ಒಂದೇ ದಿನ ಹುಟ್ಟಿ, ಒಂದೇ ದಿನ ಮದ್ವೆಯಾಗಿ, ಒಂದೇ ದಿನ ತಾಯಿಯಾದ ಅವಳಿ ಸಹೋದರಿಯರು: ಪದವಿ, ಉದ್ಯೋಗವೂ ಒಂದೇ! Sisters

ಕೇರಳದ ಕೊಟ್ಟಾಯಂನಲ್ಲಿ ನಡೆದ ಈ ಅಪರೂಪದ ಘಟನೆಯು ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.
Sisters
ಒಂದೇ ದಿನ ಹುಟ್ಟಿ, ಒಂದೇ ದಿನ ಮದ್ವೆಯಾಗಿ, ಒಂದೇ ದಿನ ತಾಯಿಯಾದ ಅವಳಿ ಸಹೋದರಿಯರು
Published on

ತಿರುವನಂತಪುರಂ: ಒಂದೇ ದಿನ ಮದುವೆಯಾಗಿ, ಆಶ್ಚರ್ಯಕರ ರೀತಿಯಲ್ಲಿ ವಿವಾಹ ವಾರ್ಷಿಕೋತ್ಸವದಂದೇ ಹೆಣ್ಣು ಮಕ್ಕಳಿಗೆ ಜನ್ಮ ನೀಡುವ ಮೂಲಕ ಅಕ್ಕ-ತಂಗಿ ( Sisters ) ಇಬ್ಬರು ಎಲ್ಲರ ಗಮನ ಸೆಳೆದಿದ್ದಾರೆ. ಕೇರಳದ ಕೊಟ್ಟಾಯಂನಲ್ಲಿ ನಡೆದ ಈ ಅಪರೂಪದ ಘಟನೆಯು ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.

ಕೇರಳದ ಕೊಟ್ಟಾಯಂನ ತಿರುವಾಂಚೂರು ಚೆರುಕಾಟ್ಟೆಲ್ ಸಿ.ಪಿ. ಅನಿಲ್ ಕುಮಾರ್ ಮತ್ತು ಸೂರ್ಯ ಅನಿಲ್ ಕುಮಾರ್ ದಂಪತಿಯ ಅವಳಿ ಹೆಣ್ಣು ಮಕ್ಕಳಾದ ಅತಿರಾ ಮತ್ತು ಆರ್ಯ (28) ಅವರ ಬದುಕಿನಲ್ಲಿ ನಡೆದಿರುವ ಕಾಕತಾಳೀಯಗಳು ನಿಜಕ್ಕೂ ಅಚ್ಚರಿ ಮೂಡಿಸುವಂತಿವೆ. ನವೆಂಬರ್ 17, 1997ರಂದು ಜನಿಸಿದ ಈ ಅವಳಿ ಸಹೋದರಿಯರು ತಮ್ಮ ವಿದ್ಯಾಭ್ಯಾಸದಿಂದ ಹಿಡಿದು ವೃತ್ತಿಜೀವನದವರೆಗೆ ಪ್ರತಿಯೊಂದು ಹಂತದಲ್ಲೂ ಒಂದೇ ಹಾದಿಯನ್ನು ಆಯ್ಕೆ ಮಾಡಿಕೊಂಡರು.

Also Read
ನಾಗರಿಕ ಪ್ರಜ್ಞೆಯ ಆಟದಲ್ಲಿ ನಾವೆಲ್ಲ ಸೋತಿದ್ದೇವೆ; 5 ಗಂಟೆ ರೈಲು ಪ್ರಯಾಣದ ಬಗ್ಗೆ ಸಂಸದ Tejasvi Surya ಪತ್ನಿ ಹೇಳಿದ್ದಿಷ್ಟು
Sisters

ನರ್ಸಿಂಗ್ ಪದವಿ ಪೂರ್ಣಗೊಳಿಸಿದ ಇಬ್ಬರೂ ಹೈದರಾಬಾದ್‌ನ ಡಿಆರ್‌ಡಿಒ ಅಪೋಲೋ ಆಸ್ಪತ್ರೆಯಲ್ಲಿ ಒಟ್ಟಿಗೆ ಕೆಲಸ ಆರಂಭಿಸಿದರು. ಅಷ್ಟೇ ಅಲ್ಲದೆ, 2022ರ ಏಪ್ರಿಲ್ 17ರಂದು ಇಬ್ಬರಿಗೂ ಒಂದೇ ದಿನ ವಿವಾಹ ಮಹೋತ್ಸವವೂ ನೆರವೇರಿತ್ತು.

