ಲಕ್ಷಗಳ ಬೆಲೆಬಾಳುವ ಈ ಮಾವನ್ನು ಬೆಳೆದಿದ್ದರೂ, ಸ್ಥಳೀಯ ಮಾರುಕಟ್ಟೆಯಲ್ಲಿ ಇದಕ್ಕೆ ಸೂಕ್ತ ಬೆಲೆ ಸಿಗುವುದಿಲ್ಲ ಎಂಬುದು ದೇಬಾ ಅವರಿಗೆ ಚೆನ್ನಾಗಿ ಗೊತ್ತು. ಇಂತಹ ಐಷಾರಾಮಿ ಹಣ್ಣುಗಳಿಗೆ ವಿದೇಶಗಳಲ್ಲಿ ಅಥವಾ ದೊಡ್ಡ ಹೋಟೆಲ್‌ಗಳಲ್ಲಿ ಮಾತ್ರ ಬೇಡಿಕೆ ಇರುತ್ತದೆ. ಆದರೆ, ಇವುಗಳನ್ನು ಸುರಕ್ಷಿತವಾಗಿ ಪ್ಯಾಕ್ ಮಾಡಿ, ರಫ್ತು ಮಾಡುವುದು ಹೇಗೆ ಮತ್ತು ಯಾರಿಗೆ ಮಾರಾಟ ಮಾಡಬೇಕು ಎಂಬುದು ತಿಳಿಯುತ್ತಿಲ್ಲ ಈ ರೈತನಿಗೆ. ಹೀಗಾಗಿ ಇವುಗಳನ್ನು ಮಾರಾಟ ಮಾಡಲು ಸರ್ಕಾರ ಮತ್ತು ಕೃಷಿ ತಜ್ಞರ ಸಹಾಯಕ್ಕಾಗಿ ದೇಬಾ ಕಾಯುತ್ತಿದ್ದಾರೆ.