ನೇಪಾಳದಲ್ಲಿ ಹಠಾತ್ ಪ್ರವಾಹ ದುರಂತ; ಸಾವಿನ ಸಂಖ್ಯೆ 90ಕ್ಕೆ ಏರಿಕೆ, 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಭಯಾನಕ ವಿಡಿಯೋ | flood tragedy

ಘಟನೆಯ ಸಿಸಿಟಿವಿ ದೃಶ್ಯ
ಘಟನೆಯ ಸಿಸಿಟಿವಿ ದೃಶ್ಯ
Published on
ಕಠ್ಮಂಡು: ನೇಪಾಳದ ರಸುವಾ ಜಿಲ್ಲೆಯಲ್ಲಿ ಬುಧವಾರ(ಆ. 26) ಸಂಭವಿಸಿದ ಹಠಾತ್ ಪ್ರವಾಹದಿಂದ(flood tragedy) ಭಾರಿ ಪ್ರಮಾಣದ ಮೂಲಭೂತಸೌಕರ್ಯಗಳು ಹಾನಿಯಾಗಿದ್ದು, ಕನಿಷ್ಠ 90ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಮತ್ತು 1058 ಭಾರತೀಯರು ಸೇರಿ 400ಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಭೋಟೆ ಕೋಶಿ ನದಿಯೂ ಹಠಾತ್ ಉಕ್ಕಿ ಹರಿದು ಬೆಳಿಗ್ಗೆ 9 ಗಂಟೆ ಸುಮಾರಿಗೆ ರಸುವಾಗಧಿ-ತಿಮುರೆ ಪ್ರದೇಶವನ್ನು ಅಪ್ಪಳಿಸಿದೆ. ರಸುವಾ ಜೊತೆಗೆ ನೆರೆಯ ನುವಾಕೋಟ್ ಮತ್ತು ಧಾಡಿಂಗ್ ಜಿಲ್ಲೆಗಳ ಕೆಲವು ಭಾಗಗಳ ಮೇಲೆ ಪರಿಣಾಮ ಬೀರಿದೆ. ನೀರಿನ ರಭಸಕ್ಕೆ ವಾಹನಗಳು, ಸರಕುಗಳು, ಸೇತುವೆಗಳು ಮತ್ತು ಇತರ ಮೂಲಸೌಕರ್ಯಗಳನ್ನು ಕೊಚ್ಚಿ ಹೋಗಿವೆ.
ನೇಪಾಳ ಪ್ರವಾಸೋದ್ಯಮ ಮಂಡಳಿ ಸಂಗ್ರಹಿಸಿದ ಪ್ರಾಥಮಿಕ ಪಟ್ಟಿಯ ಪ್ರಕಾರ, 291 ವಿದೇಶಿ ಪ್ರಜೆಗಳು ಮತ್ತು 93 ನೇಪಾಳಿ ಪ್ರಜೆಗಳು ಸೇರಿದಂತೆ 384 ಪ್ರಯಾಣಿಕರು ಹಠಾತ್ ಪ್ರವಾಹದ ನಂತರ ಕಾಣೆಯಾಗಿದ್ದಾರೆ. ವಿದೇಶಿ ಪ್ರಜೆಗಳಲ್ಲಿ 105 ಭಾರತೀಯ ಪ್ರವಾಸಿಗರು ಮತ್ತು 37 ಅನಿವಾಸಿ ಭಾರತೀಯರು ಸೇರಿದ್ದಾರೆ.
ಪ್ರವಾಸೋದ್ಯಮ ಮಂಡಳಿಯು ಈ ಪಟ್ಟಿಯು ಪ್ರಾಥಮಿಕವಾಗಿದ್ದು, ಪ್ರಯಾಣ ಸಂಸ್ಥೆಗಳು, ಮಾರ್ಗದರ್ಶಿಗಳು, ಸ್ಥಳೀಯ ಅಧಿಕಾರಿಗಳು ಮತ್ತು ಭದ್ರತಾ ಸಂಸ್ಥೆಗಳ ಸಮನ್ವಯದೊಂದಿಗೆ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದೆ.

ಭಯಾನಕ ವಿಡಿಯೋ

ಟಿಬೆಟ್‌ನ ಗೈರಾಂಗ್ ಬಂದರಿನ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆ ಪ್ರದೇಶದಲ್ಲಿ ಭಾರಿ ಪ್ರಮಾಣದ ಹಠಾತ್ ಪ್ರವಾಹ ಉಕ್ಕಿ ಹರಿದ ಬಳಿಕ ಅದು ನೇಪಾಳದ ರಸುವಾ ಜಿಲ್ಲೆಗೆ ನುಗ್ಗಿ ಭೋಟೆ ಕೋಶಿ ನದಿಯುದ್ದಕ್ಕೂ ವ್ಯಾಪಕ ನಾಶವನ್ನುಂಟು ಮಾಡುವುದನ್ನು ತೋರಿಸಿದೆ.
ವಿಡಿಯೋದಲ್ಲಿ ಕೆಸರು ಸಹಿತ ನೀರುಮ ಕಲ್ಲುಗಳು ಹಾಗೂ ಭಗ್ನಾವಶೇಷಗಳು ಮೇಲ್ಭಾಗದಿಂದ ನುಗ್ಗಿ ಬಸ್ ಸೇರಿ ಹಲವು ವಾಹನಗಳ ಪಾರ್ಕಿಂಗ್​ ಸ್ಥಳಕ್ಕೆ ವೇಗವಾಗಿ ನುಗ್ಗಿ ವಾಹಗಳನ್ನು ಕೊಚ್ಚಿ ಮಂಜಿನ ಡಟ್ಟವಾದ ಮೋಡವನ್ನು ಸೃಷ್ಟಿಸುವುದನ್ನು ತೋರಿಸುತ್ತಿವೆ. ಮತ್ತು ಜನ ಪರದಾಡುತ್ತಾ ಓಡುತ್ತಿರುವುದು ಸೆರೆಯಾಗಿದೆ.
ಇನ್ನೂ ಪ್ರವಾಹ ಪೀಡಿತ ಪ್ರದೇಶಕ್ಕೆ ಹೆಲಿಕಾಪ್ಟರ್‌ಗಳು ಮತ್ತು ವಿಪತ್ತು ನಿರ್ವಹಣಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ನೇಪಾಳ ಸೇನೆ ತಿಳಿಸಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net