ದೆಹಲಿಯಲ್ಲಿ ಬೃಹತ್​​ ಪ್ರತಿಭಟನೆ: ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಎಎಪಿ ಪಟ್ಟು; 50 ಕ್ಕೂ ಹೆಚ್ಚು ನಾಯಕರು ಅರೆಸ್ಟ್, 11 ಮೆಟ್ರೋ ನಿಲ್ದಾಣ ಬಂದ್! AAP Protest

ದೆಹಲಿಯ ಜಂತರ್-ಮಂತರ್‌ನಲ್ಲಿ ಎಎಪಿಯಿಂದ ಬೃಹತ್ ಪ್ರತಿಭಟನೆ; ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಪಟ್ಟು ಹಿಡಿದು ಪ್ರತಿಭಟನೆ ನಡೆಸಿದ 50ಕ್ಕೂ ಹೆಚ್ಚು ನಾಯಕಕರ ಬಂಧನ ಹಾಗೂ 11 ಮೆಟ್ರೋ ನಿಲ್ದಾಣಗಳ ಬಂದ್ ಕುರಿತ ಸಂಪೂರ್ಣ ಸುದ್ದಿ ಇಲ್ಲಿದೆ.
Scenes of the massive protest and subsequent arrest of AAP leaders at Delhi's Jantar Mantar, demanding the resignation of the Chief Election Commissioner or the concerned official.
ದೆಹಲಿಯ ಜಂತರ್-ಮಂತರ್‌ನಲ್ಲಿ ಮುಖ್ಯ ಚುನಾವಣಾ ಆಯುಕ್ತ/ಸಂಬಂಧಿತ ಅಧಿಕಾರಿಯ ರಾಜೀನಾಮೆಗೆ ಆಗ್ರಹಿಸಿ ಎಎಪಿ ನಾಯಕರು ನಡೆಸಿದ ಬೃಹತ್ ಪ್ರತಿಭಟನೆ ಹಾಗೂ ಬಂಧನದ ದೃಶ್ಯ
Published on: 

ನವದೆಹಲಿ: ಕೇಂದ್ರ ಚುನಾವಣಾ ಆಯೋಗ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾರಿ ಪ್ರತಿ ಭಟನೆ ನಡೆಯುತ್ತಿದೆ. ಈ ಹೋರಾಟವನ್ನು ಆಮ್​ ಆದ್ಮಿ ಪಾರ್ಟಿ ನೇತೃತ್ವದಲ್ಲಿ ನಡೆಸಲಾಗುತ್ತಿದ್ದು, ಇದನ್ನು ಕೂಡ ಜಂತರ್​​- ಮಂತರ್​ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಆದರೆ, ಪ್ರತಿಭಟನೆ ತೀವ್ರವಾಗುತ್ತಿದ್ದಂತೆ ಎಎಪಿ ನಾಯಕರಾದ ಸಂಜೀವ್ ಝಾ ಮತ್ತು ಸೌರಭ್ ಭಾರದ್ವಾಜ್ ಸೇರಿದಂತೆ ಸುಮಾರು 50 ಕ್ಕೂ ಹೆಚ್ಚಿನ ಪ್ರತಿಭಟನಾಕಾರರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆಂದು ಹೇಳಲಾಗುತ್ತಿದೆ.

ನಮಗೆ ಪ್ರತಿಭಟಿಸುವ ಹಕ್ಕಿದೆ!

ಪೊಲೀಸರು ಬಂಧಿಸಲು ಮುಂದಾದಾಗ ಮಾಧ್ಯಮದವರೊಂದಿಗೆ ಮಾತನಾಡಿದ ಎಎಪಿ ನಾಯಕ ಸೌರಭ್ ಭಾರದ್ವಾಜ್, ಈ ದೇಶದಲ್ಲಿ ನಮಗೆ ಪ್ರತಿಭಟಿಸಲು ಕಾನೂನಾತ್ಮಕ ಹಕ್ಕಿದೆ. ನಾನು ನಡೆದುಕೊಂಡೇ ಜಂತರ್​-ಮಂತರ್​ ಅನ್ನು ತಲುಪಿದ್ದೇನೆ. ಮಧ್ಯಾಹ್ನದ ಹೊತ್ತಿಗೆ ಜೆನ್​-ಜೀ ಸಮೂದಾಯ ಹಾಗೂ ಮಹಿಳೆಯರು ಬರಲಿದ್ದಾರೆ.

ಈಗ ನನ್ನನ್ನು ಬಂಧಿಸಲು ಪೊಲೀಸರು ಬಂಧಿದ್ದಾರೆ, ನಾವು ಪ್ರತಿಭಟನೆ ನಡೆಸಲು ಅನುಮತಿ ಪಡೆದಿಲ್ಲ ಎನ್ನುವುದು ಇವರ ಆರೋಪವಾಗಿದೆ. ಆದರೆ ಆರು ದಿನಗಳ ಹಿಂದೆಯೇ ನಾವು ಜಂತರ್​-ಮಂತರ್​ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುವುದಾಗಿ ಪೊಲೀಸರಿಗೆ ಅರ್ಜಿ ಸಲ್ಲಿಸಿದ್ದೆವೆಂದು ಭಾರದ್ವಾಜ್ ತಿಳಿಸಿದ್ದಾರೆ.

