ಯೂಟ್ಯೂಬರ್ ಬೊನು ಕೋಮಾಲಿ ಆತ್ಮ*ಹತ್ಯೆ: ತಾಯಿಗೆ 'ಐ ಲವ್ ಯೂ' ಎಂದು ಸಂದೇಶ ಕಳುಹಿಸಿ ಪ್ರಾಣಬಿಟ್ಟ ಯುವತಿ! YouTuber
ಮೃತ ಯೂಟ್ಯೂಬರ್ ಬಾನು ಕೋಮಾಲಿ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಯೂಟ್ಯೂಬರ್ ಬೊನು ಕೋಮಾಲಿ ಆತ್ಮಹತ್ಯೆಗೆ ಶರಣು
ತನ್ನ ಅಪಾರ್ಟ್ಮೆಂಟ್ನಲ್ಲಿ ನೇಣು ಹಾಕಿಕೊಂಡು ಪ್ರಾಣಬಿಟ್ಟ ಬೊನು ಕೋಮಾಲಿ
ತನ್ನ ತಾಯಿಗೆ ಮಮ್ಮಿ ಐ ಲವ್ ಯೂ ಎಂಬ ಕೊನೆಯ ಸಂದೇಶ ಕಳುಹಿಸಿದ್ದ ಯೂಟ್ಯೂಬರ್
ತೆಲಂಗಾಣ: ತನ್ನ ಬಾಯ್ಪ್ರೆಂಡ್ ಜೊತೆ ಜಗಳವಾದ ನಂತರ ತನ್ನ ತಾಯಿಗೆ ಐ ಲವ್ ಯೂ ಎಂಬ ಸಂದೇಶವನ್ನು ಕಳುಹಿಸಿ ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಹೈದರಾಬಾದ್ನಲ್ಲಿ ವರದಿಯಾಗಿದೆ.
ಆತ್ಮಹತ್ಯೆಗೆ ಶರಣಾದ ಯುವತಿಯನ್ನು ಬೊನು ಕೋಮಾಲಿ ಎಂದು ಗುರುತಿಸಲಾಗಿದ್ದು ಈಕೆ ಬಿಎಸ್ಇ ಪದವಿಯ ಜೊತೆಗೆ ಪಾರ್ಟ್ಟೈ ಯೂಟ್ಯೂಬರ್ (YouTuber) ಆಗಿ ಕೆಲಸ ಮಾಡುತ್ತಿದ್ದಳೆಂದು ತಿಳಿದು ಬಂದಿದೆ.
ಬೊನು ಕೋಮಾಲಿ ಮೂಲತಃ ಆಂಧ್ರಪ್ರದೇಶದ ವಿಶಾಖಪಟ್ಟಣದ ನಿವಾಸಿಯಾಗಿದ್ದು, ಈಕೆ ಹೈದರಾಬಾದಿನ ಅಪಾರ್ಟ್‌ಮೆಂಟ್ ವೊಂದರಲ್ಲಿ ಒಬ್ಬಂಟಿಯಾಗಿ ವಾಸವಿದ್ದರು. ಈಕೆ ಕಳೆದ 11 ತಿಂಗಳಿಂದ ಯೂಟ್ಯೂಬ್ನಲ್ಲಿ ಜೀವಶೈಲಿ ಹಾಗೂ ವೈಯಕ್ತಿಕ ವಿಡಿಯೋಗಳನ್ನು ರಚಿಸಿ, ಹಂಚಿಕೊಳ್ಳುತ್ತಿದ್ದರು.
