ನೀನು ಸಾಕು, ಈ ಮಕ್ಕಳು ಬೇಡ ಎಂದು ಪೊಲೀಸ್​ ಠಾಣೆಯಲ್ಲೇ ಬಿಟ್ಹೋದ ತಾಯಿ; ಮುಂದಾಗಿದ್ದಿಷ್ಟು..Telangana

Telangana
Telangana
Published on

ಪ್ರಮುಖ ಮುಖ್ಯಾಂಶಗಳು

  • ಪೊಲೀಸ್​ ಠಾಣೆಯಲ್ಲಿ ಕೌನ್ಸಲಿಂಗ್ ಪಡೆಯುವಾಗ ಮಕ್ಕಳನ್ನು ಬಿಟ್ಟು ಹೋದ ದಂಪತಿ
  • ಕರೀಂನಗರ ಜಿಲ್ಲೆಯಲ್ಲಿ ದಂಪತಿಯಿಂದ ಹೈಡ್ರಾಮಾ, ಗೊಂದಲಕ್ಕೆ ಸಿಲುಕಿದ ಪೊಲೀಸರು
  • ಪೋಷಕರು ಪೊಲೀಸರ ಕರೆಗೂ ಉತ್ತರಿಸದಿದ್ದಾಗ ಅಜ್ಜಿ ಆಸರೆಗೊಪ್ಪಿಸಿದ ಅಧಿಕಾರಿಗಳು
ತೆಲಂಗಾಣ: ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎಂಬುದು ಕನ್ನಡದ ಹಳೆಯ ಜನಪದ ಗಾದೆ. ಆದರೆ, ಇಂತದ್ದೇ ಒಂದು ಸಂದಿಗ್ಧ ಪರಿಸ್ಥಿತಿಗೆ ತೆಲಂಗಾಣದ(Telangana) ಇಬ್ಬರು ಮಕ್ಕಳು ಸಿಲುಕಿದ್ದಾರೆ.
ಹೌದು, ಪೊಲೀಸರ ಕೌನ್ಸಲಿಂಗ್​ ಅವಧಿ ಮಧ್ಯೆ ಇಬ್ಬರು ಹೆಣ್ಣುಮಕ್ಕಳನ್ನು ಠಾಣೆಯಲ್ಲೇ ಬಿಟ್ಟು ಹೋದ ಘಟನೆ ತೆಲಂಗಾಣದ ಕರೀಂನಗರ ಜಿಲ್ಲೆಯ ಲೋವರ್ ಮನೇರ್ ಡ್ಯಾಮ್ (ಎಲ್‌ಎಂಡಿ)ಯಲ್ಲಿ ನಡೆದಿದೆ. ದಂಪತಿಯ ಈ ಹೈಡ್ರಾಮಾದಿಂದಾಗಿ ಪೊಲೀಸರು ಏಪ್ರಿಲ್​ 28ರಂದು ಗೊಂದಲಕ್ಕೆ ಸಿಲುಕಿದ್ರು.

