ಜಪಾನ್​ನಲ್ಲಿ ತಮ್ಮ ದುಬಾರಿ ಐಫೋನ್​ ಕಳೆದುಕೊಂಡ ಮರುಕ್ಷಣವೇ ಭಾರತೀಯ ಮಹಿಳೆಗೆ ಕಾದಿತ್ತು ಅಚ್ಚರಿ...! Indian Woman

ಜಪಾನ್​ನಲ್ಲಿ ತಮ್ಮ ದುಬಾರಿ ಐಫೋನ್​ ಕಳೆದುಕೊಂಡ ಮರುಕ್ಷಣವೇ ಭಾರತೀಯ ಮಹಿಳೆಗೆ ಕಾದಿತ್ತು ಅಚ್ಚರಿ...! Indian Woman
ಜಪಾನ್​ನಲ್ಲಿ ತಮ್ಮ ದುಬಾರಿ ಐಫೋನ್​ ಕಳೆದುಕೊಂಡ ಮರುಕ್ಷಣವೇ ಭಾರತೀಯ ಮಹಿಳೆಗೆ ಕಾದಿತ್ತು ಅಚ್ಚರಿ...! Indian Woman
Published on: 

ಪ್ರಮುಖ ಮುಖ್ಯಾಂಶಗಳು

  • ಜಪಾನ್ ದೇಶದಲ್ಲಿ ಐಫೋನ್ ಕಳೆದುಕೊಂಡು ಅಚ್ಚರಿ ರೀತಿಯಲ್ಲಿ ಮರಳಿ ಪಡೆದ ಭಾರತೀಯ ಮಹಿಳೆ
  • ಫೋನ್ ಕಳೆದುಹೋಗಿರುವ ವಿಚಾರ ಹಲವು ಗಂಟೆಗಳ ಬಳಿಕ ನೆನಪಿಗೆ ಬಂದರೂ ಆ್ಯಪ್ ಮೂಲಕ ಟ್ರ್ಯಾಕ್ ಮಾಡಿದ ಯುವತಿ
  • ಮಧ್ಯರಾತ್ರಿಯ ವೇಳೆಯೂ ಯಾವುದೇ ಅಂಜಿಕೆಯಿಲ್ಲದೆ ಒಂಟಿಯಾಗಿ ಫೋನ್ ಹುಡುಕಿಕೊಂಡು ಹೊರಟ ಪ್ರಗತಿ
  • ಗಂಟೆಗಳ ಕಾಲ ಜನಸಂದಣಿಯ ನಡುವೆಯೂ ತಾನು ಬಿಟ್ಟುಹೋದ ಜಾಗದಲ್ಲೇ ಸುರಕ್ಷಿತವಾಗಿ ಸಿಕ್ಕ ದುಬಾರಿ ಮೊಬೈಲ್
ಟೊಕಿಯೋ : ದೂರದ ಜಪಾನ್‌ ದೇಶದಲ್ಲಿ ನೆಲೆಸಿರುವ ಭಾರತೀಯ ಮಹಿಳೆಯೊಬ್ಬರು ( Indian Woman ) ತಾವು ಕಳೆದುಕೊಂಡ ಐಫೋನ್ 16 ಪ್ರೊ ಮೊಬೈಲ್ ಅನ್ನು ಅಚ್ಚರಿ ಎಂಬಂತೆ ಕೆಲವೇ ಕ್ಷಣಗಳಲ್ಲಿ ಮತ್ತೊಮ್ಮೆ ಸುರಕ್ಷಿತವಾಗಿ ಮರಳಿ ಪಡೆದುಕೊಂಡಿದ್ದಾರೆ. ಈ ಅಪರೂಪದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ನೆಟ್ಟಿಗರ ಹುಬ್ಬೇರಿಸಿದೆ.
ಜಪಾನ್‌ನಲ್ಲಿ ವಾಸವಿರುವ ಪ್ರಗತಿ ಎಂಬ ಭಾರತೀಯ ಮಹಿಳೆಗೆ ಸಾರ್ವಜನಿಕ ಸ್ಥಳಗಳಲ್ಲಿ ಆಗಾಗ್ಗೆ ತನ್ನ ಫೋನ್ ಅನ್ನು ಮರೆತುಬರುವ ಅಭ್ಯಾಸವಿದೆ. ಈ ಹಿಂದೆಯೂ ಹಲವು ಬಾರಿ ಇದೇ ರೀತಿ ತಮ್ಮ ಮೊಬೈಲ್ ಕಳೆದುಕೊಂಡು ಮರಳಿ ಪಡೆದ ಅನುಭವ ಹೊಂದಿದ್ದಾರೆ. ಎಂದಿನಂತೆ ಈ ಬಾರಿಯೂ ತಮ್ಮ ದುಬಾರಿ ಐಫೋನ್ 16 ಪ್ರೊ ಅನ್ನು ಎಲ್ಲೋ ಮರೆತುಬಂದಿದ್ದು, ಹಲವು ಗಂಟೆಗಳ ಬಳಿಕವಷ್ಟೇ ತಮಗೆ ಫೋನ್ ಕಳೆದುಹೋಗಿರುವುದು ನೆನಪಿಗೆ ಬಂದಿದೆ.
