಶ್​ ಹೇಳಿಕೆ ವೈರಲ್! Keerthy Suresh ​

ನಟಿ ಕೀರ್ತಿ ಸುರೇಶ್​
ನಟಿ ಕೀರ್ತಿ ಸುರೇಶ್​
Published on

ಪ್ರಮುಖ ಮುಖ್ಯಾಂಶಗಳು

  • ನಟಿಯರಿಗೆ ಸಾಮಾನ್ಯವಾಗಿ ಎದುರಾಗುವ ಸಮಸ್ಯೆ ಎಂದರೆ ಅಪಪ್ರಚಾರ
  • ಕೆಲ ದುಷ್ಕರ್ಮಿಗಳು ನಟಿಯರ ಫೋಟೋಗಳನ್ನು ಕೆಟ್ಟದಾಗಿ ಎಡಿಟ್​ ಮಾಡಿ ಹಡಿಬಿಡುತ್ತಾರೆ
  • ಎಐ ಯುಗದಲ್ಲಿ ನಟಿಯರ ಅಶ್ಲೀಲ ಫೋಟೋಗಳು ಹೆಚ್ಚಾಗಿ ಹರಿದಾಡುತ್ತಿವೆ
  • ಇದೀಗ, ಇದೇ ವಿಚಾರವಾಗಿ ನಟಿ ಕೀರ್ತಿ ಸುರೇಶ್​ ಅವರು ಮಾತನಾಡಿದ್ದಾರೆ
ಚೆನ್ನೈ : ನಟಿ ಕೀರ್ತಿ ಸುರೇಶ್ ( Keerthy Suresh ) ತಮಿಳು ಚಿತ್ರರಂಗದ ಸ್ಟಾರ್​ ನಟಿಯರಲ್ಲಿ ಒಬ್ಬರು. ತೆಲುಗು ಮತ್ತು ಹಿಂದಿ ಭಾಷೆಯಲ್ಲೂ ನಟಿಸಿದ್ದಾರೆ. ವಿಜಯ್​, ಸೂರ್ಯ, ವಿಕ್ರಮ್​, ಶಿವಕಾರ್ತಿಕೇಯನ್​,​ ನಾನಿ, ಮಹೇಶ್​ ಬಾಬು ಸೇರಿದಂತೆ ಸ್ಟಾರ್​ ನಟರ ಜತೆ ತೆರೆ ಹಂಚಿಕೊಂಡಿದ್ದಾರೆ. ಕನ್ನಡದಲ್ಲಿ ಒಂದೇ ಒಂದು ಸಿನಿಮಾದಲ್ಲಿ ನಟಿಸದಿದ್ದರೂ ಪ್ಯಾನ್​ ಇಂಡಿಯಾ ಪರಿಕಲ್ಪನೆ ಬಳಿಕ ಕೀರ್ತಿ ಸುರೇಶ್​ ನಟನೆಯ ಡಬ್ಬಿಂಗ್​ ಚಿತ್ರಗಳೂ ಕನ್ನಡದಲ್ಲೂ ಸದ್ದು ಮಾಡಿದ್ದು, ಆಕೆಯ ನಟನೆ ಮತ್ತು ಸೌಂದರ್ಯಕ್ಕೆ ಕನ್ನಡ ಪ್ರೇಕ್ಷಕರು ಸಹ ಫಿದಾ ಆಗಿದ್ದಾರೆ.
ತಾಜಾ ಸಂಗತಿ ಏನೆಂದರೆ, ನಟಿಯರಿಗೆ ಸಾಮಾನ್ಯವಾಗಿ ಎದುರಾಗುವ ಸಮಸ್ಯೆ ಎಂದರೆ ಅಪಪ್ರಚಾರ. ಕೆಲ ದುಷ್ಕರ್ಮಿಗಳು ನಟಿಯರ ಫೋಟೋಗಳನ್ನು ಕೆಟ್ಟದಾಗಿ ಎಡಿಟ್​ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಡಿಬಿಡುತ್ತಾರೆ. ಅದರಲ್ಲೂ ಈ ಎಐ ಯುಗದಲ್ಲಿ ನಟಿಯರ ಅಶ್ಲೀಲ ಫೋಟೋಗಳು ಮತ್ತು ವಿಡಿಯೋಗಳು ಹೆಚ್ಚಾಗಿ ಹರಿದಾಡುತ್ತಿವೆ. ಕೆಲ ನಟಿಯರು ಇದನ್ನು ನಿರ್ಲಕ್ಷಿಸಿದರೆ, ಇನ್ನು ಕೆಲವರು ಈ ಬಗ್ಗೆ ಖಡಕ್​ ಆಗಿ ಪ್ರತಿಕ್ರಿಯಿಸಿ, ಕಠಿಣ ಕ್ರಮ ಕೈಗೊಳ್ಳಲು ಮುಂದಾಗುತ್ತಾರೆ. ಇದೀಗ, ಇದೇ ವಿಚಾರವಾಗಿ ನಟಿ ಕೀರ್ತಿ ಸುರೇಶ್​ ಅವರು ಮಾತನಾಡಿದ್ದಾರೆ.
ಕೃತಕ ಬುದ್ಧಿಮತ್ತೆ (AI) ಯು ವ್ಯಕ್ತಿಯ ಗೌಪ್ಯತೆಯ ಮೇಲೆ ಬೀರುತ್ತಿರುವ ಪರಿಣಾಮವು ಬಹಳ ಕಳವಳಕಾರಿ ಸಂಗತಿಯಾಗಿದೆ ಎಂದು ಕೀರ್ತಿ ಸುರೇಶ್​ ಹೇಳಿದ್ದಾರೆ. ಕೀರ್ತಿ ಅವರ ಮಾರ್ಫ್ ಮಾಡಿದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಈ ರೀತಿಯಾಗಿ ತಂತ್ರಜ್ಞಾನದ ದುರುಪಯೋಗದ ಬಗ್ಗೆ ನಟಿ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.