ಪ್ರೇಮಿಸಿ ಮದುವೆ..ಈಗ ಕಿತ್ತಾಟ

ನರ್ಸಿಂಗ್​ ವಿದ್ಯಾರ್ಥಿನಿಯಾಗಿದ್ದ ಲಲಿತಾ, ಅಂಗಡಿ ಮಾಲೀಕನಾದ ರವಿ ಕುಮಾರ್​ ಎಂಬುವವರನ್ನು ಹತ್ತು ವರ್ಷದ ಹಿಂದೆ ಪರಿಚಯ ಮಾಡಿಕೊಂಡು, ಪ್ರೀತಿ ಮಾಡುತ್ತಿದ್ದರು. ನಂತರ ದಾಂಪತ್ಯ ಜೀವನಕ್ಕೂ ಕಾಲಿಟ್ಟರು. ಕೆಲ ವರ್ಷದಲ್ಲೇ ಅವರಿಬ್ಬರ ನಡುವೆ ಮನಸ್ತಾಪ ಹೆಚ್ಚಾಯಿತು. ಇಬ್ಬರ ಮಧ್ಯೆ ಆಗಾಗ ವಾದ-ವಿವಾದ ಕಾಣಿಸಿಕೊಂಡಿತ್ತು.
ಹೀಗಾಗಿ ಒಮ್ಮೆ ಲಲಿತಾ ಕೌಟುಂಬಿಕ ಸಮಸ್ಯೆ ಬಗ್ಗೆ ಪೊಲೀಸರಿಗೆ ದೂರಿದ್ದರು. ಇದರಿಂದಾಗಿ ಅಧಿಕಾರಿಗಳು ಎರಡೂ ಕಡೆಯವರನ್ನು ಕೌನ್ಸೆಲಿಂಗ್‌ಗೆ ಕರೆಯಬೇಕಾಯಿತು. ಏಪ್ರಿಲ್​ 28ರಂದು ಸಹ ಕೌನ್ಸಲಿಂಗ್​ಗೆ ಇಬ್ಬರನ್ನು ಕಡೆದು ಮಾತನಾಡಿಸುವ ವೇಳೆ, ಲಲಿತಾ ತಾನು ಧರಿಸಿದ್ದ ಕಾಲುಂಗುರ, ಮಾಂಗಲ್ಯ ಸೂತ್ರ, ಮೇಜಿನ ಮೇಲೆ ಇಟ್ಟು ಇನ್ನು ಸಾಕು. ನಿನ್ನೊಂದಿಗೆ ಜೀವನ ನಡೆಸಲು ಸಾಧ್ಯವಿಲ್ಲ. ಮಕ್ಕಳನ್ನು ನೋಡಿಕೊಳ್ಳಲು ಆಗೋದಿಲ್ಲ ಎಂದು ಹೋರಟು ಹೋದರು.

ಠಾಣೆಯಲ್ಲೇ ಬಿಟ್ರು ಮಕ್ಕಳನ್ನು

ಪತ್ನಿ ಎದ್ದು ಹೊರನಡೆದ ಕೂಡಲೇ ರವಿ ಸಹ ಆಕೆಯನ್ನು ಹಿಂಬಾಲಿಸಿ ಇಬ್ಬರು ಹೆಣ್ಣು ಮಕ್ಕಳನ್ನು ಠಾಣೆಯಲ್ಲಿಯೇ ಬಿಟ್ಟು ಹೊರಟರು. ಈಗ ಪೊಲೀಸರಿಗೆ ಏನೂ ಮಾಡಲು ತೋಚಲಿಲ್ಲ. ಇಬ್ಬರಿಗೂ ಸಂಪರ್ಕಿಸಲು ಯತ್ನಿಸಿದರು. ಆದರೆ, ಇಬ್ಬರಿಗೂ ಕಾಲ್​​ ಕನೆಕ್ಟ್​ ಆಗಲಿಲ್ಲ.

ಅಜ್ಜಿ ಆಸರೆಯಲ್ಲಿ ಮಕ್ಕಳು

ಇತ್ತ ಇಬ್ಬರು ಹೆಣ್ಣುಮಕ್ಕಳು ತಮ್ಮ ಪೋಷಕರ ವರ್ತನೆ ಕಂಡು ಅಳಲು ಪ್ರಾರಂಭಿಸಿದ್ದಾರೆ. ಠಾಣೆಯಲ್ಲಿ ಏನಾಗುತ್ತಿದೆ ಎಂಬುದನ್ನು ಅರಿಯದ ಅವರಿಗೆ ದುಃಖ ಇಮ್ಮಡಿಯಾಯ್ತು. ಕೊನೆಗೆ ಕರೀಂ ನಗರ ಪೊಲೀಸರು ಅವರ ಅಜ್ಜಿಗೆ ಕರೆ ಮಾಡಿ, ಮೊಮ್ಮಕ್ಕಳನ್ನು ಕರೆದೊಯ್ಯುವಂತೆ ಹೇಳಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಯಾವುದೇ ಕಾನೂನಿನ ಆಧಾರದ ಮೇಲೆ ಪ್ರಕರಣ ದಾಖಲಾಗಿಲ್ಲ. ಆದರೆ, ಈ ಬಗ್ಗೆ ಪೊಲೀಸರು ಸೂಕ್ಷ್ಮವಾಗಿ ತಿಳಿಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದಿದ್ಧಾರೆ. ಪೋಷಕರ ಜಗಳದ ಮಧ್ಯೆ ಮಕ್ಕಳಿಗಾಗುತ್ತಿರುವ ಸಮಸ್ಯೆ ಮತ್ತು ಅವರ ಮಾನಸಿಕ ಪರಿಸ್ಥಿತಿ ಮೇಲೆ ಬೀರುವ ಪರಿಣಾಮದ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದ್ದಾರೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net