ರಾಜನಾಥ್ ಸಿಂಗ್ ಅವರ ವಿರುದ್ಧ ಕಿಡಿಕಾರಿರುವ ಟ್ಯಾಗೋರ್, ರಾಜನಾಥ್ ಜಿ ಹೇಳಿಕೆಗಳು ಇತಿಹಾಸದ ಬಗ್ಗೆ ಅಲ್ಲ. ಅವು ರಾಜಕೀಯದ ಬಗ್ಗೆ -ವರ್ತಮಾನವನ್ನು ವಿಭಜಿಸಲು ಭೂತಕಾಲವನ್ನು ಪುನಃ ಬರೆಯುವುದಾಗಿದೆ. ನಮ್ಮ ಸಂಸ್ಥಾಪಕರನ್ನು ಅವಮಾನಿಸುವುದು, ಕಥೆಗಳನ್ನು ಸೃಷ್ಟಿಸುವುದು, ಧ್ರುವೀಕರಣಕ್ಕೆ ಇಂಧನ ತುಂಬುವುದು ಬಿಜೆಪಿಯ ಸರಳ ತಂತ್ರವಾಗಿದೆ. ಗೋಡ್ಸೆ ಅನುಯಾಯಿಗಳು ನೆಹರೂ ಅಥವಾ ಪಟೇಲ್ ಅವರ ಪರಂಪರೆಯನ್ನು ವಿರೂಪಗೊಳಿಸಲು ನಾವು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.