ಜೈಲಿನಿಂದ ಬಂದವನಿಂದ "ಟೈಗರ್"​​ ಕೊಲೆಗೆ ಸ್ಕೆಚ್​! ಮಾಸ್ಟರ್​ಮೈಂಡ್​ ಅನಿಲ್​ ಪಂಡಿತ್​ ಶಿಷ್ಯ ಪ್ರಾಂಜಲ್​ ಠಕ್ರಲ್ ಅರೆಸ್ಟ್​! Pranjal Thakral

Pranjal Thakral, the accused arrested by the Mumbai Police in the Tiger Shroff attempted murder case.
ಟೈಗರ್ ಶ್ರಾಫ್ ಕೊಲೆ ಯತ್ನ ಪ್ರಕರಣದಲ್ಲಿ ಮುಂಬೈ ಪೊಲೀಸರಿಂದ ಬಂಧಿತನಾದ ಆರೋಪಿ ಪ್ರಾಂಜಲ್ ಠಕ್ರಲ್
Published on: 

ಮುಂಬೈ: ಬಾಲಿವುಡ್​ ನಟ ಟೈಗರ್ ಶ್ರಾಫ್​ ಮೇಲೆ ನಡೆದಿರುವ ಗುಂಡಿನ ದಾಳಿ ಪ್ರಕರಣ ದಿನಕ್ಕೊಂದು ತಿರುವನ್ನು ಪಡೆದುಕೊಳ್ಳುತ್ತಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮುಂಬೈ ಪೊಲೀಸರು, ತನಿಖೆ ಚುರುಕುಗೊಳಿಸಿದ್ದು, ಶುಕ್ರವಾರ (ಅ. 23) ಈ ಪ್ರಕರಣಕ್ಕೆ ಸಂಬಂಧ ಪಟ್ಟ ಇನ್ನೊಬ್ಬ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಶುಕ್ರವಾರ, ಮುಂಬೈ ಪೊಲೀಸರು ಪ್ರಾಂಜಲ್​ ಠಕ್ರಲ್ ಎಂಬಾತನನ್ನು ವಶಕ್ಕೆ ಪಡೆದಿದ್ದು, ಇಲ್ಲಿವರೆಗೆ ಬಂಧಿತರಾದ ಸಂಖ್ಯೆ 11 ಕ್ಕೇರಿದೆ. ಬಂಧಿತ ಆರೋಪಿ ಪ್ರಾಂಜಲ್ ಠಕ್ರಲ್, 22 ವರ್ಷದವನಾಗಿದ್ದು, ಟೈಗರ್ ಮೇಲೆ ಗುಂಡನ್ನು ಹಾರಿಸಿದವರಿಗೆ ಶಸ್ತ್ರಾಸ್ತ್ರ ಪೂರೈಕೆ ಹಾಗೂ ಈ, ಕೊಲೆ ಯತ್ನದ ಮಾಸ್ಟರ್​ಮೈಂಡ್​ ಆಗಿರುವ ಅನಿಲ್ ಪಂಡಿತ್​ನ ಜತೆ ನಿರಂತರ ಸಂಪರ್ಕ ಹೊಂದಿದ್ದಾಗಿ ತಿಳಿದು ಬಂದಿದೆ.

ಪೊಲೀಸರು ಈ ಪ್ರಾಂಜಲ್ ಠಕ್ರಲ್ ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಇವನು ಅನಿಲ್​ ಪಂಡಿತ್​ ಜತೆ ಯಾವುದೋ ಗೌಪ್ಯ ಅಪ್ಲೀಕೇಶನ್ ಮೂಲಕ ಸಂವಹನ ನಡೆಸುತ್ತಿದ್ದನೆಂದು ಹೇಳಲಾಗುತ್ತಿದೆ. ಇವನು ಈ ಮೊದಲು ಅನಿಲ್​ ಪಂಡಿತ್​ ಜತೆ ಕೆಲಸ ಮಾಡಿದ್ದಾಗಿ ತಿಳಿದುಬಂದಿದ್ದು, ಇವನ ಮೂಲಕ ಅನಿಲ್​ ಪಂಡಿತ್​ನನ್ನು ತಲುಪಬಹುದು ಎನ್ನುವುದು ಪೊಲೀಸರ ಲೆಕ್ಕಾಚಾರವಾಗಿದೆ.

ಯಾರೂ ಈ ಪ್ರಾಂಜಲ್ ಠಕ್ರಲ್?

