ಸಾಕು ಮಾರಾಯ್ರೆ ಈ ಆಫೀಸ್ ಕೆಲಸ! ಎಂದು ಚಹಾ ಅಂಗಡಿ ತೆರೆದ ಯುವಕ: ಈಗ ಆತನ ತಿಂಗಳ ಸಂಪಾದನೆ ಕೇಳಿದ್ರೆ ಹುಬ್ಬೇರಿಸ್ತೀರಾ! Tea Vendor Success

Tea Vendor Success  ಸಾಂದರ್ಭಿಕ ಚಿತ್ರ
Tea Vendor Success ಸಾಂದರ್ಭಿಕ ಚಿತ್ರ
Published on
Tea Vendor Success: ಕಾರ್ಪೊರೇಟ್ ಉದ್ಯೋಗ, ಪ್ರತಿ ತಿಂಗಳು ಕೈಗೆ ಸಿಗುವ ನಿಗದಿತ ಸಂಬಳ ಮತ್ತು ಆಫೀಸ್‌ನ ನಾಲ್ಕು ಗೋಡೆಗಳ ನಡುವಿನ ಜೀವನವನ್ನು ತೊರೆದು ಸ್ವಂತ ಉದ್ಯಮ ಆರಂಭಿಸುವುದು ಎಲ್ಲರಿಗೂ ಸುಲಭದ ಮಾತಲ್ಲ. ಆದರೆ, ಇಲ್ಲೊಬ್ಬ ಯುವಕ ಸೀಮಿತ ಆದಾಯ ಮತ್ತು ಏರುತ್ತಿರುವ ಜೀವನ ವೆಚ್ಚಕ್ಕೆ ಬೇಸತ್ತು, ತಮ್ಮ ಕಾರ್ಪೊರೇಟ್ ಕೆಲಸಕ್ಕೆ ರಾಜೀನಾಮೆ ನೀಡಿ ರಸ್ತೆಬದಿಯ ಚಹಾ ಅಂಗಡಿ ಆರಂಭಿಸುವ ಮೂಲಕ ಇಂದು ತಮ್ಮ ಆದಾಯವನ್ನು ಮೂರು ಪಟ್ಟು ಹೆಚ್ಚಿಸಿಕೊಂಡಿದ್ದಾರೆ. ಈ ರಿಸ್ಕ್ ಮತ್ತು ಶ್ರಮದ ಸಾಹಸಗಾಥೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ಪೋಸ್ಟ್​ನಲ್ಲೇನಿದೆ?

