ಒಬ್ಬಂಟಿಯಾಗಿ ನದಿ ಸ್ವಚ್ಛಗೊಳಿಸಿದ ಎಂಪಿ ಯುವಕ; 'ನೀನೆ ನನ್ನ ಮಂಡೇ ಮೋಟಿವೇಶನ್'​ ಎಂದ ಉದ್ಯಮಿ Anand Mahindra

Anand Mahindra
Anand Mahindra
Published on

ಪ್ರಮುಖ ಮುಖ್ಯಾಂಶಗಳು

  • ಅಜ್ನಾರ್​ ನದಿಯಲ್ಲಿದ್ದ ಪ್ಲಾಸ್ಟಿಕ್​ ಕವರ್​, ಪಾಚಿಯನ್ನು ಒಬ್ಬಂಟಿಯಾಗಿ ಕ್ಲಿಯರ್ ಮಾಡಿದ ಯುವಕ
  • ಮಧ್ಯ ಪ್ರದೇಶದ ಯುವಕ ಬಿಟ್ಟು ತಬಾಹಿ ಕಾರ್ಯಕ್ಕೆ ಫಿದಾ ಆದ ಉದ್ಯಮಿ ಆನಂದ್​ ಮಹೀಂದ್ರಾ
  • ಲೈಕ್ಸ್​ಗಾಗಿ ಒಳ್ಳೆ ಕೆಲಸ ಮಾಡಿ, ಸೋಶಿಯಲ್​ ಮೀಡಿಯಾಗೆ ವಿಡಿಯೋ ಹಾಕೋದು ತಪ್ಪೇನಿಲ್ಲ ಎಂದ ಉದ್ಯಮಿ
Anand Mahindra: ಖ್ಯಾತ ಉದ್ಯಮಿ ಆನಂದ್​ ಮಹೀಂದ್ರಾ ಅವರು ಸಾಮಾನ್ಯವಾಗಿ ಸೋಶಿಯಲ್​ ಮೀಡಿಯಾದಲ್ಲಿ ಸಕ್ರಿಯರಾಗಿ ಇರ್ತಾರೆ. ಹೊಸದಾಗಿ ಸಂಶೋಧಿಸುವವರ ಬಗ್ಗೆ, ಸ್ವಚ್ಛತೆ ಬಗ್ಗೆ ಎಕ್ಸ್​ನಲ್ಲಿ ಮಾಹಿತಿ ಹಂಚಿಕೊಂಡು ಶ್ಲಾಘಿಸೋದು ಸಾಮಾನ್ಯ. ಈ ಬಾರಿ ಮಧ್ಯಪ್ರದೇಶದ ಯುವಕನಿಗೆ ಪರಿಸರದ ಮೇಲಿರುವ ಕಾಳಜಿ ಮತ್ತು ಆತ ನಿರ್ವಹಿಸಿದ ಕಾರ್ಯವನ್ನು ಮೆಚ್ಚಿ "ಇವರೇ ನನ್ನ ಸೋಮವಾರದ ಇನ್ಸ್​ಪಿರೇಶನ್"​ ಎಂದು ಕೊಂಡಾಡಿದ್ದಾರೆ.
ಬಿಟ್ಟು ತಬಾಹಿ ಎನ್ನುವ ಮಧ್ಯಪ್ರದೇಶ ಬಿಯೋರಾ ಗ್ರಾಮದ ಯುವಕ ಒಬ್ಬಂಟಿಯಾಗಿ ನದಿಯನ್ನು  ಸ್ವಚ್ಛಗೊಳಿಸಿರುವ ಸೇವೆಯನ್ನು ಮುಕ್ತಕಂಠದಿಂದ ಹಾಡಿ ಹೊಗಳಿದ್ದಾರೆ.  

ಪೋಸ್ಟ್​ನಲ್ಲಿ ಏನಿದೆ?