ಮುಂಬೈ ಪೊಲೀಸರ ವಶದಲ್ಲಿರುವ ಪ್ರಾಂಜಲ್ ಠಕ್ರಲ್, ಮಧ್ಯಪ್ರದೇಶ ರಾಜ್ಯದ ನಿವಾಸಿ ಎನ್ನಲಾಗಿದ್ದು, ಇವನಿ ಇಂಜಿನಿಯರಿಂಗ್​ನಲ್ಲಿ ಡಿಪ್ಲೋಮಾ ಪದವಿ ಪಡೆದಿದ್ದಾನೆ. ಇವನು ಮಾರ್ಚ್​ ತಿಂಗಳಲ್ಲಿ ಸೋನಿಪತ್​ನ ಉದ್ಯಮಿಯೊಬ್ಬನ ಮೇಲೆ ಹಲ್ಲೆ ನಡೆದಿದ್ದ ಪ್ರಕರಣದಲ್ಲಿ ಜೈಲು ಸೇರಿದ್ದು, ಕೆಲ ದಿನಗಳ ಹಿಂದಷ್ಟೆ ಜಾಮೀನಿನ ಮೇಲೆ ಹೊರಬಂದಿದ್ದ, ಆ ಉದ್ಯಮಿ ಮೇಲೆ ದಾಳಿ ಮಾಡಲು ಕೂಡ ಈ ಅನಿಲ್​ ಪಂಡಿತ್​ ಎಂಬಾತನೇ ಸುಪಾರಿ ನೀಡಿದ್ದಾಗಿ ತಿಳಿದುಬಂದಿದೆ.

Also Read
"ಭಾರತ ಸರ್ಕಾರದಿಂದ ನ್ಯಾಯ ಸಿಗಲ್ಲ", "ಪಾಕಿಸ್ತಾನವೇ ಕಾಶ್ಮೀರವನ್ನು ರಕ್ಷಿಸುತ್ತಿದೆ!" ಫಾರೂಕ್ ಅಬ್ದುಲ್ಲಾ ವಿವಾದಾತ್ಮಕ ಹೇಳಿಕೆ! Farooq Abdullah
Pranjal Thakral, the accused arrested by the Mumbai Police in the Tiger Shroff attempted murder case.

ಜಾಮೀನಿನ ಮೇಲೆ ಹೊರಬಂದ, ಈ ಪ್ರಾಂಜಲ್​ನನ್ನು, ಅನಿಲ್​ ಪಂಡಿತ್​ ಸಂಪರ್ಕಿಸಿ, ಮುಂಬೈನಲ್ಲಿ ಮಾಡಬೇಕಾದ ಕೆಲಸಕ್ಕೆ, ಎಲ್ಲಾ ರೀತಿಯ ಪೂರಕ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ನಿರ್ದೇಶಿಸಿದ್ದಾನೆ. ಅಂತಯೇ, ಈ ಪ್ರಾಂಜಲ್, ಅನಿಲ್​ ಪಂಡಿತ್​ ಜತೆ ಸೇರಿಕೊಂಡು, ಟೈಗರ್​ ಮೇಲೆ ದಾಳಿಯ ನೀಲನಕ್ಷೆ ರಚಿಸಿದ್ದಾನೆಂದು ಮುಂಬೈ ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.

ಇವನನ್ನು ವಶಕ್ಕೆ ಪಡೆದ ನಂತರ, ರಜಾಕಾಲೀನ ಪೀಠದ ಮುಂದೆ ಇವನನ್ನು ಕರೆದೊಯ್ಯಲಾಗಿದೆ. ನ್ಯಾಯಾಲಯ ಅಕ್ಟೋಬರ್​ 31 ರ ವರೆಗೆ ಪೊಲೀಸ್​ ಕಸ್ಟಡಿಗೆ ಇವನನ್ನು ಒಪ್ಪಿಸಿ ಆದೇಶಿಸಿದೆ. ಈ ಪ್ರಾಂಜಲ್ ಠಕ್ರಲ್​ನ ಬಂಧನ, ಈ ಪ್ರಕರಣದಲ್ಲಿ ನಡೆದಿರುವ ದೊಡ್ಡ ಬೆಳವಣಿಗೆಯಾಗಿದ್ದು, ಮುಂದೇನಾಗಲಿದೆ ಎನ್ನುವುದಕ್ಕೆ ಕಾಲವೇ ಉತ್ತರಿಸಬೇಕಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net