ತಕ್ಷಣವೇ ಎಚ್ಚೆತ್ತ ಪ್ರಗತಿ ಅವರು ಮತ್ತೊಂದು ಆ್ಯಪಲ್ ಸಾಧನದಲ್ಲಿ 'ಫೈಂಡ್ ಮೈ' (Find My) ಅಪ್ಲಿಕೇಶನ್ ಬಳಸಿ ಟ್ರ್ಯಾಕ್ ಮಾಡಿದಾಗ, ತಮ್ಮ ಫೋನ್ ಸುಮಾರು 600 ಮೀಟರ್ ದೂರದಲ್ಲಿದೆ ಎಂಬುದು ಗೊತ್ತಾಗಿದೆ. ಅಷ್ಟೊತ್ತಿಗಾಗಲೇ ಮಧ್ಯರಾತ್ರಿ 12 ಗಂಟೆಯಾಗಿದ್ದರೂ, ಹಿಂದಿನ ಅನುಭವಗಳ ಮೇಲಿನ ನಂಬಿಕೆಯಿಂದ ಅವರು ಧೈರ್ಯ ಮಾಡಿ ಒಂಟಿಯಾಗಿ ಫೋನ್ ಹುಡುಕಿಕೊಂಡು ಹೊರಟಿದ್ದಾರೆ.
ಹಿಂದೊಮ್ಮೆ ಪೊಲೀಸ್ ಠಾಣೆಯಲ್ಲಿ, ಮತ್ತೊಮ್ಮೆ ತರಕಾರಿ ಮಾರುಕಟ್ಟೆಯಲ್ಲಿ ಹಾಗೂ ಎರಡು ಬಾರಿ ಬಟ್ಟೆ ಬದಲಾಯಿಸುವ ಟ್ರಯಲ್ ರೂಮ್‌ಗಳಲ್ಲಿ ತಮ್ಮ ಫೋನ್ ಕಳೆದುಕೊಂಡಿದ್ದರೂ ಅವು ಸುರಕ್ಷಿತವಾಗಿ ಸಿಕ್ಕಿದ್ದನ್ನು ಪ್ರಗತಿ ಈ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದಾರೆ. ಅದೇ ರೀತಿ ಆ್ಯಪ್ ಮೂಲಕ ತಮ್ಮ ಮೊಬೈಲ್ ಇದ್ದ ಕಡೆ ಸಾಗುತ್ತಿದ್ದಂತೆ ಅಂತರವು 100 ಮೀಟರ್‌ಗೆ ಇಳಿದಿದೆ. ಅಷ್ಟು ಗಂಟೆಗಳ ಕಾಲ ಯಾರೂ ಮುಟ್ಟದೆ ಫೋನ್ ಅಲ್ಲೇ ಇರುತ್ತದೆ ಎಂಬ ದೃಢ ವಿಶ್ವಾಸ ಪ್ರಗತಿ ಅವರಲ್ಲಿತ್ತು. ಅಂತಿಮವಾಗಿ ಅವರ ಫೋನ್​ ಅವರಿಗೆ ದೊರಕಿದೆ.
ಸ್ಥಳಕ್ಕೆ ತಲುಪಿ ನೋಡಿದಾಗ ಗಂಟೆಗಳ ಕಾಲ ಜನಸಂದಣಿಯ ನಡುವೆ ಆಕೆಯ ಐಫೋನ್ ಬಿದ್ದಿದ್ದ ಜಾಗದಲ್ಲೇ ಸುರಕ್ಷಿತವಾಗಿತ್ತು. ಜಪಾನ್ ದೇಶದ ಪ್ರಾಮಾಣಿಕತೆ ಮತ್ತು ಸುರಕ್ಷಿತ ವಾತಾವರಣದಿಂದ ಮಾತ್ರ ಇದು ಸಾಧ್ಯ ಎಂದು ಬಣ್ಣಿಸಿರುವ ಪ್ರಗತಿ, ತಾವು ಐಫೋನ್ ಕಳೆದುಕೊಳ್ಳುವುದು ಇದು ಐದನೇ ಬಾರಿಯಾಗಿದ್ದು, ಪ್ರತಿ ಬಾರಿಯೂ ಫೋನ್ ಮರಳಿ ಸಿಕ್ಕಿರುವುದು ನಿಜಕ್ಕೂ ನಂಬಲಸಾಧ್ಯ ಎಂದು ಖುಷಿ ಹಂಚಿಕೊಂಡಿದ್ದಾರೆ, (ಏಜೆನ್ಸೀಸ್​).