ಗರ್ಭಿಣಿ ಎಂಬ ವಿಷಯ ಮುಚ್ಚಿಟ್ಟು ಪರೀಕ್ಷೆ ಬರೆದ ವಿದ್ಯಾರ್ಥಿನಿ: ಹಾಸ್ಪಿಟಲ್ ಟಾಯ್ಲೆಟ್‌ನಲ್ಲೇ ಮಗುವಿಗೆ ಜನ್ಮ ನೀಡಿದ 16 ರ ಬಾಲಕಿ! Minor Girl Delivery Case
ಸಾಂದರ್ಭಿಕ ಚಿತ್ರ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಮಗುವಿಗೆ ಜನ್ಮವಿತ್ತ 16 ರ ಹುಡುಗಿ
ತೆಲಂಗಾಣಾದ ನಾಗರ್ಕರ್ನೂಲ್‌ನಲ್ಲಿ ನಡೆದಿರುವ ಘಟನೆ
ಪರೀಕ್ಷೆ ಬರೆದ ನಂತರ ಆಸ್ಪತ್ರೆಯ ಶೌಚಾಲಯದಲ್ಲಿ ಹೆರಿಗೆ
ಹೈದರಾಬಾದ್: ತೆಲಂಗಾಣಾದ ನಾಗರ್ಕರ್ನೂಲ್‌ನಲ್ಲಿ 16 ವರ್ಷದ ವಿದ್ಯಾರ್ಥಿನಿಯೊಬ್ಬಳು ಪರೀಕ್ಷೆಗೆ ಹಾಜರಾದ ಕೆಲವೇ ಗಂಟೆಗಳಲ್ಲಿ ಮಗುವಿಗೆ ಜನ್ಮ (Minor Girl Delivery Case) ನೀಡಿದ ಬಗ್ಗೆ ವರದಿಯಾಗಿದೆ.
ಸೋಮವಾರ (ಮಾ.2) ಪರೀಕ್ಷೆಗೆ ಹಾಜರಾದ ಈ ಬಾಲಕಿಗೆ ತೀವ್ರವಾದ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಪರೀಕ್ಷೆ ಮುಗಿದ ನಂತರ ಇಕೆಯ ತಾಯಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ವೈದ್ಯರು ಮೊದಲು ಸ್ಕ್ಯಾನಿಂಗ್ ಮಾಡಿ ನಂತರ ಏನಾಗಿದೆ ಎಂದು ನೋಡೊಣ ಎಂದು ಹೇಳಿದ್ದಾರೆ, ಅದರೆ ಸ್ಕ್ಯಾನಿಂಗ್ಗೆ ಪೂರ್ವದಲ್ಲಿ ಶೌಚಾಲಯಕ್ಕೆ ಹೋದ ಬಾಲಕಿಗೆ ಹೆರಿಗೆ ನೋವು ಬಂದು ಅಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾಳೆ.
ಇದನ್ನು ಗಮನಿಸಿದ ಆಸ್ಪತ್ರೆ ಸಿಬ್ಬಂದಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ತಾಯಿ ಮತ್ತು ಮಗುವನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸರ್ಕಾರಿ ಆಸ್ಪತ್ರೆಯ ವೈದ್ಯರು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ. ಮಾಹಿತಿಗಳ ಪ್ರಕಾರ, ತನ್ನ ಮಗಳು ಮಗುವಿಗೆ ಜನ್ಮ ನೀಡಿದಾಗ ತಾಯಿ, ಆ ಮಗುವನ್ನು ಯಾರಿಗೂ ಗೊತ್ತಾಗದಂತೆ ಕಸದ ಬುಟ್ಟಿಯಲ್ಲಿ ಹಾಕಲು ಹೊರಟಾಗ ಆಸ್ಪತ್ರೆ ಸಿಬ್ಬಂದಿಗೆ ಈ ವಿಚಾರ ತಿಳಿದು ಬಂದಿದೆ.
ಪೊಲೀಸರಿಂದ ತನಿಖೆ ಆರಂಭ
ಮಗುವಿಗೆ ಜನ್ಮ ನೀಡಿದ ಹುಡುಗಿಯು ಅಪ್ರಾಪ್ತೆಯಾಗಿದ್ದು, ಈಕೆ ಯಾರಿಂದ ಮತ್ತು ಹೇಗೆ ಗರ್ಭಿಣಿ ಆದಳೆಂದು ತಿಳಿಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಹಾಗೆಯೇ ಈ ಪ್ರಕರಣವನ್ನು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (POCSO) ಅಡಿಯಲ್ಲಿ ದಾಖಲಿಸುವ ಕುರಿತು ಚರ್ಚೆ ನಡೆಯುತ್ತಿದೆ.
ಕಳೆದ ತಿಂಗಳು, ಮಧ್ಯಪ್ರದೇಶದ ಬೋರ್ಡ್ ಪರೀಕ್ಷೆ ನಡೆಯುತ್ತಿದ್ದಾಗ 17 ವರ್ಷದ ಹುಡುಗಿಯೊಬ್ಬಳು ಪರೀಕ್ಷೆ ಬರೆಯುತ್ತಿದ್ದಾಗ ಹೊಟ್ಟೆ ನೋವೆಂದು ಹೇಳಿ, ಶೌಚಾಲಯದಲ್ಲೇ ಮಗುವಿಗೆ ಜನ್ಮವಿತ್ತ ಘಟನೆ ವರದಿಯಾಗಿತ್ತು.
ಪೊಲೀಸರು ತನಿಖೆ ಆರಂಭಿಸಿದ ನಂತರ, ಡಾನ್ಸ್ ಕಾರ್ಯಕ್ರಮವೊಂದಕ್ಕೆ ಈ ಹುಡುಗಿ ಹೋದಾಗ, ಅಲ್ಲಿ ಪರಿಚಯವಾದ ಹುಡುಗನೊಬ್ಬ ಈಕೆಯನ್ನು ಲೈಗಿಂಕವಾಗಿ ಬಳಸಿಕೊಂಡು ಗರ್ಭಿಣಿ ಮಾಡಿದ್ದಾಗಿ ತಿಳಿದು ಬಂದಿದ್ದು, ಅತನನ್ನು ಪೊಲೀಸರು ಬಂಧಿಸಿದ್ದರು,(ಏಜನ್ಸೀಸ್).