ನಾಳೆಯಿಂದ E20 ಪೆಟ್ರೋಲ್ ವಿರುದ್ಧ ಬೃಹತ್ ಚಳುವಳಿ; ಕೇಜ್ರಿವಾಲ್ ಅಭಿಯಾನ: ತೆಹ್ಸೀನ್ ಪೂನಾವಾಲ ಉಪವಾಸ ಸತ್ಯಾಗ್ರಹ | E20 petrol

 ಸಾಮಾಜಿಕ ಕಾರ್ಯಕರ್ತ ಪೂನಾವಲಾ ಮತ್ತು ಅರವಿಂದ್ ಕೇಜ್ರಿವಾಲ್
ಸಾಮಾಜಿಕ ಕಾರ್ಯಕರ್ತ ಪೂನಾವಲಾ ಮತ್ತು ಅರವಿಂದ್ ಕೇಜ್ರಿವಾಲ್
Published on
ನವದೆಹಲಿ: ಶನಿವಾರ(ಆ. 01) ದೆಹಲಿಯಲ್ಲಿ E20 ಪೆಟ್ರೋಲ್ ವಿರುದ್ಧ ಬೃಹತ್ ಚಳುವಳಿ ಪ್ರಾರಂಭವಾಗುವ ಸಾಧ್ಯತೆಯಿದ್ದು, ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅಭಿಯಾನ ಆರಂಭಿಸುತ್ತಿದ್ದು, ಸಾಮಾಜಿಕ ಕಾರ್ಯಕರ್ತ ತೆಹ್ಸೀನ್ ಪೂನಾವಾಲ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ ಎಂದು ವರದಿಯಾಗಿದೆ.
ಕೇಂದ್ರದ 20% ಎಥೆನಾಲ್ ಮಿಶ್ರಿತ ಪೆಟ್ರೋಲ್ ವಿರುದ್ಧ ರಾಷ್ಟ್ರೀಯ ಅಭಿಯಾನವನ್ನು ಪ್ರಾರಂಭಿಸುವ ಮುನ್ನಾ ದಿನವಾದ ಇಂದು, ಅರವಿಂದ್ ಕೇಜ್ರಿವಾಲ್ ಪ್ರಮುಖ ವ್ಯಕ್ತಿಯೊಬ್ಬರು ಆಂದೋಲನಕ್ಕೆ ಸೇರಲಿದ್ದಾರೆ ಎಂದು ಸುಳಿವು ನೀಡಿದ್ದಾರೆ.
ಜುಲೈ 5ರಂದು ಎಥೆನಾಲ್ ಮಿಶ್ರಣದ ವಿಷಯಕ್ಕೆ ಸಂಬಂಧಿಸಿದಂತೆ ಮೊದಲ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಾಮಾಜಿಕ ಕಾರ್ಯಕರ್ತ ಪೂನಾವಲಾ ಅವರು, ಗಾಂಧಿ ಸ್ಮೃತಿಗೆ ಮೆರವಣಿಗೆ ನಡೆಸಿ ಉಪವಾಸ ಸತ್ಯಾಗ್ರಹವನ್ನು ಆರಂಭಿಸುವುದಾಗಿ ಘೋಷಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಕೇಜ್ರಿವಾಲ್, ನಾಳೆ (ಆಗಸ್ಟ್ 1) ನಡೆಯಲಿರುವ 'E20 ವಿರುದ್ಧದ ರಾಷ್ಟ್ರೀಯ ಟೌನ್ ಹಾಲ್' ಕಾರ್ಯಕ್ರಮದಲ್ಲಿ, ಜನರ ಸಮಸ್ಯೆಗಳನ್ನು ಆಲಿಸಲು ಮತ್ತು E20 ಕುರಿತು 'ನಿರ್ಧಾರ' ಕೈಗೊಳ್ಳಲು ದೇಶದ ಪ್ರಮುಖ ವ್ಯಕ್ತಿಯೊಬ್ಬರು ನನ್ನೊಂದಿಗೆ ಇರಲಿದ್ದಾರೆ. ನೀವೂ ಬಂದು ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ ಎಂದು ಪೋಸ್ಟ್ ಮಾಡಿದ್ದಾರೆ.
ಜುಲೈ 27ರಂದು ಎಎಪಿ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಅವರು, ನೀಟ್ ಅಕ್ರಮದ ವಿರುದ್ಧ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ರೀತಿಯ ಹೋರಾಟದಂತೆ E20 ಪೆಟ್ರೋಲ್ ವಿರುದ್ಧವೂ ಆಂದೋಲನಕ್ಕೆ ಕೈಜೋಡಿಸುವಂತೆ ಮನವಿ ಮಾಡಿದ್ದರು. ದೇಶದ ಯುವಕರು ದುರಹಂಕಾರಿ ಸರ್ಕಾರವನ್ನು ತಲೆಬಾಗುವಂತೆ ಮಾಡಿದ್ದಾರೆ. ಮತ್ತು ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕಾಯಿತು. ಜನರು ರೊಚ್ಚಿಗೇಳುವ ಮೊದಲೇ E20 ಮಿಶ್ರಿತ ಪೆಟ್ರೋಲ್ ಸಮಸ್ಯೆಯನ್ನು ಸಹ ಪರಿಹರಿಸುವಂತೆ ನಾನು ಪ್ರಧಾನಿಯನ್ನು ಒತ್ತಾಯಿಸುತ್ತೇನೆ ಎಂದು ಹೇಳಿದ್ದರು.
ಇನ್ನೂ ನವದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ನಾಳೆ E20 ಪೆಟ್ರೋಲ್ ವಿರುದ್ಧದ ರಾಷ್ಟ್ರೀಯ ಅಭಿಯಾನ ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗಲಿದ್ದು ಆರಂಭವಾಗಲಿದ್ದು, ಭಾಗವಹಿಸುವರು ಬೆಳಿಗ್ಗೆ 11.30 ರೊಳಗೆ ಆಗಮಿಸಬೇಕೆಂದು ಮನವಿ ಮಾಡಿದ್ದಾರೆ. ದೆಹಲಿಯ ಹೊರಗೆ ವಾಸಿಸುವ ಮತ್ತು ಖುದ್ದಾಗಿ ಹಾಜರಾಗಲು ಸಾಧ್ಯವಾಗದವರು ಆನ್‌ಲೈನ್‌ನಲ್ಲಿ ಸೇರುವಂತೆ ಹೇಳಿದ್ದು, 8588833212ಗೆ ವಾಟ್ಸಾಪ್ ಸಂಖ್ಯೆಯನ್ನು ಬಿಡುಗಡೆ ಮಾಡಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net