ಮೀಸೆ, ಗಡ್ಡದೊಂದಿಗೆ ಜನಿಸಿದ ನವಜಾತ ಶಿಶು! ಅಂತರ್ಜಾಲದಲ್ಲಿ ವೈರಲ್​ ಆಗಿರುವ ವಿಡಿಯೋ ಅಸಲಿಯೋ, ನಕಲಿಯೋ? Mustache Baby

Mustache Baby : ಸಾಮಾನ್ಯವಾಗಿ ನವಜಾತ ಶಿಶುಗಳು ಅತ್ಯಂತ ಮೃದುವಾದ ಚರ್ಮ ಮತ್ತು ದೇಹದ ಮೇಲೆ ಸಣ್ಣ ನಯವಾದ ಕೂದಲಿನೊಂದಿಗೆ ಜನಿಸುತ್ತವೆ. ಮಗುವಿನ ಬೆಳವಣಿಗೆಯ ಜತೆಗೆ ದೇಹದ ಮೇಲಿರುವ ಈ ಸಣ್ಣ ಕೂದಲುಗಳು ತಾವಾಗಿಯೇ ಉದುರಿಹೋಗುತ್ತವೆ.
Mustache Baby
ಮೀಸೆ, ಗಡ್ಡದೊಂದಿಗೆ ಜನಿಸಿದ ನವಜಾತ ಶಿಶು
Published on: 

Mustache Baby : ಸಾಮಾನ್ಯವಾಗಿ ನವಜಾತ ಶಿಶುಗಳು ಅತ್ಯಂತ ಮೃದುವಾದ ಚರ್ಮ ಮತ್ತು ದೇಹದ ಮೇಲೆ ಸಣ್ಣ ನಯವಾದ ಕೂದಲಿನೊಂದಿಗೆ ಜನಿಸುತ್ತವೆ. ಮಗುವಿನ ಬೆಳವಣಿಗೆಯ ಜತೆಗೆ ದೇಹದ ಮೇಲಿರುವ ಈ ಸಣ್ಣ ಕೂದಲುಗಳು ತಾವಾಗಿಯೇ ಉದುರಿಹೋಗುತ್ತವೆ. ಆದರೆ, ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋವೊಂದು ನೆಟ್ಟಿಗರನ್ನು ಅಕ್ಷರಶಃ ದಂಗಾಗಿಸಿದೆ. ಆಸ್ಪತ್ರೆಯ ಹಾಸಿಗೆಯ ಮೇಲೆ ನೀಲಿ ಬಣ್ಣದ ಹೊದಿಕೆಯಲ್ಲಿ ಮಲಗಿರುವ ನವಜಾತ ಶಿಶುವೊಂದರ ಮುಖದಲ್ಲಿ ದಟ್ಟವಾದ ಕಪ್ಪು ಮೀಸೆ ಮತ್ತು ಗಡ್ಡ ಪ್ರತ್ಯಕ್ಷವಾಗಿದ್ದು, ಈ ದೃಶ್ಯ ಜಾಲತಾಣಗಳಲ್ಲಿ ಭಾರೀ ಸಂಚಲನ ಮೂಡಿಸಿದೆ.

ಸಾಮಾಜಿಕ ಜಾಲತಾಣವಾದ ಟಿಕ್‌ಟಾಕ್‌ನ '@Chevisjunior' ಹೆಸರಿನ ಖಾತೆಯಲ್ಲಿ ಮೊದಲು ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ, ಆಸ್ಪತ್ರೆಯ ಹಾಸಿಗೆಯ ಮೇಲಿರುವ ಪುಟ್ಟ ಮಗು ತನ್ನ ಕಣ್ಣುಗಳನ್ನು ತೆರೆದು ಮುಗುಳು ನಗುತ್ತದೆ. ಮಗುವಿನ ಗಡ್ಡ ಮತ್ತು ದಟ್ಟವಾದ ಕಪ್ಪು ಮೀಸೆ ಈ ವೀಡಿಯೋದ ಪ್ರಮುಖ ಆಕರ್ಷಣೆಯಾಗಿದ್ದು, ಪ್ರಸ್ತುತ ಟ್ವಿಟರ್ (X) ಹಾಗೂ ಇನ್‌ಸ್ಟಾಗ್ರಾಮ್ ಸೇರಿದಂತೆ ಎಲ್ಲಾ ಜಾಲತಾಣ ವೇದಿಕೆಗಳಲ್ಲೂ ಕೋಟ್ಯಂತರ ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ. ಮಗುವಿನ ಈ ವಿಚಿತ್ರ ಹಾಗೂ ಮುದ್ದಾದ ನೋಟವನ್ನು ಕಂಡು ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ.

Also Read
ನಿಮ್ಮ ಬೆಳಗ್ಗಿನ ಈ 5 ಅಭ್ಯಾಸಗಳೇ ಕಿಡ್ನಿ ಆರೋಗ್ಯಕ್ಕೆ ಪೆಟ್ಟು ಕೊಡುತ್ತಿದೆ ಎಚ್ಚರ! ಈ ಅಭ್ಯಾಸಗಳಿದ್ದರೆ ಇಂದೇ ಬಿಟ್ಟುಬಿಡಿ | Kidney Health
Mustache Baby

ಎಐ ವಿಡಿಯೋನಾ?

