ಮಹಾರಾಷ್ಟ್ರದಲ್ಲಿ ಕಳೆದ ಕೆಲವು ವಾರಗಳಿಂದ ಭಾರಿ ರಾಜಕೀಯ ಹೈಡ್ರಾಮಾ ನಡೆಯುತ್ತಿದ್ದು, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ (ಯುಬಿಟಿ) ಪಕ್ಷದ 6 ಜನ ಲೋಕಸಭಾ ಸಂಸದರು ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಮೂಲ ಶಿವಸೇನಾ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಸಂಸದರಾದ ಸಂಜಯ್ ಹರಿಭಾವು ಜಾಧವ್, ಸಂಜಯ್ ದಿನಾ ಪಾಟೀಲ್, ಸಂಜಯ್ ಉತ್ತಮ್‌ರಾವ್ ದೇಶ್‌ಮುಖ್, ಭೌಸಾಹೇಬ್ ರಾಜಾರಾಮ್ ವಾಕ್‌ಚೌರೆ, ಓಂಪ್ರಕಾಶ್ ಭೂಪಾಲ್‌ಸಿಂಗ್ ನಿಂಬಾಳ್ಕರ್ ಮತ್ತು ನಾಗೇಶ್ ಬಾಪುರಾವ್ ಪಾಟೀಲ್ ಅಷ್ಟೀಕರ್ ಪಕ್ಷಾಂತರ ಮಾಡಿದ ಪ್ರಮುಖರಾಗಿದ್ದಾರೆ.