

ನವದೆಹಲಿ: ಮಹಾರಾಷ್ಟ್ರದಲ್ಲಿ ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ಮತ ಪಟ್ಟಿ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಬರೊಬ್ಬರಿ 3 ಕೋಟಿ ಮತದಾರರ ಹೆಸರುಗಳನ್ನು ಕೈಬಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ನೋಟಿಸ್ ನೀಡಿ ಆದೇಶಿಸಿದೆ. ಈ ಪ್ರಕರಣದ ವಿಚಾರಣೆ ನವೆಂಬರ್ 5 ರಂದು ಆರಂಭವಾಗಲಿದೆ. ನವೆಂಬರ್ 6 ರಂದು ಈ ಪ್ರಕ್ರಿಯೆ ಮುಕ್ತಾಯವಾಗಲಿದ್ದು, ಹೀಗಾಗಿ ಅರ್ಜಿದಾರರು, ಪ್ರಕಿಯೆ ಮುಗಿಯುವ ಮೊದಲೇ ವಿಚಾರಣೆ ಪ್ರಾರಂಭಿಸುವಂತೆ ಕೇಳಿಕೊಂಡಿದ್ದರು.
ಮುಖ್ಯನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ಚಿ ಮತ್ತು ವಿ. ಮಹಾದೇವನ್ ಅವರ ನ್ಯಾಯಪೀಠಕ್ಕೆ ಸಲ್ಲಿಕೆಯಾದ ಈ ಅರ್ಜಿಯಲ್ಲಿ, ರಾಜ್ಯದಲ್ಲಿ ನಡೆಯುತ್ತಿರುವ ಎಸ್ಐಆರ್ ಪ್ರಕ್ರಿಯೆಯಲ್ಲಿ ಶೇ. 33 ರಷ್ಟು ಮತದಾರರ ಹೆಸರುಗಳನ್ನು ತಾಂತ್ರಿಕ ಕಾರಣದಿಂದ ಕೈಬಿಡಲಾಗಿದೆ, ಹಾಗೂ ಅವರಿಗೆ ನೋಟಿಸ್ ನೀಡಿದ್ದಾರೆ.
ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ಸೇರಿಸಲು ಅರ್ಜಿ ಸಲ್ಲಿಸಲು ಸೋಮವಾರ (ಅ. 26) ಕೊನೆಯ ದಿನವಾಗಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠವು, ಹೆಸರನ್ನು ಸೇರಿಸಿಕೊಳ್ಳಲು ದಿನವನ್ನು ಮುಂದೂಡಬೇಕೆಂದು ಪರಾಮರ್ಶಿಸುವುದಾಗಿ ತಿಳಿಸಿ, ಚುನಾವಣಾ ಆಯೋಗಕ್ಕೆ ನೋಟಿಸ್ ನೀಡಿದೆ.
ಅರ್ಜಿದಾರರಾದ ಅರುಣ್ ಆನನ್ದಗಿರಿ ಪರವಾಗಿ ವಾದ ಮಂಡಿಸಿದ, ಹಿರಿಯ ವಕೀಲ ಅರವಿಂದ್ ಪಿ. ದಾತರ್, ಮಹಾರಾಷ್ಟಸದಲ್ಲಿ ಸುಮಾರು 9 ಕೋಟಿ ಮತದಾರರಿದ್ದಾರೆ. ಆದರೆ, ಇಲ್ಲಿವರೆಗೆ ನಡೆದಿರುವ ಎಸ್ಐಆರ್ ಪ್ರಕ್ರಿಯೆಯಲ್ಲಿ ಸುಮಾರು 3 ಕೋಟಿ ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ. ಫಾರ್ಮ್ 6 ರಲ್ಲಿ ಯಾರ ಹೆಸರಿಲ್ಲವೋ ಅವರ ಹೆಸರನ್ನು ಅಂತಿಮ ಪಟ್ಟಿಯಿಂದ ಕೈ ಬಿಡಲಾಗಿದೆ ಎಂದಿದ್ದಾರೆ.
