ಬಾಹ್ಯಾಕಾಶದಲ್ಲೂ ಮಿನುಗಿದ 'ನೈಲ್ ನದಿ': ನಾಸಾ ಗಗನಯಾತ್ರಿಯ ಕ್ಯಾಮೆರಾದಲ್ಲಿ ಸೆರೆಯಾಯ್ತು ಅಚ್ಚರಿಯ ನೋಟ! NASA

NASA (ಚಿತ್ರ X)
NASA (ಚಿತ್ರ X)
Published on
NASA: ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ನಾಸಾದ ಗಗನಯಾತ್ರಿ ಜೆಸ್ಸಿಕಾ ಮೀರ್, ಭೂಮಿಯ ಅತ್ಯಂತ ಉದ್ದದ 'ನೈಲ್ ನದಿ'ಯ ಕಣ್ಣುಕೋರೈಸುವ ಛಾಯಾಚಿತ್ರಗಳನ್ನು ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದಾರೆ.

ಪೋಸ್ಟ್​ನಲ್ಲೇನಿದೆ?

ನಿಮ್ಮ ಹೊಸ ವಾರವನ್ನು ಉಲ್ಲಾಸದಿಂದ ಶುರು ಮಾಡಲು ಪ್ರಕೃತಿ ತಾಯಿ ನೀಡಿದ ಒಂದು ಸುಂದರ ಕಲಾಕೃತಿ ಇಲ್ಲಿದೆ. ಇಂದು ಅದರಲ್ಲಿ ಪ್ರಸಿದ್ಧ ನೈಲ್ ನದಿಯ ಅದ್ಭುತ ನೋಟವೂ ಸೇರಿದೆ ಎಂದು ಮೀರ್​ ತಮ್ಮ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.
ಈ ಛಾಯಾಚಿತ್ರಗಳು ಬಾಹ್ಯಾಕಾಶದಿಂದ ಗ್ರಹದ ಸೌಂದರ್ಯವನ್ನು ಪ್ರದರ್ಶಿಸುವುದಲ್ಲದೇ ಭೂದೃಶ್ಯದ ವಿರುದ್ಧ ನೈಲ್​ ನದಿಯ ಅಂಕುಡೊಂಕಾದ ಮಾರ್ಗಗಳನ್ನು ಎತ್ತಿ ತೋರಿಸುತ್ತವೆ. ಈ ಚಿತ್ರಗಳು ಭೂಮಿಯ ಸೈಸರ್ಗಿಕ ಮಾದರಿಗಳು ಮತ್ತು ಬಣ್ಣಗಳನ್ನು ಸೆರೆಹಿಡಿಯುತ್ತವೆ. ಜೊತೆಗೆ ನೆಲದಿಂದ ಅಪರೂಪಕ್ಕೆ ಕಾಣುವ ವಿಶಿಷ್ಟ ದೃಷ್ಟಿಕೋನವನ್ನು ನೀಡುತ್ತವೆ.
ಮೀರ್ ಅವರ ಪೋಸ್ಟ್ ನೈಲ್ ನದಿಯನ್ನು ಪ್ರಕೃತಿಯ ಸೌಂದರ್ಯದ ಗಮನಾರ್ಹ ಉದಾಹರಣೆಯಾಗಿ ಪ್ರಸ್ತುತಪಡಿಸುತ್ತದೆ, ಇದನ್ನು "ಪ್ರಕೃತಿ ತಾಯಿಯ ಭೂಮಿಯ ಕಲೆ"ಯ ಭಾಗವೆಂದು ವಿವರಿಸುತ್ತದೆ.

ಸಾಮಾಜಿಕ ಮಾಧ್ಯಮ ಪ್ರತಿಕ್ರಿಯೆ

ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆಯೇ ಅನೇಕ ಬಳಕೆದಾರರನ್ನು ಸೆಳೆಯಿತು. ಅನೇಕರು ಬಾಹ್ಯಾಕಾಶದಿಂದ ವಿಶ್ವದ ಅತ್ಯಂತ ಪ್ರಸಿದ್ಧ ನದಿಗಳಲ್ಲಿ ಒಂದಾದ ಅದ್ಭುತ ನೋಟವನ್ನು ಮೆಚ್ಚಿದರು. ಈ ಛಾಯಾಚಿತ್ರಗಳು ಗ್ರಹದ ಸುತ್ತ ಸುತ್ತುತ್ತಿರುವ ಗಗನಯಾತ್ರಿಗಳ ಕಣ್ಣುಗಳ ಮೂಲಕ ಭೂಮಿಯ ಸೌಂದರ್ಯವನ್ನು ನೆನಪಿಸುತ್ತವೆ ಎಂದು ಕಾಮೆಂಟ್​ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ನೆಚ್ಚಿನದನ್ನು ಆಯ್ಕೆ ಮಾಡುವುದು ಕಷ್ಟ. ಸುಂದರವಾದ ಕೆಲಸ! ಎಂದು ಕಾಮೆಂಟ್ ಮಾಡಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net