ಈ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಅವರ ಇಸ್ರೇಲ್ ಭೇಟಿಯನ್ನು ರಾಜತಾಂತ್ರಿಕವಾಗಿ ಭಾರತಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತಿದೆ. ಇಸ್ರೇಲ್ ಭಾರತಕ್ಕೆ ರಕ್ಷಣಾ ವ್ಯವಸ್ಥೆಯ ತಂತ್ರಜ್ಞಾನ ನೀಡುವುದರಲ್ಲಿ ಪ್ರಮುಖ ದೇಶವಾಗಿದ್ದು, ಇಸ್ರೇಲ್ ಭಾರತಕ್ಕೆ ಸುಧಾರಿತ ಭದ್ರತಾ ವ್ಯವಸ್ಥೆ, ಕ್ಷಿಪಣಿ ತಂತ್ರಜ್ಞಾನ, ರಾಡಾರ್ ವ್ಯವಸ್ಥೆ ಮತ್ತು ಕಣ್ಗಾವಲು ಸಾಧನಗಳನ್ನು ಒದಗಿಸುತ್ತಿದೆ. ಡ್ರೋನ್ ತಂತ್ರಜ್ಞಾನ, ಕ್ಷಿಪಣಿ ವಿರೋಧಿ ವ್ಯವಸ್ಥೆಗಳು ಮತ್ತು ಗಡಿ ಭದ್ರತಾ ಸಾಧನಗಳಲ್ಲಿ ಇಸ್ರೇಲಿ ಪರಿಣತಿಯನ್ನು ಭಾರತದ ಭದ್ರತಾ ಅಗತ್ಯಗಳಿಗೆ ನಿರ್ಣಾಯಕವೆಂದು ಪರಿಗಣಿಸಲಾಗಿದೆ. ಹೀಗಾಗಿ ಇಸ್ರೇಲ್ ಭಾರತದ ಮಿತ್ರ ರಾಷ್ಟ್ರ ಎಂದು ಹೇಳಬಹುದಾಗಿದೆ,(ಏಜನ್ಸೀಸ್).