ಈ ವಿಡಿಯೋವನ್ನು ವೀಕ್ಷಿಸಿದ ನೆಟ್ಟಿಗರು ಅತ್ಯಂತ ತಮಾಷೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಈ ಮಗು ಶಾಲಾ ತರಗತಿಯನ್ನು ಬಿಟ್ಟು ನೇರವಾಗಿ ಮಧ್ಯವಯಸ್ಸಿನ ಲೈಫ್ ಕ್ರೈಸಿಸ್‌ಗೆ ಕಾಲಿಟ್ಟಿದೆ ಎಂದು ಒಬ್ಬರು ತಮಾಷೆ ಮಾಡಿದರೆ, ಮತ್ತೊಬ್ಬರು ಎರಡು ಗಂಟೆಯ ಈ ಮಗುವಿನ ಮೀಸೆ ನನಗಿಂತ (34 ವರ್ಷ) ಚೆನ್ನಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಆದಾಗ್ಯೂ, ಈ ವೀಡಿಯೋ ನೈಜವಾದುದಲ್ಲ, ಬದಲಾಗಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನವನ್ನು ಬಳಸಿ ಸೃಷ್ಟಿಸಲಾದ ವಿಡಿಯೋ ಎಂದು ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ಘಟನೆಯು ಈಕ್ವೆಡಾರ್, ಮೆಕ್ಸಿಕೋ ಹಾಗೂ ಭಾರತದ ಅಗರ್ತಲಾದಲ್ಲಿ ನಡೆದಿದೆ ಎಂದು ಪ್ರತಿಪಾದಿಸುವ ಹಲವು ವರದಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಆದರೆ, ಈ ವೀಡಿಯೋ ಅಥವಾ ಘಟನೆಗೆ ಸಂಬಂಧಿಸಿದಂತೆ ಯಾವುದೇ ಸ್ಥಳೀಯ ಆಸ್ಪತ್ರೆಯಾಗಲಿ ಅಥವಾ ಮಗುವಿನ ಪೋಷಕರಾಗಲಿ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಇದರಿಂದಾಗಿ ಈ ವಿಡಿಯೋದ ನೈಜತೆಯ ಮೇಲಿನ ಅನುಮಾನಗಳು ಮತ್ತಷ್ಟು ಬಲವಾಗಿವೆ.

ಈ ವಿಡಿಯೋದ ನೈಜತೆಯ ಬಗ್ಗೆ ವೈದ್ಯಕೀಯ ತಜ್ಞರು ತೀವ್ರ ಅನುಮಾನ ವ್ಯಕ್ತಪಡಿಸಿದ್ದಾರೆ. ವೈದ್ಯರ ಪ್ರಕಾರ, ಗರ್ಭದಲ್ಲಿದ್ದಾಗ ಅಥವಾ ಜನನದ ಸಮಯದಲ್ಲಿ ಮಗುವಿನ ದೇಹದ ಮೇಲೆ 'ಲ್ಯಾನುಗೋ' (Lanugo) ಎಂಬ ಅತ್ಯಂತ ತೆಳುವಾದ ಕೂದಲಿನ ಪದರವಿರುವುದು ಸಾಮಾನ್ಯ. ಆದರೆ, ಅದು ಅತ್ಯಂತ ಹಗುರ ಮತ್ತು ತೆಳ್ಳಗಿರುತ್ತದೆಯೇ ಹೊರತು, ವೈರಲ್ ವಿಡಿಯೋದಲ್ಲಿ ತೋರಿಸಿರುವಂತೆ ಇಷ್ಟೊಂದು ದಟ್ಟವಾದ, ಕಪ್ಪು ಮೀಸೆ ಅಥವಾ ಗಡ್ಡದ ರೂಪದಲ್ಲಿ ಬೆಳೆಯಲು ಸಾಧ್ಯವೇ ಇಲ್ಲ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ.

Also Read
ಲಂಡನ್​ನಲ್ಲಿ ರಾಜಾ ಸಾಬ್​ ಬ್ಯೂಟಿ ರಿಧಿ ಕುಮಾರ್:​ ಗ್ಲಾಮರಸ್​ ಫೋಟೋಗಳು​ ವೈರಲ್​..! Riddhi Kumar
Mustache Baby

ಡಿಜಿಟಲ್ ಫ್ಯಾಕ್ಟ್ ಚೆಕ್ ವರದಿ

ಡಿಜಿಟಲ್ ಫ್ಯಾಕ್ಟ್-ಚೆಕಿಂಗ್ ವಿಶ್ಲೇಷಣೆಗಳ ಪ್ರಕಾರ, ಇದು ಸಾಮಾನ್ಯ ನವಜಾತ ಶಿಶುವಿನ ವೀಡಿಯೋಗೆ ಕೃತಕ ಬುದ್ಧಿಮತ್ತೆ (AI) ಮತ್ತು ಡಿಜಿಟಲ್ ಫೇಸ್-ಮ್ಯಾಪಿಂಗ್ ಫಿಲ್ಟರ್ ಬಳಸಿ ಮೀಸೆ ಮತ್ತು ಗಡ್ಡವನ್ನು ಸೇರಿಸಲಾದ ವಿಡಿಯೋ ಆಗಿದೆ. ಮಗುವಿನ ಮುಖ ಚಲಿಸಿದಾಗ ಮೀಸೆಯ ಆಕಾರದಲ್ಲಿ ಸಣ್ಣ ಬದಲಾವಣೆಗಳು ಕಂಡುಬರುತ್ತಿರುವುದು ಇದನ್ನು ಸಾಬೀತುಪಡಿಸುತ್ತದೆ. ಏನೇ ಆದರೂ, ಇದು AI ನಿರ್ಮಿತ ವಿಡಿಯೋ ಆಗಿದ್ದರೂ ಸಹ, ಮೀಸೆ ಹೊತ್ತ ಈ ಮುದ್ದಾದ ಮಗು ಪ್ರಸ್ತುತ ಜಾಲತಾಣಗಳಲ್ಲಿ ನೆಟ್ಟಿಗರಿಗೆ ಭರಪೂರ ಮನರಂಜನೆ ನೀಡುತ್ತಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net