ಇದೇ ವೇಳೆ ಪಂಜಾಬ್ ತನಗೆ ತಾಯಿಯ ತವರುಮನೆ ಇದ್ದಂತೆ ಎಂದು ಹೇಳಿದ ಅವರು, ಆಡಳಿತಾರೂಢ ಆಪ್ (AAP), ಕಾಂಗ್ರೆಸ್ ಮತ್ತು ಶಿರೋಮಣಿ ಅಕಲಿ ದಳ ಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿ ಅಥವಾ ಸೀಟುಗಳ ಹಂಚಿಕೆ ಏನೇ ಇರಲಿ, ತಮ್ಮ ಪಕ್ಷವು ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿದೆ ಎಂದು ಸ್ಪಷ್ಟಪಡಿಸಿದರು (ಏಜೆನ್ಸೀಸ್).