ಜಿಮ್​​ನಿಂದ ಆಚೆ ಬರ್ತಿದ್ದಂತೆ ಖ್ಯಾತ ಹರಿಯಾಣ್ವಿ ಗಾಯಕನನ್ನ ಗುಂಡಿಕ್ಕೆ ಹ*ಗೈದ ದುಷ್ಕರ್ಮಿಗಳು | Haryanvi singer

ಹರಿಯಾಣವಿ ಗಾಯಕ ಅಂಕಿತ್ ಬಲಿಯಾನ್
ಹರಿಯಾಣವಿ ಗಾಯಕ ಅಂಕಿತ್ ಬಲಿಯಾನ್
Published on
ಲಖನೌ: ಉತ್ತರ ಪ್ರದೇಶದ ಶಾಮ್ಲಿಯಲ್ಲಿರುವ ಜಿಮ್​ವೊಂದರ ಹೊರಗೆ ಬುಧವಾರ(ಆ. 26) ಸಂಜೆ ಯೂಟ್ಯೂಬರ್ ಮತ್ತು ಹರಿಯಾಣವಿ ಗಾಯಕ(Haryanvi singer) ಅಂಕಿತ್ ಬಲಿಯಾನ್ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದು, ಈ ಪ್ರದೇಶದಲ್ಲಿ ಉದ್ವಿಗ್ನತೆ ಉಂಟಾಗಿದೆ ಎಂದು ವರದಿಯಾಗಿದೆ.
ಬಲಿಯಾನ್ ಜಿಮ್ ನಿಂದ ಹೊರಬರುತ್ತಿದ್ದಾಗ ಸಂಜೆ 7 ಗಂಟೆ ಸುಮಾರಿಗೆ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ಮೂರರಿಂದ ನಾಲ್ಕು ಮಂದಿ ದಾಳಿಕೋರರು ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ತಲುಪಿ ಗಾಯಾಳು ಬಲಿಯಾನ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರಿಗೆ ಹಲವು ಗುಂಡುಗಳು ತಗುಲಿದ್ದು, ಆಸ್ಪತ್ರೆಗೆ ಮುಟ್ಟಿದ ಬಳಿಕ ಮೃತಪಟ್ಟಿದ್ದಾರೆ. ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಆರೋಪಿಗಳನ್ನು ಗುರುತಿಸಲು ಮತ್ತು ಬಂಧಿಸಲು ಪೊಲೀಸರು ಹಲವಾರು ತಂಡಗಳನ್ನು ರಚಿಸಿದ್ದಾರೆ. ಮತ್ತು ಹತ್ಯೆಗೆ ಕಾರಣಗಳನ್ನು ತಿಳಿಯಲು ಮತ್ತು ಭಾಗಿಯಾಗಿರುವವರನ್ನು ಗುರುತಿಸಲು ಹತ್ಯೆಯ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ ಎನ್ನಲಾಗಿದೆ.
ಬಲಿಯಾನ್ ಭಾರಿ ಕೋರ್ಟ್ ಮೇ ಗೋಲಿ ಮರೇಂಗೆ ಮೇರಿ ಜಾನ್ ಸೇರಿದಂತೆ ಹರ್ಯಾನ್ವಿ ಹಾಡುಗಳ ಮೂಲಕ ಜನಪ್ರಿಯತೆಯನ್ನು ಗಳಿಸಿದ್ದರು . 2023ರಲ್ಲಿ ಶಾಮ್ಲಿಯಲ್ಲಿ ಅವರ ರೋಡ್‌ಶೋ ಕೂಡ ಗಮನ ಸೆಳೆದಿತ್ತು. ಬಲಿಯಾನ್ ಮುಂಬರುವ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದನೆಂದು ವರದಿಯಾಗಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net