ಈ ಫಾಮ್ 6 ಎನ್ನುವುದು ಮೊದಲ ಬಾರಿಗೆ ಮತದಾನ ಮಾಡಲಿರುವ ಹೊಸ ಮತದಾರರಿಗೆ ಆಗಿದೆ. ಹೀಗಾಗಿ ಇದನ್ನು ಈ ಮೊದಲು ಮತ ಚಲಾಯಿಸಿರುವವರಿಗೆ ಕಡ್ಡಾಯ ಮಾಡಬಾರದು ಎಂದಿದ್ದಾರೆ. ಹಾಗೆಯೇ, ಮುಂಬೈ ಮತ್ತು ಪುಣೆಯಲ್ಲಿ ಸುಮಾರು 3,500 ಕ್ಕೂ ಹೆಚ್ಚಿನ ಸ್ಥಳಗಳನ್ನು ಅದರಲ್ಲೂ ಜನಗಳ ವಾಸವಿದ್ದ ಅಪಾರ್ಟ್ಮೆಂಟ್ ಸೇರಿದಂತೆ ವಸತಿ ಕೇಂದ್ರಗಳನ್ನು ಕೆಡವಲಾಗಿದೆ. ಅಲ್ಲಿ ವಾಸಿಸುತ್ತಿದ್ದ ಜನರು ಬೇರೆಡೆ ಸ್ಥಳಾಂತರವಾಗಿದ್ದಾರೆ. ಇಂತವರ ವಿಳಾಸ ಮತ್ತು ಇತರ ವಿವಿವರಗಳನ್ನು ಪರಿಶೀಲಿಸಲು ಸಾಧ್ಯವಾಗದಿದ್ದರೆ, ಅವರ ಹೆಸರುಗಳು ಮತದಾರರ ಪಟ್ಟಿಯಿಂದ ಕೈಬಿಟ್ಟುಹೋಗುವ ಅಪಾಯವಿದೆ ಎಂದು ಎಚ್ಚರಿಸಿದ್ದಾರೆ.
ಅರ್ಜಿದಾರರ ಪರ ವಕೀಲರು, ರಾಜ್ಯದಲ್ಲಿ ನಡೆಯುತ್ತಿರುವ ಎಸ್ಐಆರ್ ಪ್ರಕ್ರಿಯೆಗೆ ತಡೆ ನೀಡುವಂತೆ ಕೋರಿದಾಗ, ಮುಖ್ಯನ್ಯಾಯಮೂರ್ತಿಗಳು, ಪ್ರಕ್ರಿಯೆಗೆ ತಡೆ ನೀಡಲು ಸಾಧ್ಯವಿಲ್ಲ. ನೀವು, ಅಲ್ಲಿರುವ ಸಮಸ್ಯೆಯನ್ನು ಗುರುತಿಸಿ, ನಮ್ಮಲ್ಲಿ ಬಂದಿದ್ದಿರಿ, ಏನೂ ಚಿಂತೆ ಮಾಡಬೇಡಿ. ನಾವು ಈ ಮೊದಲು, ಎಸ್ಐಆರ್ ಪ್ರಕ್ರಿಯೆಯ ದಿನಾಂಕವನ್ನು ಮುಂದೂಡಿದದ್ದೇವೆ. ನಿಮ್ಮ ವಾದದ ಪ್ರಕಾರ, ಜನರ ಹೆಸರನ್ನು ಅಧಿಕವಾಗಿ ಕೈ ಬಿಟ್ಟಿದ್ದಾರೆ, ಹೀಗಾಗಿ, ಅಂತವರು ತಮ್ಮ ಹೆಸರನ್ನು ಸೇರಿಸಿಕೊಳ್ಳಲು ಸಮಯವಕಾಶವನ್ನು ನೀಡಲಾಗುವುದೆಂದು ನ್ಯಾಯಪೀಠ ತಿಳಿಸಿದೆ, (ಏಜೆನ್ಸೀಸ್).