ಇನ್ನುಳಿದಂತೆ, ಹರ್ಷ್ ಜೈಸ್ವಾಲ್ ಅವರು ಹ್ಯಾಕ್ಟ್ರನ್ ಎಐನ ಸಹ-ಸ್ಥಾಪಕರಾಗಿದ್ದು, ಭದ್ರತಾ ದೋಷಗಳನ್ನು ಪತ್ತೆಹಚ್ಚುವಲ್ಲಿ 10 ವರ್ಷಗಳಿಗೂ ಅಧಿಕ ಅನುಭವ ಹೊಂದಿದ್ದಾರೆ. ಪ್ರಾಜೆಕ್ಟ್ ಡಿಸ್ಕವರಿ, ಜೊಮ್ಯಾಟೊ ಹಾಗೂ ಹ್ಯಾಕರ್ ಒನ್ ಮುಂತಾದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕೆಲಸ ಮಾಡಿರುವ ಜೈಸ್ವಾಲ್, ಆ್ಯಪಲ್, ಪೇಪಾಲ್ ಮತ್ತು ಗಿಟ್ಹಬ್ನಂತಹ ದಿಗ್ಗಜ ಕಂಪನಿಗಳ ಉತ್ಪನ್ನಗಳಲ್ಲೂ ಭದ್ರತಾ ದೋಷಗಳನ್ನು ಪತ್ತೆಹಚ್ಚಿ ಸೈಬರ್ ಭದ್ರತಾ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.