ಪೊಲೀಸರ ತನಿಖೆಯ ಪ್ರಕಾರ, ಮೃತ ವ್ಯಕ್ತಿಯನ್ನು ಜಿಗ್ನೇಶ್ ಮಾವಡಿಯಾ ಎಂದು ಗುರುತಿಸಲಾಗಿದೆ. ಮೇ 31, 2024ರ ರಾತ್ರಿ ಜಿಗ್ನೇಶ್‌ನನ್ನು ಜಾಮ್ನಗರದ ದಾರೇಡ್ ಜಿಐಡಿಸಿ ಪ್ರದೇಶದಲ್ಲಿರುವ ಕೈಗಾರಿಕಾ ಶೆಡ್‌ಗೆ ಕರೆದೊಯ್ದ ಕಿಡಿಗೇಡಿಗಳು, ಸಣ್ಣದಾಗಿ ಎಣ್ಣೆ ಪಾರ್ಟಿ ಮಾಡೋಣ ಎಂಬ ನೆಪದಲ್ಲಿ ಕರೆಸಿಕೊಂಡಿದ್ದರು. ಪತ್ನಿಯ ಕುತಂತ್ರದ ಬಗ್ಗೆ ಅರಿವಿಲ್ಲದ ಜಿಗ್ನೇಶ್, ಆರೋಪಿಗಳನ್ನು ನಂಬಿ, ಅವರು ಕುಡಿಯಲು ಕೊಟ್ಟ ಮದ್ಯವನ್ನು ಸೇವಿಸಿದರು. ಅಸಲಿಗೆ, ಅದು ಸೈನೆಡ್ ಬೆರೆಸಿದ್ದ ಎಣ್ಣೆಯಾಗಿತ್ತು. ಇದನ್ನು ಕುಡಿದ ಆತ, ಕೆಲವು ಗಂಟೆಗಳಲ್ಲೇ ನರಳಿ ನರಳಿ ಪ್ರಾಣಬಿಟ್ಟಿದ್ದಾನೆ. ಇದನ್ನು ಖಚಿತಪಡಿಸಿಕೊಂಡ ಕ್ರೂರಿಗಳು, ಅದೇ ಶೆಡ್‌ನಲ್ಲಿ ಸುಮಾರು 12 ಅಡಿ ಆಳದ ಗುಂಡಿಯನ್ನು ತೆಗೆದು, ಮೃತದೇಹವನ್ನು ಹೂತು, ಅದರ ಮೇಲೆ 1 ಅಡಿ ಕಾಂಕ್ರೀಟ್ ಹಾಕಿ ಮುಚ್ಚಿದ್ದಾರೆ.