ಯಾವುದೇ ವ್ಯಕ್ತಿಯ ಫೋಟೋಗಳನ್ನು ಮಾರ್ಫಿಂಗ್ ಮಾಡಿ ಈ ರೀತಿ ಹರಡುವುದರಿಂದ ಉಂಟಾಗುತ್ತಿರುವ ಮಾನಸಿಕ ಪರಿಣಾಮಗಳ ಬಗ್ಗೆಯೂ ಕೀರ್ತಿ ಮಾತನಾಡಿದ್ದಾರೆ. ಇದು ಸೆಲೆಬ್ರಿಟಿಗಳು ಮಾತ್ರವಲ್ಲದೆ ಸಾಮಾನ್ಯ ಜನರ ಮೇಲೂ ಪರಿಣಾಮ ಬೀರುವ ಸಮಸ್ಯೆಯಾಗಿದೆ. ಸಾಮಾಜಿಕ ಜಾಲತಾಣ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸುವ ಯಾರ ಮೇಲಾದರೂ ಇದು ಪರಿಣಾಮ ಬೀರಬಹುದು ಎಂದು ಕೀರ್ತಿ ಕಳವಳ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ, ಚೆನ್ನೈನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೀರ್ತಿ ಸುರೇಶ್, ಕೃತಕ ಬುದ್ಧಿಮತ್ತೆ (AI) ಇಂದು ಒಂದು ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದೆ ಎಂದರು. ಎಐ ಅನ್ನೋದು ವರದಾನ ಮತ್ತು ಶಾಪ ಎರಡೂ ಆಗಿದೆ. ಮಾನವರು ತಂತ್ರಜ್ಞಾನವನ್ನು ಕಂಡುಹಿಡಿದರು. ಆದರೆ, ನಾವು ಅದರ ಮೇಲಿನ ನಿಯಂತ್ರಣವನ್ನೇ ಕಳೆದುಕೊಳ್ಳುತ್ತಿದ್ದೇವೆ ಎಂದು ಕೀರ್ತಿ ತಿಳಿಸಿದರು.
ತೀರಾ ಅಶ್ಲೀಲ ಬಟ್ಟೆ ಧರಿಸಿರುವಂತೆ ಎಡಿಟ್​ ಮಾಡಿದ ನನ್ನ ಚಿತ್ರಗಳನ್ನು ನೋಡಿದಾಗ ನನಗೆ ತುಂಬಾ ಆಘಾತವಾಗುತ್ತದೆ. ಅದನ್ನು ನೋಡುವ ಜನರು ನಿಜವೆಂದು ಭಾವಿಸುತ್ತಾರೆ. ಅಷ್ಟರ ಮಟ್ಟಿಗೆ ಎಐ ಎಡಿಟ್​ ಮಾಡಿರುತ್ತದೆ. ನನ್ನನ್ನು ಅಂತಹ ಉಡುಗೆಯಲ್ಲಿ ನೋಡಿದ ಜನರು ನಿಜವಾಗಿಯೂ ಕೀರ್ತಿ ಇಂಥಾ ಬಟ್ಟೆ ಧರಿಸಿದ್ದಾರಾ ಎಂದು ಆಶ್ಚರ್ಯ ಪಡುತ್ತಾರೆ ಎಂದರು.
ಇತ್ತೀಚೆಗೆ, ನಾನು ಒಂದು ಸಿನಿಮಾದ ಪೂಜಾ ಮುಹೂರ್ತದಲ್ಲಿ ಧರಿಸಿದ್ದ ಉಡುಪನ್ನು ಬೇರೆ ಆಯಾದಿಂದ ಕೆಟ್ಟದಾಗಿ ಎಡಿಟ್​ ಮಾಡಲಾಗಿತ್ತು. ಅದನ್ನು ನೋಡಿದಾಗ ಆರಂಭದಲ್ಲಿ ನನಗೆ ಒಂದು ಕ್ಷಣ ಅನುಮಾನ ಮೂಡಿತು. ಬಳಿಕ ಅದರ ಬಗ್ಗೆ ನಾನು ಯೋಚನೆ ಮಾಡಿದಾಗ, ನಾನು ಆ ರೀತಿಯಲ್ಲಿ ಪೋಸ್ ನೀಡಿಲ್ಲ ಎಂದು ಅರಿತುಕೊಂಡೆ. ಇದು ಖಂಡಿತವಾಗಿಯೂ ಅಪಾಯಕಾರಿ ಬೆಳವಣಿಗೆ. ಇಂತಹ ಫೋಟೋಗಳನ್ನು ನೋಡುವುದು ನಿಜಕ್ಕೂ ನೋವಿನಿಂದ ಕೂಡಿದೆ ಎಂದು ಕೀರ್ತಿ ಬೇಸರ ಹೊರಹಾಕಿದರು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net