ತಮಿಳುನಾಡು ರಾಜಕೀಯದಿಂದಾಗಿ ನನಗೆ ಹಿಂದಿ ಕಲಿಯಲು ಸಾಧ್ಯವಾಗಲಿಲ್ಲ; ಕೇಂದ್ರ ಸಚಿವ ಎಲ್​. ಮುರುಗನ್​ | L Murugan

ಕೇಂದ್ರ ರಾಜ್ಯ ಖಾತೆ ಸಚಿವ ಎಲ್. ಮುರುಗನ್
ಕೇಂದ್ರ ರಾಜ್ಯ ಖಾತೆ ಸಚಿವ ಎಲ್. ಮುರುಗನ್
Published on
ವಾರಾಣಸಿ: ತಮಿಳುನಾಡಿನ ರಾಜಕೀಯದಿಂದಾಗಿ ನನಗೆ ಹಿಂದಿ ಕಲಿಯಲು ಸಾಧ್ಯವಾಗಲಿಲ್ಲ. ದೆಹಲಿಗೆ ಬಂದ ನಂತರವೇ ಹಿಂದಿ ಕಲಿತೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಎಲ್. ಮುರುಗನ್(L Murugan) ಮಂಗಳವಾರ(ಡಿ. 02) ಹೇಳಿದ್ದಾರೆ.
ಕಾಶಿ ತಮಿಳು ಸಂಗಮ 4.0 ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿರುವ ಅವರು, ಈಗ ಪ್ರಧಾನಿ ಮೋದಿ ನೇತೃತ್ವದಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಹೊಸ ಶಿಕ್ಷಣ ನೀತಿಯನ್ನು ತಂದಿದ್ದಾರೆ. ಆದರೆ ಹಿಂದಿನ ನಮ್ಮ ತಮಿಳುನಾಡಿನ ರಾಜಕೀಯದಿಂದಾಗಿ, ನನಗೆ ಹಿಂದಿ ಕಲಿಯಲು ಸಾಧ್ಯವಾಗಲಿಲ್ಲ. ನಾನೇನಾದ್ರೂ ಹಿಂದಿ ಕಲಿತಿದ್ದರೆ ಅದು, ದೆಹಲಿಗೆ ಬಂದ ಬಳಿಕ, ನನ್ನ ಹಿಂದಿ ಅಷ್ಟೊಂದು ಸ್ಪಷ್ಟತೆ ಇಲ್ಲ. ಏನಾದರೂ ತಪ್ಪಾಗಿ ಮಾತನಾಡಿದರೆ ದಯವಿಟ್ಟು ನನ್ನನ್ನು ಕ್ಷಮಿಸಿ ಎಂದಿದ್ದಾರೆ.
ಹಿಂದಿ ಕಲಿಯುವುದು ನನ್ನ ಹಕ್ಕು, ನಾನು ಹಿಂದಿ ಕಲಿಯುತ್ತೇನೆ. ಆದರೆ ತಮಿಳುನಾಡಿನಲ್ಲಿ ನನಗೆ ಹಿಂದಿ ಕಲಿಯುವ ಅವಕಾಶವನ್ನು ನಿರಾಕರಿಸಲಾಗುತ್ತಿದೆ? ಎಂದು ಕಿಡಿಕಾರಿದ್ದಾರೆ.
NEP ಶಿಫಾರಸು ಮಾಡಿದ ತ್ರಿಭಾಷಾ ಸೂತ್ರವು ವಿವಾದದ ಕೇಂದ್ರಬಿಂದುವಾಗಿದೆ, ತಮಿಳುನಾಡು ಇದನ್ನು ಜಾರಿಗೆ ತರಲು ನಿರಾಕರಿಸಿದೆ, ಕೇಂದ್ರವು ಹಿಂದಿಯನ್ನು ಹೇರುತ್ತಿದೆ ಎಂದು ಆರೋಪಿಸಿದೆ. ಆದರೆ ಕೇಂದ್ರವು ತಮಿಳುನಾಡಿನ ಆರೋಪವನ್ನು ನಿರಾಕರಿಸಿದೆ.
ಧರ್ಮೇಂದ್ರ ಪ್ರಧಾನ್ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಂಗಳವಾರ ಜಂಟಿಯಾಗಿ ಕಾಶಿ-ತಮಿಳು ಸಂಗಮ 4.0 ರ ನಾಲ್ಕನೇ ಆವೃತ್ತಿಯನ್ನು ಉದ್ಘಾಟಿಸಿದರು. ವಾರಣಾಸಿಯ ನಮೋ ಘಾಟ್‌ನಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಇದು ಕಾಶಿ ಮತ್ತು ತಮಿಳುನಾಡಿನ ಮಹಾನ್ ವ್ಯಕ್ತಿಗಳ ಜೀವನ ತತ್ವಶಾಸ್ತ್ರಗಳು ಮತ್ತು ಸಾರ್ವಜನಿಕ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರವು ಕೈಗೊಂಡಿರುವ ಕಾರ್ಯಗಳನ್ನು ಎತ್ತಿ ತೋರಿಸುತ್ತದೆ ಎನ್ನಲಾಗಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net