ಈ ಕುರಿತು ಮಾಹಿತಿ ನೀಡಿರುವ ರೈಲ್ವೆ ಅಧಿಕಾರಿಗಳು, ಕೋಟಾದ ವಿಕ್ರಮ್ಗಢ ಅಲೋಟ್ ರೈಲು ನಿಲ್ದಾಣದ ಬಳಿ ಬೆಳಿಗ್ಗೆ 5:15ರ ಸುಮಾರಿಗೆ ಬಿ -1 ಕೋಚ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೋಗಿಯಲ್ಲಿ 68 ಪ್ರಯಾಣಿಕರಿದ್ದರು ಎನ್ನಲಾಗಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಎಲ್ಲಾ ಪ್ರಯಾಣಿಕರನ್ನು ರೈಲಿನಿಂದ ಸುರಕ್ಷಿತವಾಗಿ ಇಳಿಸಿ, ಕೋಟಾವರೆಗಿನ ಪ್ರಯಾಣಕ್ಕಾಗಿ ಅವರನ್ನು ಇತರ ಬೋಗಿಗಳಲ್ಲಿ ಇರಿಸಲಾಯಿತು ಎಂದು ಹೇಳಿದ್ದಾರೆ.