ಅಂಕಲ್​ ಮನೆಯಲ್ಲೇ ಚಿನ್ನ ಕದ್ದು 'ಥಾರ್' ಖರೀದಿಸಿ ಅಂಕಲ್​ನನ್ನೇ ಪೂಜೆಗೆ ಕರೆದು ಸಿಕ್ಕಿಬಿದ್ದ ಖತರ್ನಾಕ್​ ಯುವಕ! Mahindra Thar

ಮಹಾರಾಷ್ಟ್ರದ ಪನ್ಹಾಲಾ ತಾಲೂಕಿನ ಸತಾವೆ ಗ್ರಾಮದ ನಿವಾಸಿ ಸಮರ್ ಚವಾಣ್ (19) ಎಂಬ ಯುವಕ ಈ ಕೃತ್ಯವೆಸಗಿದ ಆರೋಪಿ. ಸಮರ್ ತನ್ನ ಚಿಕ್ಕಪ್ಪ ಉಮೇಶ್ ಮಾರುತಿ ಚವಾಣ್ ಅವರ ಮನೆ ಪಕ್ಕದಲ್ಲೇ ವಾಸವಾಗಿದ್ದಾನೆ. ಸುಮಾರು ಒಂದು ತಿಂಗಳ ಹಿಂದೆ ಚಿಕ್ಕಪ್ಪ ಉಮೇಶ್ ಅವರ ಮನೆಗೆ ಕನ್ನ ಹಾಕಿದ್ದ ಸಮರ್, ಅಲ್ಲಿದ್ದ ಸುಮಾರು 15 ತೊಲ (ಸರಿ ಸುಮಾರು 174.96 ಗ್ರಾಂ) ತೂಕದ ಬಂಗಾರದ ಆಭರಣಗಳನ್ನು ಕದ್ದು ಪರಾರಿಯಾಗಿದ್ದ.
Mahindra Thar
ಅಂಕಲ್​ ಮನೆಯಲ್ಲೇ ಚಿನ್ನ ಕದ್ದು 'ಥಾರ್' ಖರೀದಿಸಿ ಅಂಕಲ್​ನನ್ನೇ ಪೂಜೆಗೆ ಕರೆದು ಸಿಕ್ಕಿಬಿದ್ದ ಖತರ್ನಾಕ್​ ಯುವಕ!
Published on: 

ಪುಣೆ: ತನ್ನ ಅಂಕಲ್​ ಮನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕದ್ದು, ಆ ಹಣದಿಂದ ಹೊಸ 'ಮಹೀಂದ್ರಾ ಥಾರ್' ( Mahindra Thar ) ಕಾರು ಖರೀದಿಸಿ, ಕೊನೆಗೆ ಅದೇ ಕಾರಿನ ಪೂಜೆಗೆ ಚಿಕ್ಕಪ್ಪನನ್ನೇ ಆಹ್ವಾನಿಸಿ ಖದೀಮ ಸಿಕ್ಕಿಬಿದ್ದಿರುವ ವಿಚಿತ್ರ ಹಾಗೂ ಅಚ್ಚರಿಯ ಘಟನೆಯೊಂದು ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿ ನಡೆದಿದೆ.

ಮಹಾರಾಷ್ಟ್ರದ ಪನ್ಹಾಲಾ ತಾಲೂಕಿನ ಸತಾವೆ ಗ್ರಾಮದ ನಿವಾಸಿ ಸಮರ್ ಚವಾಣ್ (19) ಎಂಬ ಯುವಕ ಈ ಕೃತ್ಯವೆಸಗಿದ ಆರೋಪಿ. ಸಮರ್ ತನ್ನ ಚಿಕ್ಕಪ್ಪ ಉಮೇಶ್ ಮಾರುತಿ ಚವಾಣ್ ಅವರ ಮನೆ ಪಕ್ಕದಲ್ಲೇ ವಾಸವಾಗಿದ್ದಾನೆ. ಸುಮಾರು ಒಂದು ತಿಂಗಳ ಹಿಂದೆ ಚಿಕ್ಕಪ್ಪ ಉಮೇಶ್ ಅವರ ಮನೆಗೆ ಕನ್ನ ಹಾಕಿದ್ದ ಸಮರ್, ಅಲ್ಲಿದ್ದ ಸುಮಾರು 15 ತೊಲ (ಸರಿ ಸುಮಾರು 174.96 ಗ್ರಾಂ) ತೂಕದ ಬಂಗಾರದ ಆಭರಣಗಳನ್ನು ಕದ್ದು ಪರಾರಿಯಾಗಿದ್ದ.

Also Read
ತೂಕ ಇಳಿದರೂ ಸಿಗದ ಸಂತೋಷ... ಯಾರೂ ಹೇಳದ 6 ಕಹಿ ಸತ್ಯ ಬಿಚ್ಚಿಟ್ಟ 35 KG ತೂಕ ಇಳಿಸಿಕೊಂಡ ಯುವತಿ! Weight Loss
Mahindra Thar

ಆರೋಪಿ ಸಮರ್ ಕದ್ದ ಆಭರಣಗಳನ್ನು ಸ್ಥಳೀಯ ಆಭರಣ ವ್ಯಾಪಾರಿ ಸಂಗ್ರಾಮ್ ಬಾಬಾಸೋ ಮೋರೆ ಎಂಬುವವನ ಸಹಾಯದಿಂದ ಬರೋಬ್ಬರಿ 10 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದನು. ಬಂದ ಹಣದಿಂದ ತಕ್ಷಣವೇ ತನಗೆ ಇಷ್ಟವಾದ ಹೊಸ ಮಹೀಂದ್ರಾ ಥಾರ್ ಎಸ್​ಯುವಿ ಕಾರನ್ನು ಖರೀದಿಸಿದ್ದನು. ಕಾರನ್ನು ಮನೆಗೆ ತಂದ ನಂತರ, ಯಾವುದೇ ಭಯವಿಲ್ಲದಂತೆ ನಟಿಸಿ, ತಾನು ಕಳ್ಳತನ ಮಾಡಿದ್ದ ಅದೇ ಚಿಕ್ಕಪ್ಪ ಉಮೇಶ್‌ ಅವರನ್ನು ಹೊಸ ಕಾರಿನ ಪೂಜೆಗೆ ಬರುವಂತೆ ಆಹ್ವಾನಿಸಿದ್ದನು.

