ನರೇಂದ್ರ ಮೋದಿ ಅವರು ದೇಶದ ಜನಸಾಮಾನ್ಯರಿಗೆ ಚಿನ್ನ ಕೊಳ್ಳಬೇಡಿ, ವಿದೇಶಕ್ಕೆ ಹೋಗಬೇಡಿ, ದುಬಾರಿ ವೆಚ್ಚ ಮಾಡಬೇಡಿ, ಕೇವಲ ಎಲೆಕ್ಟ್ರಿಕ್ ವಾಹನಗಳನ್ನೇ ಚಲಾಯಿಸಿ ಎಂದು ಬುದ್ಧಿವಾದ ಹೇಳುತ್ತಾರೆ. ಆದರೆ, ಜನರಿಗೆ ಈ ರೀತಿ ಉಪದೇಶ ನೀಡಿದ ತಕ್ಷಣವೇ ತಾವೇ ಖುದ್ದಾಗಿ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ವಿಮಾನವನ್ನು ಏರಿ ವಿದೇಶಿ ಪ್ರವಾಸಕ್ಕೆ ಹೊರಟುಬಿಡುತ್ತಾರೆ. ದೇಶದ ಜನ ಇದನ್ನು ಸುಮ್ಮನೆ ನೋಡುತ್ತಾ ಕುಳಿತುಕೊಳ್ಳಬೇಕೇ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.