ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿಂದು ಇಂಡಿಯಾ ಕೂಟದಿಂದ ಅಣಕು ಸಂಸತ್; ಜ್ಞಾನೇಶ್ ಕುಮಾರ್ ಮಹಾಭೀಯೋಗ ನಡೆಸಲಿರುವ ವಿಪಕ್ಷಗಳು | Mock Parliament

ಎಸ್​ಐಆರ್​ನಲ್ಲಿ ಅಕ್ರಮ ಆರೋಪ ಮತ್ತು ಚುನಾವಣಾ ಆಯೋಗದ ವಿರುದ್ಧ ಹೋರಾಟವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿರುವ ಇಂಡಿಯಾ ಮೈತ್ರಿಕೂಟದ ವಿಪಕ್ಷಗಳು, ಇಂದು(ಅ. 30) ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಅಣಕು ಸಂಸತ್ ಆಯೋಜಿಸಿವೆ. ಅಲ್ಲಿ ಸಿಇಸಿ ಜ್ಞಾನೇಶ್ ಕುಮಾರ್ ಅವರ ಮೇಲೆ ದೋಷಾರೋಪಣೆ ನಡೆಸಲಿವೆ ಎಂದು ವರದಿಯಾಗಿದೆ.
ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿಂದು ಇಂಡಿಯಾ ಕೂಟದಿಂದ ಅಣಕು ಸಂಸತ್; ಜ್ಞಾನೇಶ್ ಕುಮಾರ್ ಮಹಾಭೀಯೋಗ ನಡೆಸಲಿರುವ ವಿಪಕ್ಷಗಳು | Mock Parliament
Published on: 

ನವದೆಹಲಿ: ಎಸ್​ಐಆರ್​ನಲ್ಲಿ ಅಕ್ರಮ ಆರೋಪ ಮತ್ತು ಚುನಾವಣಾ ಆಯೋಗದ ವಿರುದ್ಧ ಹೋರಾಟವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿರುವ ಇಂಡಿಯಾ ಮೈತ್ರಿಕೂಟದ ವಿಪಕ್ಷಗಳು, ಇಂದು(ಅ. 30) ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಅಣಕು ಸಂಸತ್ ಆಯೋಜಿಸಿವೆ. ಅಲ್ಲಿ ಸಿಇಸಿ ಜ್ಞಾನೇಶ್ ಕುಮಾರ್ ಅವರ ಮೇಲೆ ದೋಷಾರೋಪಣೆ ನಡೆಸಲಿವೆ ಎಂದು ವರದಿಯಾಗಿದೆ.

ಮಾಜಿ ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಅವರು ಅಣಕು ಸಂಸತ್​ನ ಅಧ್ಯಕ್ಷತೆ ವಹಿಸಲಿದ್ದಾರೆ. ಒಟ್ಟು ಮೂರು ಗಂಟೆಗಳ ಕಾಲ ಅಣಕು ಸಂಸತ್ ನಡೆಯಲಿದೆ. ರಾಜ್ಯಸಭೆಯಲ್ಲಿನ ವಿರೋಧ ಪಕ್ಷದ ನಾಯಕ ಖರ್ಗೆ ಅವರು ಕುಮಾರ್ ಅವರನ್ನು ಪದಚ್ಯುತಗೊಳಿಸುವ ಪ್ರಸ್ತಾವವನ್ನು ಮಂಡಿಸಲಿದ್ದಾರೆ. ಇತ್ತ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಮತದಾನದ ಮೂಲಕ ಈ 'ಪ್ರಸ್ತಾವ' ಅಂಗೀಕರಿಸಲ್ಪಡುವ ಮೊದಲು ಚರ್ಚೆಯನ್ನು ಮುಕ್ತಾಯಗೊಳಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Also Read
ನಿರ್ಮಲಾ ಸೀತಾರಾಮನ್ ಹೆಸರು ತಪ್ಪಾಗಿ ಬರೆದ ರಾಹುಲ್ ಗಾಂಧಿ: ಬಿಜೆಪಿಗರು ಟೀಕಿಸುತ್ತಿದ್ದಂತೆ ಅದು ಟೈಪೋ ಮಾರ್ಕೆಟಿಂಗ್ ಎಂದ ಕಾಂಗ್ರೆಸ್ | typo marketing
ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿಂದು ಇಂಡಿಯಾ ಕೂಟದಿಂದ ಅಣಕು ಸಂಸತ್; ಜ್ಞಾನೇಶ್ ಕುಮಾರ್ ಮಹಾಭೀಯೋಗ ನಡೆಸಲಿರುವ ವಿಪಕ್ಷಗಳು | Mock Parliament

ಗುರುವಾರ ಕುರಿತು ಖರ್ಗೆ ನಿವಾಸದಲ್ಲಿ ಸಭೆ ನಡೆದಿದ್ದು, ಜ್ಞಾನೇಶ್ ಕುಮಾರ್ ಅವರ ಸಾರ್ವಜನಿಕ ದೋಷಾರೋಪಣೆ ಪ್ರಕ್ರಿಯೆ ರೂಪರೇಷೆಗಳನ್ನು ಚರ್ಚಿಸಲಾಗಿದೆ. ಸಭೆಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಪ್ರಿಯಾಂಕಾ ಗಾಂಧಿ ವಾದ್ರಾ, ಜೈರಾಮ್ ರಮೇಶ್ ಮತ್ತು ಕೆ.ಸಿ. ವೇಣುಗೋಪಾಲ್, ಮೀರಾ ಕುಮಾರ್, ಸಿಪಿಎಂ ಸಂಸದ ಜಾನ್ ಬ್ರಿಟ್ಟಾಸ್, ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒ'ಬ್ರೇನ್, ಸಮಾಜವಾದಿ ಪಕ್ಷದ ಹರೇಂದ್ರ ಮಲಿಕ್ ಮತ್ತು ಜೆಎಂಎಂನ ಮಹುವಾ ಮಾಜಾ ಇತರರು ಭಾಗವಹಿಸಿದ್ದರು.

21 ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸೇರಿದಂತೆ ಕನಿಷ್ಠ 30 ಭಾಷಣಕಾರರು ಅಣಕು ಸಂಸತ್​ನಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಬಿಜೆಡಿಗೆ ಆಹ್ವಾನ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ, ಆದರೆ ಪಕ್ಷವು ಇನ್ನೂ ಭಾಗವಹಿಸುವಿಕೆಯನ್ನು ದೃಢೀಕರಿಸಿಲ್ಲ (ಏಜೆನ್ಸೀಸ್).