Also Read
ಚೀನಾದ ಬಾಕ್ಸರ್‌ಗೆ "ಲವ್ಲಿ" ಪಂಚ್‌! ಹುಟ್ಟುಹಬ್ಬದಂದೇ ಚಿನ್ನದ ಪದಕ; ನೂತನ ದಾಖಲೆ ನಿರ್ಮಿಸಿದ ಭಾರತದ ಹೆಮ್ಮೆಯ ಪುತ್ರಿ! Lovlina Borgohain
Scenes of the massive protest and subsequent arrest of AAP leaders at Delhi's Jantar Mantar, demanding the resignation of the Chief Election Commissioner or the concerned official.

ಇಂಟರ್ನೆಟ್ ಕಡಿತ!

ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್‌ ತಮ್ಮ ಸ್ಥಾನಕ್ಕೆ ಕೂಡಲೇ ರಾಜೀನಾಮೆ ಸಲ್ಲಿಸಬೇಕು ಹಾಗೂ ಎಸ್​ಐಆರ್​ ಪ್ರಕ್ರಿಯೆಯನ್ನು ತಕ್ಷಣ ನಿಲ್ಲಿಸಬೇಕೆನ್ನುವುದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆಯಾಗಿದೆ.

ಇಂದು ಜಂತರ್​-ಮಂತರ್​ನಲ್ಲಿ ಪ್ರತಿಭಟನೆ ತೀವ್ರವಾಗುವ ಹಿನ್ನಲೆ, ದೆಹಲಿ ಸುತ್ತ-ಮುತ್ತ ಇಂಟರ್ನೆಟ್ ಸೇವೆಯನ್ನು ಕಡಿತ ಮಾಡಿರುವುದಾಗಿ ತಿಳಿದು ಬಂದಿದೆ. ಸೋಷಿಯಲ್​ ಮೀಡಿಯಾನಲ್ಲಿ ಸುಳ್ಳು ಸುದ್ದಿಗಳನ್ನು ಹಂಚಿಕೊಂಡು ಪರಿಸ್ಥಿತಿ ಹದಗೆಡಿಸುವ ಸಾಧ್ಯತೆಯಿರುವ ಕಾರಣ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾಗಿ ದೆಹಲಿ ಪೊಲೀಸ್​ ಪ್ರಮುಖರು ತಿಳಿಸಿದ್ದಾರೆ.

ದೆಹಲಿ ಪೊಲೀಸರು ಜಂತರ್ ಮಂತರ್, ಜೈ ಸಿಂಗ್ ರಸ್ತೆ, ಅಶೋಕ್ ರಸ್ತೆ, ಫಿರೋಜ್ ಷಾ ರಸ್ತೆ, ಜನಪಥ್ ರಸ್ತೆ ಮತ್ತು ಸುತ್ತಮುತ್ತಲಿನ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.

11 ಮೆಟ್ರೋ ನಿಲ್ದಾಣಗಳಲ್ಲಿ ಸೇವೆ ರದ್ದು!

ಜಂತರ್​-ಮಂತರ್​ನಲ್ಲಿ ಆಮ್​ ಆದ್ಮಿ ಪಕ್ಷ ಪ್ರತಿಭಟನೆ ನಡೆಸುತ್ತಿರುವ ಹಿನ್ನಲೆ ಹಾಗೂ ಇಂದೇ ಕಾಕ್ರೋಚ್​ ಜನತಾ ಪಾರ್ಟಿ ಕೂಡ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ನಡೆಸುವುದಾಗಿ ಘೋಷಿಸಿರುವ ಕಾರಣ ಇಂದು ದೆಹಲಿ ಮೆಟ್ರೋ ಸಂಚಾರದಲ್ಲಿ ಭಾರಿ ವ್ಯತ್ಯಯ ಕಂಡುಬರಲಿದ್ದು, ಮಾಹಿತಿ ಪ್ರಕಾರ ಸುಮಾರು 11 ನಿಲ್ದಾಣಗಳಲ್ಲಿ ಮೆಟ್ರೋ ಸಂಚಾರ ನಿರ್ಬಂಧಿಸಲಾಗಿದೆ.

ದೆಹಲಿ ಮೆಟ್ರೋ ರೈಲ್​ ಕಾಪೋರೇಷನ್​ ಹಂಚಿಕೊಂಡಿರುವ ಮಾಹಿತಿ ಪ್ರಕಾರ, ಜನಪಥ್, ಪಟೇಲ್ ಚೌಕ್​, ಕೇಂದ್ರ ಸಚಿವಾಲಯ, ರಾಜೀವ್ ಚೌಕ್, ಸೇವಾತೀರ್ಥ, ಮಂಡಿ ಹೌಸ್, ಲೋಕ ಕಲ್ಯಾಣ ಮಾರ್ಗ, INA, ಚಾವ್ರಿ ಬಜಾರ್, ರಾಮಕೃಷ್ಣ ಆಶ್ರಮ ಮಾರ್ಗ ಮತ್ತು ನವದೆಹಲಿಯಲ್ಲಿ ನಿಲ್ದಾಣಗಳಲ್ಲಿ ಮುಂದಿನ ಆದೇಶ/ ಪ್ರಕಟನೆವರೆಗೆ ಯಾವುದೇ ಮೆಟ್ರೋ ಸಂಚಾರ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net