ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿಯ ಪ್ರಮುಖ ಲೇಖಕಿ ಶಾನನ್ ಬ್ರೌನ್ ಅವರ ಪ್ರಕಾರ, ಸೌರಮಂಡಲದಲ್ಲಿ ಗುರುತ್ವಾಕರ್ಷಣೆಯ ಉಷ್ಣತೆ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಅರ್ಥೈಸಿಕೊಳ್ಳಲು 'ಐಒ' ಒಂದು ಉತ್ತಮ ಕಿಟಕಿ. ಇದು ಕೇವಲ ಜ್ವಾಲಾಮುಖಿ ಸೃಷ್ಟಿಸುವುದಷ್ಟೇ ಅಲ್ಲದೆ, ಯುರೋಪಾ ಮತ್ತು ಗ್ಯಾನಿಮೀಡ್ನಂತಹ ಗ್ರಹಗಳ ಮಂಜಿನ ಅಡಿಯ ಮಹಾಸಾಗರಗಳು ಹೆಪ್ಪುಗಟ್ಟದಂತೆ ಕಾಯ್ದುಕೊಳ್ಳಲು ನೆರವಾಗುತ್ತದೆ.