ಠೇವಣಿ ಹಣಕ್ಕಾಗಿ ಅಕ್ಕನ ಅಸ್ಥಿಪಂಜರವನ್ನೇ ತಂದ ವೃದ್ಧನ ಕೇಸ್; 'ಆತ ಕುಡಿದಿದ್ದ' ಎಂದು ಸಮಜಾಯಿಶಿ ಕೊಟ್ಟ Odisha Bank

Odisha Bank
Odisha Bank
Published on

ಪ್ರಮುಖ ಮುಖ್ಯಾಂಶಗಳು

  • ಜೀತುಗೆ ಹಣ ತಲುಪಿಸಿದ್ದೇವೆ ಎಂದು ಮಾಹಿತಿ ಹಂಚಿಕೊಂಡ ಒಡಿಶಾ ಬ್ಯಾಂಕ್
  • ನಾವು ಮಾಹಿತಿ ನೀಡುವ ವೇಳೆ ಜೀತು ಕುಡಿದಿದ್ದ ಹೀಗಾಗಿ ಇಷ್ಟೆಲ್ಲ ಫಜೀತಿಯಾಗಿದೆ ಎಂದು ಸ್ಪಷ್ಟನೆ
  • ಸತ್ತವರ ದಾಖಲೆ ಬೇಕು ಎಂದಿದ್ದಕ್ಕೆ 3ಕಿ.ಮೀ ದೂರದಿಂದ ಶವ ಹೊತ್ತು ತಂದ ಜೀತು ಮುಂಡ
ಒಡಿಶಾ: 19 ಸಾವಿರಕ್ಕೂ ಹೆಚ್ಚಿನ ಠೇವಣಿ ಹಣ ಪಡೆಯುವ ಸಲುವಾಗಿ ಸತ್ತ ಅಕ್ಕನ ಅಸ್ಥಿಪಂಜರವನ್ನು ಬ್ಯಾಂಕ್​ಗೆ ಹೊತ್ತು ತಂದ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಕಳೆದ ಕೆಲವು ದಿನದಿಂದ ಚರ್ಚೆಗೆ ಗ್ರಾಸವಾಗಿತ್ತು. ಈ ಬಗ್ಗೆ ಒಡಿಶಾ ಗ್ರಾಮೀಣ ಬ್ಯಾಂಕ್​​ ಸ್ಪಷ್ಟನೆಯೊಂದನ್ನು ಬಿಡುಗಡೆ ಮಾಡಿದೆ. 
ಹೌದು, ಎಕ್ಸ್​ನಲ್ಲಿ ಕಳೆದ ಎರಡು ದಿನಗಳಿಂದ ಬುಡಕಟ್ಟು ಜನಾಂಗದ ಜೀತು ಮುಂಡಾ ತನ್ನ ಬೆನ್ನ ಮೇಲೆ ಈಗಾಗಲೇ ಮೃತಪಟ್ಟಿರುವ ಆತನ ಅಕ್ಕ ಕರ್ಳಾ ಮುಂಡಾ(56) ಅಸ್ಥಿ ಪಂಜರ ಹಿಡಿದು, ದಾರಿಯುದ್ದಕ್ಕೂ ನಡೆದುಕೊಂಡು ಬಂದು ಬ್ಯಾಂಕ್​ವೊಂದರ ಬಳಿ ಇರಿಸಿದ್ದ. ಈ ಘಟನೆ ಕಿಯೋಂಜಾರ್‌ನ ಡಯಾನಾಲಿ ಗ್ರಾಮದಲ್ಲಿ ನಡೆದಿದೆ ಎಂದು ವಿಡಿಯೋ ಹಂಚಿಕೊಳ್ಳಲಾಗಿತ್ತು. 

