ಮಹುವಾ ಮೊಯಿತ್ರಾ ಮೇಲೆ ಮೊಟ್ಟೆ ಎಸೆದ ಕಿಡಿಗೇಡಿಗಳು: ವಿಡಿಯೋ ಮಾಡಿ BJP ವಿರುದ್ಧ ಗುಡುಗಿದ TMC ಸಂಸದೆ! Mahua Moitra
ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಮೇಲೆ ಮೊಟ್ಟೆ ದಾಳಿ!
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಮೇಲೆ ಮೊಟ್ಟೆ ದಾಳಿ!
ಈ ದಾಳಿಯ ಹಿಂದೆ ಬಿಜೆಪಿ ಕಾರ್ಯಕರ್ತರಿದ್ದಾರೆ: ಮಹುವಾ ಮೊಯಿತ್ರಾ
ಅಭಿಷೇಕ್ ಬ್ಯಾನರ್ಜಿ ಬೆನ್ನಲ್ಲೇ ಸಂಸದೆ ಮಹುವಾ ಮೊಯಿತ್ರಾ ಮೇಲೂ ಮೊಟ್ಟೆ ಎಸೆತ
ಪಶ್ಚಿಮ ಬಂಗಾಳ: ಬುಧವಾರ (ಜು.1) ತ್ರಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ (Mahua Moitra) ರೆಸ್ಟೋರೆಂಟ್ನಲ್ಲಿದ್ದಾಗ ಅವರ ಮೇಲೆ ಕಿಡಿಗೇಡಿಗಳು ಮೊಟ್ಟೆ ಎಸೆದಿರುವ ಘಟನೆ ಕೊಲ್ಕತದ ಕೃಷ್ಣಾನಗರದಲ್ಲಿ ವರದಿಯಾಗಿದೆ.
ಸಂಸದೆ ಈ ಘಟನೆಯನ್ನು ತಮ್ಮ ಮೊಬೈನ್ನಲ್ಲಿ ಸೆರೆ ಹಿಡಿದಿದ್ದು, ನನ್ನ ಮೇಲೆ ಬಿಜೆಪಿ ಕಾರ್ಯಕರ್ತರು ದಾಳಿ ನಡೆಸಿದ್ದಾರೆಂದು ಆರೋಪಿಸಿದ್ದಾರೆ.
ಟಿಎಂಸಿ ಸಂಸದೆ ಮಹುಮಾ ಮೋಹಿತ್ರಾ ಹಂಚಿಕೊಂಡಿರುವ ವಿಡಿಯೋನಲ್ಲಿ, ಅವರು ಒಂದು ರೆಸ್ಟೋರೆಂಟ್ನ ಒಳಗಡೆ ಇದ್ದು, ಹೊರಗಡೆಯಲ್ಲಿರುವ ಕಿಡಿಗೇಡಿಗಳು ಸಂಸದೆಯತ್ತ ಮೊಟ್ಟೆ ಎಸೆದಿದ್ದಾರೆ.
ಕಿಡಿಗೇಡಿಗಳು ಎಸೆದ ಮೊಟ್ಟೆ ಚೂರುಗಳನ್ನು ಸಂಸದೆ ಹಂಚಿಕೊಂಡಿರುವ ವಿಡಿಯೋನಲ್ಲಿ ನೋಡಬಹುದಾಗಿದೆ. ತನ್ನ ಮೇಲೆ ಈ ದಾಳಿಯನ್ನು ಬಿಜೆಪಿ ಕಾರ್ಯಕರ್ತರು ನಡೆಸಿದ್ದಾರೆ, ಇವರಿಗೆ ಬಂಗಾಳ ಪೊಲೀಸರ ಬೆಂಬಲವಿದೆ ಎಂದು ಸಂಸದೆ ಆರೋಪಿಸಿದ್ದಾರೆ.
ಮುಂದುವರಿದ ಮೊಟ್ಟೆ ದಾಳಿ!
2026 ರಲ್ಲಿ ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಫಲಿತಾಂಶದ ನಂತರ, ರಾಜ್ಯುದ ಚಿತ್ರಣ ಸಂಪೂರ್ಣವಾಗಿ ಬದಲಾಗಿ ಹೋಗಿದೆ. 15 ವರ್ಷಗಳ ಟಿಎಂಸಿ ಅಧಿಕಾರವನ್ನು ತ್ಯಜಿಸಿ ಪ್ರಥಮ ಬಾರಿ ಬಿಜೆಪಿಗೆ ಬಂಗಾಳದ ಮತದಾರ ಮಣೆ ಹಾಕಿದ್ದಾನೆ.
ಬಿಜೆಪಿ ಅಧಿಕಾರಕ್ಕೆ ಬಂದ ದಿನದಿಂದ ಟಿಎಂಸಿ ಪಕ್ಷದವರ ಮೇಲೆ ನಿರಂತರ ದಾಳಿ ನಡೆಯುತ್ತಿರುವುದು ಕಂಡುಬರುತ್ತಿದೆ. ಈ ಹಿಂದೆ ಸಂಸದ ಅಭಿಷೇಕ್ ಬ್ಯಾನರ್ಜಿ ಮತ್ತು ಕಲ್ಯಾಣ್ ಬಾನರ್ಜಿ ಮೇಲೆ ಕೂಡ ಇದೇ ರೀತಿಯ ಮೊಟ್ಟೆ ದಾಳಿ ನಡೆದಿತ್ತು.
ಇನ್ನೊಂದು ಕಡೆ ಟಿಎಂಸಿ ಪಕ್ಷದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಸುಮಾರು 22 ಸಂಸದರು ಬಿಜೆಪಿಗೆ ತಮ್ಮ ಬೆಂಬಲವನ್ನು ನೀಡಲು ಮುಂದಾಗಿದ್ದಾರೆ. ಹೀಗಾಗಿ ಮಮತಾ ಬ್ಯಾನರ್ಜಿ ಪರ ನಿಂತಿರುವ ಸಂಸದರ, ಶಾಸಕರ ಮೇಲೆ ಬಿಜೆಪಿ ದಾಳಿ ನಡೆಸುತ್ತಿದೆ ಎನ್ನುವುದು ದಾಳಿಗೋಳಗಾದವರ ಆರೋಪವಾಗಿದೆ, (ಏಜನ್ಸೀಸ್).