G7 Summit: ನೋಡಲು ಸೌಮ್ಯ, ಆದ್ರೆ ಮಾತುಕತೆಯಲ್ಲಿ ಮೋದಿ ತುಂಬಾ ಕಠಿಣ ವ್ಯಕ್ತಿ: ಮೋದಿಯನ್ನು ಹೊಗಳಿದ ಟ್ರಂಪ್!
G7 Summit
Published on:
Copied
Follow Us
ಪ್ಯಾರಿಸ್: ಫ್ರಾನ್ಸ್‌ನ ಎವಿಯನ್‌ನಲ್ಲಿ ನಡೆದ ಜಿ7 ಶೃಂಗಸಭೆಯ(G7 Summit) ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ದ್ವಿಪಕ್ಷೀಯ ಸಭೆ ಗಮನ ಸೆಳೆಯಿತು. ಈ ವೇಳೆ ಪ್ರಧಾನಿ ಮೋದಿಯನ್ನು ಟ್ರಂಪ್ ಮುಕ್ತಕಂಠದಿಂದ ಹೊಗಳಿದರು.
ಮೋದಿ ಬಗ್ಗೆ ಮಾತನಾಡಿದ ಟ್ರಂಪ್, "ಅವರು ತುಂಬಾ ಕಠಿಣ ಮಾತುಕತೆಗಾರ. ನೋಡಲು ತುಂಬಾ ಒಳ್ಳೆಯ ವ್ಯಕ್ತಿಯಂತೆ ಕಾಣುತ್ತಾರೆ. ಆದರೆ ಮಾತುಕತೆಯಲ್ಲಿ ಬಹಳ ಗಟ್ಟಿಯಾಗಿರುತ್ತಾರೆ" ಎಂದು ಹೇಳಿದರು. ಜೊತೆಗೆ "ಮೋದಿ ಭಾರತೀಯರ ಹಿತಾಸಕ್ತಿಯನ್ನು ಕಾಪಾಡುವ ನಾಯಕ" ಎಂದು ಶ್ಲಾಘಿಸಿದರು.
ಭಾರತ-ಅಮೆರಿಕ ಸಂಬಂಧಗಳ ಬಗ್ಗೆ ಮಾತನಾಡಿದ ಟ್ರಂಪ್, "ಭಾರತದೊಂದಿಗೆ ನಮ್ಮ ಸಂಬಂಧ ಅತ್ಯುತ್ತಮವಾಗಿದೆ. ಪ್ರಧಾನಿ ಮೋದಿ ನಾಯಕತ್ವದಲ್ಲಿರುವವರೆಗೂ ಭಾರತ ಜಾಗತಿಕ ಮಟ್ಟದಲ್ಲಿ ದೊಡ್ಡ ಪಾತ್ರ ವಹಿಸಲಿದೆ" ಎಂದು ಹೇಳಿದರು.
ಇದೇ ವೇಳೆ ಭಾರತದ ಮೇಲೆ ಯಾರಾದರೂ ದಾಳಿ ನಡೆಸಿದರೆ ಅಮೆರಿಕ ನೆರವಾಗಲಿದೆ ಎಂಬ ಭರವಸೆಯನ್ನೂ ಟ್ರಂಪ್ ನೀಡಿದರು. "ಭಾರತದ ಮೇಲೆ ದಾಳಿ ನಡೆದರೆ ನಾವು ಸಹಾಯ ಮಾಡಲು ಇರುತ್ತೇವೆ. ವಿಶೇಷವಾಗಿ ಮೋದಿ ನಾಯಕತ್ವದಲ್ಲಿದ್ದರೆ ನಾವು ಅವರ ಬೆಂಬಲಕ್ಕೆ ನಿಲ್ಲುತ್ತೇವೆ" ಎಂದು ಹೇಳಿದರು.
ಅಮೆರಿಕ ಮತ್ತು ಭಾರತ ನಡುವೆ ವ್ಯಾಪಾರ ಒಪ್ಪಂದಗಳ ಕುರಿತೂ ಉತ್ತಮ ಚರ್ಚೆಗಳು ನಡೆಯುತ್ತಿವೆ ಎಂದು ಟ್ರಂಪ್ ತಿಳಿಸಿದರು. ಎರಡೂ ದೇಶಗಳ ನಡುವೆ ಹಲವು ಕ್ಷೇತ್ರಗಳಲ್ಲಿ ಸಹಕಾರ ಹೆಚ್ಚುತ್ತಿದೆ ಎಂದು ಅವರು ಹೇಳಿದರು.
ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಪಶ್ಚಿಮ ಏಷ್ಯಾದಲ್ಲಿ ಶಾಂತಿ ಸ್ಥಾಪನೆಗೆ ಟ್ರಂಪ್ ಕೈಗೊಂಡಿರುವ ಪ್ರಯತ್ನಗಳನ್ನು ಮೆಚ್ಚಿದರು. ಅಲ್ಲದೆ, ಹೋರ್ಮುಜ್ ಜಲಸಂಧಿಯು ಜಾಗತಿಕ ಆರ್ಥಿಕತೆಗೆ ಅತ್ಯಂತ ಮಹತ್ವದ್ದಾಗಿದ್ದು, ಅದರ ಮೂಲಕ ಹಡಗುಗಳ ಸಂಚಾರ ನಿರಂತರವಾಗಿ ನಡೆಯಬೇಕು ಎಂದು ಹೇಳಿದರು.
ಭಾರತ-ಅಮೆರಿಕ ಸಂಬಂಧದಲ್ಲಿ ಹೊಸ ಚೈತನ್ಯ ಮೂಡಿದ್ದು, ಉಭಯ ದೇಶಗಳು ಹಲವು ಕ್ಷೇತ್ರಗಳಲ್ಲಿ ವೇಗವಾಗಿ ಮುಂದುವರಿಯುತ್ತಿವೆ ಎಂದು ಮೋದಿ ತಿಳಿಸಿದರು,(ಏಜೆನ್ಸೀಸ್).