ಮದುವೆಯ ಬಳಿಕವೂ ತಮ್ಮ ನರ್ಸಿಂಗ್ ವೃತ್ತಿಯನ್ನು ಮುಂದುವರಿಸಿದ ಅತಿರಾ ಮತ್ತು ಆರ್ಯ ತಮ್ಮ ಪತಿರೊಂದಿಗೆ ವಿದೇಶಕ್ಕೆ ತೆರಳಿದರು. ಅತಿರಾ ಕತಾರ್‌ನ ದೋಹಾ ಕ್ಲಿನಿಕ್ ಆಸ್ಪತ್ರೆಯಲ್ಲಿ ನರ್ಸ್ ಆಗಿ ಸೇರಿಕೊಂಡರೆ, ಆರ್ಯ ಒಮಾನ್‌ನ ಬದ್ರ್ ಅಲ್ ಸಮ್ಮಾ ಆಸ್ಪತ್ರೆಯಲ್ಲಿ ಉದ್ಯೋಗ ಪಡೆದರು. ವಿಶೇಷವೆಂದರೆ, ಗರ್ಭಾವಸ್ಥೆಯ ಸಂಪೂರ್ಣ ದಿನಗಳಲ್ಲಿ ಪರಸ್ಪರ ಒಬ್ಬರಿಗೊಬ್ಬರು ನಿರಂತರವಾಗಿ ಬೆಂಬಲವಾಗಿ ನಿಂತುಕೊಂಡಿದ್ದ ಈ ಅಕ್ಕ-ತಂಗಿಯರು, ತಮ್ಮ ಗರ್ಭಧಾರಣೆಯ ಅವಧಿಯನ್ನೂ ಬಹುತೇಕ ಒಟ್ಟಿಗೇ ಅನುಭವಿಸಿದರು.

ಇಬ್ಬರ ಜೀವನದಲ್ಲೂ ಅತಿ ದೊಡ್ಡ ಖುಷಿಯ ಕ್ಷಣ ಆಗಸ್ಟ್ 9, 2026ರಂದು ಒಟ್ಟಿಗೆ ಬಂದು ಅಪ್ಪಳಿಸಿತು. ಹೌದು, ಕೇವಲ ಕೆಲವೇ ಗಂಟೆಗಳ ಅಂತರದಲ್ಲಿ ಅತಿರಾ ಮತ್ತು ಆರ್ಯ ಇಬ್ಬರೂ ಒಂದೇ ದಿನ ಗಂಡು ಮಕ್ಕಳಲ್ಲ, ಬದಲಾಗಿ ಹೆಣ್ಣು ಮಕ್ಕಳನ್ನು ಪಡೆದು ಮತ್ತೊಮ್ಮೆ ಅಚ್ಚರಿ ಮೂಡಿಸಿದರು. ಕತಾರ್‌ನ ಆಯಿಷಾ ಬಿನ್ ಹಮದ್ ಆಸ್ಪತ್ರೆಯಲ್ಲಿ ಅತಿರಾ ತಮ್ಮ ಮಗಳು ನಿವೇದ್ಯಾ ಅಖಿಲೇಶ್ ಜನ್ಮ ನೀಡಿದರೆ, ಅದೇ ದಿನ ಆರ್ಯ ತಾನು ಕೆಲಸ ಮಾಡುತ್ತಿರುವ ಒಮಾನ್‌ನ ಆಸ್ಪತ್ರೆಯಲ್ಲಿ ಮಗಳು ನಿತಾರಾ ಚಿರನ್ಳಿಗೆ ಜನ್ಮ ನೀಡಿದರು.

Also Read
ನಿದ್ದೆಯಲ್ಲಿ ಬರುವ ಕನಸುಗಳು ಭಯ ಹುಟ್ಟಿಸುತ್ತಾ? ಹಾಗಿದ್ರೆ, ಯಾವ ಕನಸು ಅಪಾಯದ ಮುನ್ಸೂಚನೆ? ಇಲ್ಲಿದೆ ಮಾಹಿತಿ | Scary Dreams
Sisters

ಒಂದೇ ದಿನದಲ್ಲಿ ಅವಳಿ ಸಹೋದರಿಯರು ತಾಯಂದಿರಾಗಿ ಹೊಸ ಜವಾಬ್ದಾರಿಗೆ ಕಾಲಿಟ್ಟಿದ್ದು ಕುಟುಂಬದಲ್ಲಿ ಸಂಭ್ರಮ ಮನೆಮಾಡುವಂತೆ ಮಾಡಿತು. ತದನಂತರ ಕೇರಳಕ್ಕೆ ಮರಳಿದ ಈ ಮುದ್ದಾದ ಜೋಡಿ, ಸೆಪ್ಟೆಂಬರ್ 20ರಂದು ತಮ್ಮ ಮಕ್ಕಳ ಆಗಮನವನ್ನು ಬಂಧು-ಮಿತ್ರರೊಡನೆ ಅತ್ಯಂತ ಸಡಗರದಿಂದ ಆಚರಿಸಿಕೊಂಡರು. ಜನನದಿಂದ ಹಿಡಿದು ಮದುವೆ ಮತ್ತು ತಾಯತನದವರೆಗೆ ಎಲ್ಲವೂ ಒಂದೇ ದಿನ ಬಂದೊದಗಿರುವ ಈ ಸುಂದರ ಕಥೆಯು ಪ್ರಕೃತಿಯ ಅಚ್ಚರಿಗಳಲ್ಲೊಂದಾಗಿ ಎಲ್ಲರ ಮನಸ್ಸು ಗೆದ್ದಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net