ಧಾರಾವಿ ದರ್ಶನಕ್ಕೆ 15,000 ಎಂಟ್ರಿ ಫೀ: ಬಡತನವನ್ನೇ ಬಂಡವಾಳ ಮಾಡಿಕೊಂಡ ನಿವಾಸಿಗಳು; ಗೈಡ್‌ಗಳ ತಿಂಗಳ ಸಂಪಾದನೆ ಕೇಳಿದ್ರೆ ಶಾಕ್ ಆಗ್ತೀರಾ! Dharavi Slum

ಧಾರಾವಿ ಸ್ಲಮ್​ (Dharavi Slum)
ಧಾರಾವಿ ಸ್ಲಮ್​ (Dharavi Slum)
Published on

ಪ್ರಮುಖ ಮುಖ್ಯಾಂಶಗಳು

  • ಏಷ್ಯಾದ ಅತಿ ದೊಡ್ಡ ಸ್ಲಮ್​ ಧಾರಾವಿ
  • ಧಾರಾವಿ ಸ್ಲಮ್ ವೀಕ್ಷಣೆಗೆ 15,000 ಎಂಟ್ರಿ ಫೀ
  • ಬಡತನವನ್ನೇ ಬಂಡವಾಳ ಮಾಡಿಕೊಂಡ ನಿವಾಸಿಗಳು
ಮುಂಬೈ: ಏಷ್ಯಾದ ಅತಿ ದೊಡ್ಡ ಕೊಳಗೇರಿ ಎಂದೇ ಜನಜನಿತವಾಗಿರುವ ಮುಂಬೈನ ಧಾರಾವಿ ಸ್ಲಮ್​ (Dharavi Slum) ನ್ನು ವೀಕ್ಷಿಸಲು 15,000 ರೂಪಾಯಿಗಳನ್ನು ಎಂಟ್ರಿ ಫೀ ರೂಪದಲ್ಲಿ ಪಡೆಯಲಾಗುತ್ತಿದೆ ಎಂದು ವರದಿಯಾಗಿದೆ.
ಮುಂಬೈಗೆ ಪ್ರವಾಸಕ್ಕೆಂದು ಬರುವ ವಿದೇಶಿಯರಿಗೆ ಈ ಧಾರಾವಿ ಸ್ಲಮ್​ ಹೇಗಿದೆ? ಅಲ್ಲಿ ಜನರು ಯಾವ ರೀತಿ ವಾಸಿಸುತ್ತಾರೆ? ಅವರು ಯಾವ ಕೆಲಸಗಳನ್ನು ಮಾಡುತ್ತಾರೆ? ಎಂಬ ಕೂತುಹಲ ಇರುವುದು ಸಹಜವಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಧಾರಾವಿ ಜನ ಈದೀಗ ಧಾರಾವಿ ನೋಡಲು ಬರುವ ಜನರಿಗೆ ಸುಮಾರು 7,000 ದಿಂದ 15,000 ರೂಪಾಯಿಗಳನ್ನು ಚಾರ್ಚ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಎರಡು ಗಂಟೆಗೆ 15,000!

ಧಾರಾವಿಯನ್ನು ನೋಡ ಬಯಸುವ ಪ್ರವಾಸಿಗರಿಗೆ ಎರಡು ಗಂಟೆಯ ವರೆಗೆ ಅಲ್ಲಿನ ಗುಡಿ ಕೈಗಾರಿಕೆ, ಸಣ್ಣ ವ್ಯಾಪಾರಿಗಳು, ಅಲ್ಲಿಯ ಜನರ ಜನಜೀವನ, ಅಲ್ಲಿನ ಮನೆಗಳು ಇವುಗಳನ್ನು ತೋರಿಸಲು ಸುಮಾರು 15,000 ರೂಪಾಯಿಗಳನ್ನು ಒಬ್ಬ ವ್ಯಕ್ತಿಯಂತೆ ಪಡೆಯಲಾಗುತ್ತಿದೆ. ಈ ಕೆಲಸದಲ್ಲೇ ನಿರತನಾಗಿರುವ ವ್ಯಕ್ತಿಯೊಬ್ಬ ತಿಂಗಳಿಗೆ 75,000 ಸಾವಿರ ಗಳಿಸುತ್ತಿರುವ ಬಗ್ಗೆ ತಿಳಿದುಬಂದಿದೆ.
ಈ ಬಗ್ಗೆ ಮಾತನಾಡಿರುವ ಆ ವ್ಯಕ್ತಿ, ಭಾರತೀಯ ಪ್ರವಾಸಿಗರು ನಮಗೆ 1,500 ರಿಂದ 7,000 ರೂಪಾಯಿ ನೀಡುತ್ತಾರೆ, ಅದೇ ವಿದೇಶಿ ಪ್ರವಾಸಿಗರಿಗೆ 15,000 ಏನು ದೊಡ್ಡ ಮೊತ್ತವಲ್ಲ, ಅವರು ಖುಷಿಯಿಂದಲೇ ಹಣವನ್ನು ಕೊಟ್ಟು, ನಮ್ಮ ಧಾರಾವಿಯನ್ನು ನೋಡಿ ಹೋಗುತ್ತಾರೆ ಎಂದು ಆ ಗೈಡ್​ ತಿಳಿಸಿದ್ದಾನೆ.

ಬಡತನವನ್ನೇ ಬಂಡವಾಳ ಮಾಡಿಕೊಂಡಿದ್ದಾರೆ

ಧಾರಾವಿ ಬಗ್ಗೆ ಮಾತನಾಡಿದ ಒಬ್ಬರು, ಈ ಧಾರಾವಿ ಜನ ಬಹಳ ಬುದ್ಧಿವಂತರಿದ್ದಾರೆ, ಅವರು ತಮ್ಮ ಬಡತನವನ್ನೇ ಬಂಡವಾಳ ಮಾಡಿಕೊಂಡು ವಿದೇಶಿಯರಿಂದ ಸಾವಿರಾರು ರೂಪಾಯಿ ಹಣವನ್ನು ಪಡೆಯುತ್ತಿದ್ದಾರೆ. ಧಾರಾವಿ ಏಷ್ಯಾದ ದೊಡ್ಡ ಸ್ಲಮ್​ ನಿಜ, ಹಾಗೆಯೇ ಏಷ್ಯಾದ ಅತಿ ದೊಡ್ಡ ಸಣ್ಣ ಗುಡಿ ಕೈಗಾರಿಕೆ ಸಹ ಇಲ್ಲೇ ಇದೆ. ಇಲ್ಲಿಯ ಜನ ನಾವು ತಿಳಿದಂತೆ ಕಡು ಬಡವರೇನಲ್ಲ, ಅವರು ಬಡತನದ ಮುಸುಕಿನಲ್ಲಿರುವ ಶ್ರೀಮಂತರೆನ್ನುವುದು ಹಲವರ ವಾದವಾಗಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net