ಅಂಕಿತ ಪಾಂಡೆ (@iamankitpande) ಎಂಬ ಎಕ್ಸ್​ ಬಳಕೆದಾರರೊಬ್ಬರು ತಮ್ಮ ನೆರೆಮನೆಯ ಯುವಕನ ಈ ರೋಚಕ ಪಯಣವನ್ನು ಹಂಚಿಕೊಂಡಿದ್ದಾರೆ. ಆ ಯುವಕ ಹಿಂದೆ 9-ರಿಂದ-5ರ ವರೆಗಿನ ಸಾಮಾನ್ಯ ಕಾರ್ಪೊರೇಟ್ ಡೆಸ್ಕ್ ಕೆಲಸದಲ್ಲಿದ್ದು, ತಿಂಗಳಿಗೆ 38,000 ಸಂಬಳ ಪಡೆಯುತ್ತಿದ್ದ. ಆದರೆ, ಉದ್ಯೋಗದಲ್ಲಿ ಬೆಳವಣಿಗೆಯ ಕೊರತೆ ಮತ್ತು ಹೆಚ್ಚಾಗುತ್ತಿದ್ದ ದೈನಂದಿನ ವೆಚ್ಚಗಳಿಂದಾಗಿ ಆತ ತೀವ್ರ ನಿರಾಶೆಗೊಂಡಿದ್ದರು. ಈ ಸಮಸ್ಯೆಗೆ ಪರ್ಯಾಯ ಮಾರ್ಗ ಕಂಡುಕೊಳ್ಳಲು ನಿರ್ಧರಿಸಿದ್ದ ಆತ, ಕಾರ್ಪೋರೇಟ್​ ಉದ್ಯೋಗಕ್ಕೆ ಗುಡ್​ಬೈ ಹೇಳಿ ರಸ್ತೆಬದಿಯಲ್ಲಿ ಸ್ವಂತ ಚಹಾ ಅಂಗಡಿಯನ್ನು ತೆರೆದಿರುವುದಾಗಿ ಹೇಳಿದರು.
ಆರಂಭದಲ್ಲಿ ನೆರೆಹೊರೆಯ ಜನರು ಇವರು ತಪ್ಪು ಮಾಡುತ್ತಿದ್ದಾರೆಂದು ಭಾವಿಸಿದ್ದರು. ಆದರೆ, ಛಲ ಬಿಡದ ಅವರು ಆಟೋ ಸ್ಟ್ಯಾಂಡ್​ ಬಳಿ ಉತ್ತಮವಾಗಿ ವಿನ್ಯಾಸಗೊಳಿಸಲಾದ ಚಹಾ ಅಂಗಡಿಯನ್ನು ತೆರೆಯಲು ಸುಮಾರು 2 ಲಕ್ಷ ರೂಗಳನ್ನು ಹೂಡಿಕೆ ಮಾಡಿದರು. ಜೊತೆಗೆ ಚಹಾ ತಯಾರಿಸಲು ಇಬ್ಬರು ಮಹಿಳೆಯರನ್ನು ನೇಮಿಸಿಕೊಂಡರು ಎಂದು ಪಾಂಡೆ ಹೇಳಿದ್ದಾರೆ.
ಆದಾಗ್ಯೂ, ಅವರ ಚಹಾ ಅಂಗಡಿಯ ಸರಳ ಮೆನುವಿನಲ್ಲಿ 10 ಕ್ಕೆ ಸಾಮಾನ್ಯ ಚಹಾ ಮತ್ತು 20 ಕ್ಕೆ ಪ್ರೀಮಿಯಂ ಚಹಾ ಲಭ್ಯವಿದೆ. ಇಂದು ಅವರು ಪ್ರತಿದಿನ ಸರಾಸರಿ 400 ಕಪ್‌ಗಳಿಗಿಂತ ಹೆಚ್ಚು ಚಹಾ ಮಾರಾಟ ಮಾಡುತ್ತಿದ್ದಾರೆ. ಇದರಿಂದ ದಿನಕ್ಕೆ ಸರಿಸುಮಾರು 6,000 ಆದಾಯ ಬರುತ್ತಿದ್ದು, ತಿಂಗಳಿಗೆ ಬರೋಬ್ಬರಿ 1.8 ಲಕ್ಷದವರೆಗೆ ವ್ಯಾಪಾರ ಮಾಡುತ್ತಿದ್ದಾರೆ. ಬಾಡಿಗೆ, ಪದಾರ್ಥಗಳು, ಸಂಬಳ ಮತ್ತು ಇತರ ನಿರ್ವಹಣಾ ವೆಚ್ಚಗಳನ್ನು ಭರಿಸಿದ ನಂತರ, ಅವರು ಈಗ ತಿಂಗಳಿಗೆ ಸುಮಾರು 1 ಲಕ್ಷ ರೂ.ಗಳನ್ನು ಶುದ್ಧ ಲಾಭದಲ್ಲಿ ಗಳಿಸುತ್ತಾರೆ.
ಏತನ್ಮಧ್ಯೆ, ಅವರು ಹೊಸದಾಗಿ ವಡಾ ಪಾವ್, ಸಮೋಸಾ ಮತ್ತು ಜಿಲೇಬಿ ಕೌಂಟರ್ ಸೇರಿಸುವ ಮೂಲಕ ವ್ಯಾಪಾರವನ್ನು ಮತ್ತಷ್ಟು ವಿಸ್ತರಿಸಿದರು. ಅವರು ನನಗೆ ನೀಡಿದ ಸಿಹಿತಿಂಡಿಗಳು ಆ ಹೊಸ ಆರಂಭವನ್ನು ಆಚರಿಸಲು. ಒಂದು ವೇಳೆ ಅವರೇನಾದರೂ ಅದೇ ಕೆಲಸದಲ್ಲೇ ಮುಂದುವರೆದಿದ್ದರೆ, ತಿಂಗಳಿಗೆ 38 ಸಾವಿರ ರೂ. ಗಳಿಸುತ್ತಾ ಮುಂದಿನ ಮೌಲ್ಯಮಾಪನಕ್ಕಾಗಿ ಕಾಯುತ್ತಿದ್ದರು. ಕೆಲವೊಮ್ಮೆ ದೊಡ್ಡ ಬಡ್ತಿ ಎಂದರೆ ನೀವೇ ನೀಡುವ ಬಡ್ತಿ ಎಂದು ಬಳಕೆದಾರರು ಬರೆದಿದ್ದಾರೆ.

ಸಾಮಾಜಿಕ ಮಾಧ್ಯಮ ಪ್ರತಿಕ್ರಿಯೆಗಳು

ಈ ಪೋಸ್ಟ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆಯೇ ಅನೇಕ ಬಳಕೆದಾರರನ್ನು ಆಕರ್ಷಿಸಿತು. ಪ್ರತಿ 1 ಯಶಸ್ವಿ ಹೊಸ ಚಹಾ ಅಂಗಡಿಗೆ, ಕೆಲವು ವಾರಗಳ ನಂತರ 99 ಚಹಾ ಅಂಗಡಿಗಳು ಮುಚ್ಚುತ್ತವೆ. ವ್ಯವಹಾರವನ್ನು ನಡೆಸುವುದು ತಮಾಷೆಯಲ್ಲ. ನಿಮ್ಮ ನೆರೆಹೊರೆಯವರಿಗೆ ಧನ್ಯವಾದಗಳು ಮತ್ತು ಶುಭಾಶಯಗಳು ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net