ಬ್ಯಾಂಕ್​ಗೆ ಅಸ್ಥಿಪಂಜರ ತಂದ ವೃದ್ಧ

ಕರ್ಳಾ ಅನಾರೋಗ್ಯದಿಂದ ಮೃತಪಟ್ಟ ಬಳಿಕ ಅವರ ಹೆಸರಲಿಲ್ಲ ಠೇವಣಿ ಪಡೆಯಲು ಜಿತು ಮುಂಜಾನೆಯಿಂದ ಸಂಜೆವರೆಗೂ ಅಲೆದಾಡಿದ್ದಾರೆ. ಬ್ಯಾಂಕ್​ ಸಿಬ್ಬಂದಿ ವ್ಯಕ್ತಿಯ ಹಿನ್ನೆಲೆ ನೋಡದೆ, ದಾಖಲೆ ಬೇಕು ಎಂದು ಸಿಟ್ಟಾಗಿದ್ದಾರೆ. ಏನೂ ಮಾಡಬೇಕು ಎಂದು ತಿಳಿಯದೆ ಮತ್ತೆ ಹಣಕ್ಕೆ ಬೇಡಿಕೆಯಿಟ್ಟಿದ್ದಾನೆ.  ಸಿಟ್ಟಾದ ಸಿಬ್ಬಂದಿ ಆಕೆ ಸತ್ತಿದ್ದಾಳೆ ಎನ್ನುವುದಕ್ಕೆ ದಾಖಲೆ ಬೇಕು ಎಂದಾಗ ಈ ಮೂರು ಕಿಲೋಮೀಟರ್ ನಡೆದು ಅಕ್ಕನ ಅಸ್ಥಿಪಂಜರ ಬ್ಯಾಂಕ್​ ಮುಂದಿಟ್ಟಿದ್ದಾರೆ. ಇವಳೇ ನನ್ನ ಅಕ್ಕ ಸತ್ತಿದ್ದಾಳೆ ನೋಡಿ. ಈಗ ಹಣ ಕೊಡಿ ಎಂದಿದ್ದಾನೆ. 
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಧಿಕಾರಿಗಳು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು, ಗ್ರಾಹಕರ ಬಳಿ ವರ್ತಿಸುವ ಬಗ್ಗೆ ಪಾಠ ಮಾಡಿದ್ದಾರೆ. ಆ ಬೆನ್ನಲ್ಲೇ ಒಡಿಶಾ ಗ್ರಾಮೀಣ ಬ್ಯಾಂಕ್​ ಎಕ್ಸ್​ನಲ್ಲಿ ಈ ರೀತಿ ಬರೆದುಕೊಂಡಿದೆ.

ಬ್ಯಾಂಕ್​ ಹೇಳಿದ್ದು ಹೀಗೆ

ಒಡಿಶಾ ಗ್ರಾಮೀಣ  ಬ್ಯಾಂಕ್​​ನಿಂದ ಮರಣದ ನಂತರದ ಕ್ಲೈಮ್​  ಪ್ರಕ್ರಿಯೆಗಾಗಿ ವ್ಯಕ್ತಿಯೊಬ್ಬರು ತನ್ನ ಸಹೋದರಿಯ ಅಸ್ಥಿಪಂಜರವನ್ನು ತಂದಿದ್ದಾರೆ  ಎನ್ನುವ ವಿಚಾರವಾಗಿ ನಾವು ಈ ವಿವರ ನೀಡಲು ಬಯಸುತ್ತೇವೆ
ಸರ್ಕಾರಿ ಅಧಿಕಾರಿಗಳು ಮರಣ ಪ್ರಮಾಣ ಪತ್ರವನ್ನು ಆತನಿಗೆ ವಿತರಿಸಿದ್ದಾರೆ. ದಾಖಲೆ ಸಿಕ್ಕ ತಕ್ಷಣವೇ ವಾರಸುದಾರನಿಗೆ 19,402 ರೂವನ್ನು ನೀಡಲಾಗಿದೆ.  ಬ್ಯಾಂಕ್​ ಅಧಿಕಾರಿಗಳು ಸತ್ತ ವ್ಯಕ್ತಿಯ ದಾಖಲೆ ಬೇಕು ಎಂದು ಕೇಳಿದ್ದಕ್ಕೆ ಜೀತು ಅವರು ಅವರ ಅಕ್ಕನ ಕೊಳೆತ ಮೃತದೇಹ ತಂದರು ಎಂದು ಹರಿದಾಡುತ್ತಿರುವ ವಿಡಿಯೋ ತಪ್ಪು ಮಾಹಿತಿ. 
ಜೀತು ಅವರು ಬ್ಯಾಂಕ್​ ಸಿಬ್ಬಂದಿ ಹೇಳಿದ್ದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ದಾಖಲೆ ಬೇಕು ಎಂದು ಕೇಳಿದ್ದೆವು. ಆತ ಅಂದಿನ ದಿನ ಕುಡಿದಿದ್ದ ಕಾರಣ  ಕ್ಲೈಮ್ ಸೆಟಲ್ಮೆಂಟ್ ಪ್ರಕ್ರಿಯೆಯ ಬಗ್ಗೆ ತಿಳಿಯದೇ ಇಷ್ಟೆಲ್ಲ ರಾದ್ಧಾಂತವಾಗಿದೆ. ಶಾಖಾ ವ್ಯವಸ್ಥಾಪಕರು ವಿವರಿಸಿದ ಬ್ಯಾಂಕಿಂಗ್ ನಿಯಮಗಳನ್ನು ಮತ್ತು ಪ್ರಕ್ರಿಯೆಗಳನ್ನು ಒಪ್ಪಿಕೊಳ್ಳಲು ಅವರು ಸಿದ್ಧರಿರಲಿಲ್ಲ. ನಮ್ಮ ಬ್ಯಾಂಕ್​​​​ ಜವಾಬ್ದಾರಿ ಮತ್ತು ಜನರ ಮೇಲಿನ ಕಾಳಜಿಯಿಂದ ಸೇವೆ ಸಲ್ಲಿಸುತ್ತದೆ ಎಂದು ಬರೆದುಕೊಂಡಿದ್ದಾರೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net