ಪೊಲೀಸರ ವರದಿಗಳ ಪ್ರಕಾರ, ಕೋಮಾಲಿ ಅವರ ತಾಯಿ, ಬಿ. ಸತ್ಯಾ ವರಲಕ್ಷ್ಮೀ ಅವರು ಕುವೈತ್ನಲ್ಲಿ ಕೆಲಸ ಮಾಡುತ್ತಾರೆ. ಸೋಮವಾರ (ಫೆ.23) ಮುಂಜಾನೆ ವರಲಕ್ಷ್ಮೀ ಅವರ ಮೊಬೈಲ್ ಗೆ ಕೋಮಾಲಿ ಕಡೆಯಿಂದ ಐ ಲವ್ ಯೂ ಸೋಮಚ್ ಮಮ್ಮಿ, ತಮ್ಮನನ್ನು ಚೆನ್ನಾಗಿ ನೋಡಿಕೊಳ್ಳಿ ಎಂಬ ಸಂದೇಶ ಬಂದಿದೆ.
ಈ ಸಂದೇಶವನ್ನು ನೋಡಿ ಗಾಬರಿಯಾದ ವರಲಕ್ಷ್ಮೀ, ತನ್ನ ಮಗಳಿಗೆ ಎಷ್ಟು ಕರೆ ಮಾಡಿದರು ಮೊಬೈಲ್ ಸ್ವಿಚ್ ಆಫ್ ಬಂದಿದೆ. ನಂತರ ಅವರು ತಮ್ಮ ಸ್ನೇಹಿತರೊಬ್ಬರಿಗೆ ತಮ್ಮ ಮಗಳ ಪ್ಲಾಟ್ಗೆ ಹೋಗಲು ಹೇಳಿದ್ದಾರೆ. ಮಧ್ಯಾಹ್ನದ ವೇಳೆ ಪ್ಲಾಟ್ಗೆ ತಲುಪಿದ ಅವರು ಬಾಹಿಲನ್ನು ಒಡೆದು ಮನೆಯನ್ನು ಪ್ರವೇಶಿಸಿದ್ದಾರೆ. ಆಗ ಅವರಿಗೆ ಕೋಮಾಲಿ ಪ್ಯಾನ್ಗೆ ನೇಣು ಬೀಗಿದು ನೇತಾಡುತ್ತಿರುವುದು ಕಂಡುಬಂದಿದೆ.
ಪ್ರಾಥಮಿಕ ವರದಿಗಳ ಪ್ರಕಾರ, ಕೋಮಾಲಿಯ ಸಾವು ನೇಣು ಬಿಗಿದ ಪರಿಣಾಮವೇ ಆಗಿದ್ದು, ಪ್ರೀಯಕರನಿಂದ ನೋವನ್ನು ಅನುಭವಿಸಿದ ಹಿನ್ನಲೆ ಕೋಮಾಲಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೊನು ಕೋಮಾಲಿಯು 27 ವರ್ಷದ ಸಾಪ್ಟ್ವೇರ್ ಇಂಜಿನಿಯರ್ ಮತ್ತು ಯೂಟ್ಯೂಬರ್ ಒಬ್ಬನನ್ನು ಪ್ರೀತಿಸುತ್ತಿದ್ದು, ಅವನು ಇಕೆಯಿಂದ ಬೇರಾದ ಹಿನ್ನಲೆಯಲ್ಲಿ ಈಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆರು ತಿಂಗಳ ಹಿಂದೆ ಸಹ ಕೋಮಾಲಿ ಆತ್ಮಹತ್ಯೆಗೆ ಯತ್ನಿಸಿದ್ದಳೆಂದು ಪೊಲೀಸ್ ಮೂಲಗಳು ತಿಳಿಸಿವೆ.
ಈಕೆಯ ಸಾವಿನ ನಿಖರವಾದ ಸಮಯ ಮತ್ತು ಸಂದರ್ಭವನ್ನು ಗುರುತಿಸಲು ನೆರೆಹೊರೆಯವರ ಮತ್ತು ಸ್ನೇಹಿತರಿಂದ ದಾಖಲೆಗಳು, ಸಂದೇಶಗಳು ಹಾಗೂ ಹೇಳಿಕೆಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ,(ಏಜನ್ಸೀಸ್).