ಬಿಯೋರಾದಲ್ಲಿ ಹರಿಯುವ ಅಜ್ನಾರ್​ ನದಿಯಲ್ಲಿ ಪ್ಲಾಸ್ಟಿಕ್​, ತ್ಯಾಜ್ಯ, ಪಾಚಿ ಸೇರಿದಂತೆ ಕಸದಿಂದ ನೀರು ತುಂಬಿತ್ತು. ಇದನ್ನು ಕಂಡು 20 ವರ್ಷದ ಬಿಟ್ಟು ಪೇಚಿಗೀಡಾಗಿದ್ದ. ಹೇಗಾದರೂ ನದಿಯನ್ನು ಸ್ವಚ್ಛಗೊಳಿಸಿ ಮೊದಲಿನಂತೆ ಮಾಡ್ಬೇಕಲ್ಲ ಎಂದು ಚಿಂತಿಸುತ್ತಿದ್ದ ಆತ. ಜನವರಿ 26ರಂದು ಸ್ನೇಹಿತರೊಂದಿಗೆ ಸೇರಿ ಹೂಳು ತೆಗೆಯಲು ಮುಂದಾದ. 
ಎಷ್ಟೇ ಕಸ ತೆಗೆದರು ಖಾಲಿಯಾಗಲಿಲ್ಲ. ಆದರೆ, ಬಿಟ್ಟು ಜೊತೆಗಿದ್ದ ಯುವಕರು ಮಾತ್ರ ಸುಸ್ತಾದರು. ಇನ್ಮುಂದೆ ನಿನ್ನ ಜೊತೆ ಬರೋದಿಲ್ಲ ಎಂದು ಅರ್ಧಕ್ಕೆ ಕೈಕೊಟ್ಟರು. ಹೀಗಿದ್ದಾಗಲೂ ಸುಮ್ಮನೆ ಕೂರದ ಬಿಟ್ಟು ತಬಾಹಿ, ದೃತಿಗೆಡದೆ, ಒಬ್ಬನೇ ನದಿಗೆ ಇಳಿದು ವಾರಗಟ್ಟಲೆ ಶ್ರಮಿಸಿ ಸ್ವಚ್ಛಗೊಳಿಸಿದ್ದಾನೆ. ಇದರ ವಿಡಿಯೋಗಳನ್ನು ಸಹ ತನ್ನ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ.
ಎಕ್ಸ್​, ಇನ್​ಸ್ಟಾಗ್ರಾಂ ಸೇರಿ ಹಲವು ಆನ್​ಲೈನ್ ಮೀಡಿಯಾದಲ್ಲಿ ಬಿಟ್ಟು ತಬಾಹಿ ವಿಡಿಯೋ ವೈರಲ್​ ಆಗುತ್ತಲೇ ಜನರು, ಟೀಕೆ ಮಾಡಲು ಶುರುವಿಟ್ಟುಕೊಂಡರು. ವ್ಯೂವ್ಸ್​, ಲೈಕ್ಸ್​ಗಾಗಿ ಹೀಗೆ ಮಾಡೋದು ಇದ್ದೇ ಇದೆ. ನಾವು ಕಂಡಿದ್ದೇವೆ. ಎಷ್ಟೋ ಜನರು ಹೀಗೆನೆ ಮಾಡೋದು ಎಂದಿದ್ದಾರೆ.

ಟೀಕೆಗಳ ಮಧ್ಯೆ ಸಿಕ್ತು ಪ್ರಶಂಸೆ

ಸೋಶಿಯಲ್​ ಮೀಡಿಯಾಗಳು ತಲೆಬುಡ ಇರದ ವಿಚಾರಕ್ಕೆ ಬಳಕೆಯಾಗೋದು ಸೀಮಿತವಾಗಿದೆ ಅಂತ ದೂರೋದು ಇದ್ದೇ ಇದೆ. ಆದರೆ,  ಪರಿಸರ ಅಭಿವೃದ್ಧಿಗೆ ಇಂತಹ ಸ್ವಚ್ಛತಾ ಕಾರ್ಯಗಳು ಲೈಕ್ಸ್​, ಶೇರ್​, ಕಾಮೆಂಟ್​ಗಳಿಗೆ ಬಳಕೆಯಾಗುತ್ತದೆ ಎಂದರೆ ಆಗಲಿ. ಒಳ್ಳೆಯ ಕೆಲಸಕ್ಕೆ ಪ್ರೇರಣೆಯಾಗುತ್ತದೆ ಎದರೆ ತಪ್ಪೇನಿಲ್ಲ. ಅವನ ಪ್ರಯತ್ನ ನನ್ನ ನಿಜ ಜೀವನ್ಕೂ ಸ್ಪೂರ್ತಿ ನೀಡುವಂತಾಗಿದೆ ಎಂದು ಟ್ವೀಟ್ ಮಾಡಿದ್ದಾರೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net