ಕಸಬರಿಗೆ ಹಿಡಿಸಿದ ಪಕ್ಷವನ್ನೇ ಗುಡಿಸಿದ ಸಂಸದರು:​ ಚಡ್ಡಾ ಜೊತೆ ಎಎಪಿ ಬಿಟ್ಟು ಬಿಜೆಪಿ ಸೇರಲಿರುವ ರಾಜ್ಯ ಸಭೆಯ ರಾಜಾಹುಲಿಗಳು ಯಾರು? Raghav Chadha

ತನ್ನ ಜೊತೆಗೆ ಇತರೆ 7 ಜನ ಸಂಸದರನ್ನು ಬಿಜೆಪಿಗೆ ಕರೆತಂದ ರಾಘವ್​
ತನ್ನ ಜೊತೆಗೆ ಇತರೆ 7 ಜನ ಸಂಸದರನ್ನು ಬಿಜೆಪಿಗೆ ಕರೆತಂದ ರಾಘವ್​
Published on

ಪ್ರಮುಖ ಮುಖ್ಯಾಂಶಗಳು

  • ಆಮ್​ ಆದ್ಮಿ ಪಕ್ಷದಿಂದ ಹೊರಬಂದ ರಾಘವ್​ ಚಡ್ಡಾ
  • ಎಎಪಿಯಿಂದ ಬಿಜೆಪಿಗೆ ಜಿಗಿದ ಚಡ್ಡಾ
  • ತನ್ನ ಜೊತೆಗೆ ಇತರೆ 7 ಜನ ಸಂಸದರನ್ನು ಬಿಜೆಪಿಗೆ ಕರೆತಂದ ರಾಘವ್​
ನವದೆಹಲಿ: ಕೆಲ ದಿನಗಳ ಹಿಂದೆ ಆಮ್​ ಆದ್ಮಿ ಪಕ್ಷ (AAP) ದ ರಾಜ್ಯ ಸಭೆಯ ಉಪನಾಯಕ ಸ್ಥಾನದಿಂದ ಕೆಳಗಿಳಿದಿದ್ದ ಸಂಸದ ರಾಘವ್​ ಚಡ್ಡಾ ಇದೀಗ ಭಾರತೀಯ ಜನತಾ ಪಕ್ಷ (BJP) ವನ್ನು ಸೇರಿದ್ದಾರೆ. ಇವರ ಜೊತೆಗೆ ಆಮ್​ ಆದ್ಮಿ ಪಕ್ಷದ 2/3 ಸಂಸದರು ಬಿಜೆಪಿಯನ್ನು ಸೇರಿದ್ದಾರೆ ಎಂದು ಹೇಳಲಾಗುತ್ತಿದೆ.

ರಾಘವ್​ ಜೊತೆ ಬಂದ ಸಂಸದರಾರು?

ರಾಘವ್​ ಚಡ್ಡಾ, ಇದಾಗಲೇ ಎಎಪಿಯನ್ನು ತೊರೆದು ಬಿಜೆಪಿ ಸೇರಿದ್ದರೆ, ಇವರಿಗೆ ಬೆಂಬಲ ಎಂಬಂತೆ ಸ್ವಾತಿ ಮಹಿವಾಲ್​ (ದೆಹಲಿ), ಹರ್ಭಜನ್​ ಸಿಂಗ್ (ಪಂಜಾಬ್​)​, ಸಂದೀಪ್​ ಪಾಠಕ್ (ಪಂಜಾಬ್​)​, ಅಶೋಕ್​ ಮಿತ್ತಲ್ (ಪಂಜಾಬ್​)​, ರಜೀಂದರ್​ ಗುಪ್ತಾ (ಪಂಜಾಬ್​) ಮತ್ತು ವಿಕ್ರಮ್​ ಸಹಾನಿ (ಪಂಜಾಬ್​) ಇವರುಗಳು ಸ್ವಪಕ್ಷವನ್ನು ತೊರೆದು, ಬಿಜೆಪಿ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ.
ಸದ್ಯ ಆಮ್​ ಆದ್ಮಿ ಪಕ್ಷದಲ್ಲಿ 10 ಜನ ಸಂಸದರಿದ್ದು, ಅದರಲ್ಲಿ ರಾಘವ್​ ಚಡ್ಡಾರನ್ನು ಸೇರಿಸಿ 7 ಜನ ಸಂಸದರು ಬಿಜೆಪಿ ಸೇರಲಿದ್ದಾರೆ. ಈ ಮೂಲಕ ರಾಜ್ಯಸಭೆಯಲ್ಲಿದ್ದ ಎಎಪಿ ಸಂಸದರಲ್ಲಿ 2/3 ಸಂಸದರು ಬಿಜೆಪಿ ಪಾಲಾಗರಿದ್ದಾರೆ.

ಪಕ್ಷ ಸರಿಯಾದ ಸ್ಥಾನಮಾನ ನೀಡಿಲ್ಲ!

ಈ ಕುರಿತು ಮಾತನಾಡಿರುವ ರಾಘವ್​ ಚಡ್ಡಾ ನನ್ನ ಜೊತೆ ಈಗ ಪಕ್ಷ ಬಿಡಲು ಮುಂದಾಗುತ್ತಿರುವವರು, ಪಕ್ಷದಲ್ಲಿ ಸುಮಾರು 10-15 ವರ್ಷಗಳಿಂದ ಪಕ್ಷದ ಏಳಿಗೆಗಾಗಿ ದುಡಿದಿದ್ದಾರೆ. ಆದರೆ ಅವರ ಸಾಮರ್ಥ್ಯಕ್ಕೆ ತಕ್ಕ ಸ್ಥಾನಮಾನ ನೀಡದ ಕಾರಣ ಎಎಪಿಯನ್ನು ತೊರೆದು ಬಿಜೆಪಿಯನ್ನು ಸೇರಲಿದ್ದಾರೆ ಎಂದು ಚಡ್ಡಾ ಹೇಳಿದ್ದಾರೆ.

ಇದು ಆಪರೇಷನ್ ಕಮಲದ ಕರಾಳ ಮುಖ

ರಾಘವ್​ ಚಡ್ಡಾ ಮತ್ತು ಇತರ ಎಂಪಿಗಳು ಬಿಜೆಪಿ ಸೇರುತ್ತಿರುವುದಕ್ಕೆ ಪ್ರತಿಕ್ರಿಯಿಸಿರುವ ಪಂಜಾಬ್​ದ ಮುಖ್ಯಮಂತ್ರಿ ಭಗವಂತ್​ ಸಿಂಗ್​ ಮಾನ್​, ಇದು ಆಪರೇಷನ್ ಕಮಲದ ಕರಾಳ ಮುಖ, ಇದು ವಿರೋಧ ಪಕ್ಷವನ್ನು ಮುಗಿಸುವ ಸಂಚೆಂದು ಕಿಡಿ ಕಾರಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net