ನೆಂಟರ ಮನೆ ಕಾರಿನ ಪೂಜೆಗೆ ಹೋಗಲು ಸಿದ್ಧರಾಗುತ್ತಿದ್ದ ಉಮೇಶ್ ಮತ್ತು ಅವರ ಪತ್ನಿ, ತೊಟ್ಟುಕೊಳ್ಳಲು ಒಡವೆಗಳನ್ನು ಹುಡುಕಿದಾಗ ಬೀರುದಲ್ಲಿದ್ದ ಚಿನ್ನಾಭರಣಗಳು ಗಾಯಬ್ ಆಗಿರುವುದು ಬೆಳಕಿಗೆ ಬಂದಿದೆ. ವಿಚಿತ್ರವೆಂದರೆ, ಅದೇ ಸ್ಥಳದಲ್ಲಿದ್ದ ಉಮೇಶ್ ಅವರ ಅಜ್ಜಿಯ ಒಡವೆಗಳನ್ನು ಕಳ್ಳ ಮುಟ್ಟಿರಲಿಲ್ಲ, ಕೇವಲ ಉಮೇಶ್ ಮತ್ತು ಅವರ ಪತ್ನಿಯ ಆಭರಣಗಳನ್ನು ಮಾತ್ರ ಕದಿಯಲಾಗಿತ್ತು. ಇದರಿಂದ ಅನುಮಾನಗೊಂಡ ಕುಟುಂಬಸ್ಥರು, ಈ ಕೃತ್ಯವನ್ನು ಮನೆಯವರೇ ಅಥವಾ ತಮಗೆ ಅತ್ಯಂತ ಹತ್ತಿರದವರೇ ಎಸಗಿರಬೇಕು ಎಂದು ಶಂಕಿಸಿದರು.

ತಕ್ಷಣವೇ ಜಾಗೃತರಾದ ಉಮೇಶ್ ಚವಾಣ್ ಅವರು ಎರಡು ದಿನಗಳ ಹಿಂದೆ ಕೊಡೋಲಿ ಪೊಲೀಸ್ ಠಾಣೆಗೆ ತೆರಳಿ ಆಭರಣ ಕಳುವಾಗಿರುವ ಬಗ್ಗೆ ದೂರು ನೀಡಿದರು. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದಾಗ, ಸಮರ್ ದಿಢೀರನೆ ಹೊಸ ಐಷಾರಾಮಿ ಥಾರ್ ಕಾರು ಖರೀದಿಸಿರುವ ವಿಷಯ ಮತ್ತು ಅದಕ್ಕೆ ಹಣ ಹೇಗೆ ಬಂತು ಎಂಬ ಸಂಗತಿ ಅನುಮಾನಕ್ಕೆ ಕಾರಣವಾಯಿತು. ಪೊಲೀಸರು ಸಮರ್‌ನನ್ನು ವಶಕ್ಕೆ ಪಡೆದು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಆತ ಸತ್ಯವನ್ನು ಒಪ್ಪಿಕೊಂಡಿದ್ದಾನೆ.

Also Read
ಅನಿರುದ್ಧ್ ರವಿಚಂದರ್ ಹಾಡಿಗೆ ಸೊಂಟ ಬಳುಕಿಸಿದ ಸೌಂದರ್ಯ ಗಣಿ ಹನಿ ರೋಸ್​: ವಿಡಿಯೋ ವೈರಲ್​, ನೆಟ್ಟಿಗರು ಫಿದಾ! Honey Rose
Mahindra Thar

ಕಳ್ಳತನದ ಕೃತ್ಯವನ್ನು ಸಂಪೂರ್ಣವಾಗಿ ಒಪ್ಪಿಕೊಂಡ ನಂತರ ಕೊಡೋಲಿ ಪೊಲೀಸರು ಆರೋಪಿ ಸಮರ್ ಚವಾಣ್ ಹಾಗೂ ಕದ್ದ ಆಭರಣಗಳನ್ನು ಖರೀದಿಸಿದ ಜ್ಯುವೆಲ್ಲರ್ ಸಂಗ್ರಾಮ್ ಮೋರೆ ಇಬ್ಬರನ್ನೂ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಅಂಕಲ್​ನನ್ನು ವಂಚಿಸಿ ಕಾರಿನ ಪೂಜೆಗೆ ಕರೆದು ಸಿಕ್ಕಿಬಿದ್ದ ಯುವಕನ ಈ ಹುಚ್ಚಾಟ ಹಾಗೂ ಕಳ್ಳತನದ ಶೈಲಿಯನ್ನು ಕಂಡು ಪೊಲೀಸರೇ ದಂಗಾಗಿದ್ದು, ಕದ್ದ ಆಭರಣ ಹಾಗೂ ಕಾರನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net