ಚುನಾವಣೆ ವೇಳೆ ಪ್ರಚೋದನಕಾರಿ ಭಾಷಣ ಆರೋಪ; ಮಮತಾ ಬ್ಯಾನರ್ಜಿ ಅಳಿಯ ಅಭಿಷೇಕ್ ಮೇಲೆ ಬಿತ್ತು ಕೇಸ್ | Abhishek Banerjee

ಅಭಿಷೇಕ್ ಬ್ಯಾನರ್ಜಿ ಮತ್ತು ಮಮತಾ ಬ್ಯಾನರ್ಜಿ
ಅಭಿಷೇಕ್ ಬ್ಯಾನರ್ಜಿ ಮತ್ತು ಮಮತಾ ಬ್ಯಾನರ್ಜಿ
Published on
ಕೋಲ್ಕತ್ತಾ: ಕಳೆದ ತಿಂಗಳ ನಡೆದ ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಅಳಿಯ ಡೈಮಂಡ್ ಹಾರ್ಬರ್ ಸಂಸದ ಅಭಿಷೇಕ್ ಬ್ಯಾನರ್ಜಿ(Abhishek Banerjee) ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಶನಿವಾರ(ಮೇ 16) ವರದಿಯಾಗಿದೆ.
ಸಾಮಾಜಿಕ ಕಾರ್ಯಕರ್ತ ರಾಜೀವ್ ಸರ್ಕಾರ್ ಎಂಬುವರು ಸಲ್ಲಿಸಿದ ದೂರಿನನ್ವಯ ಶುಕ್ರವಾರ ಎಫ್​ಐಆರ್ ದಾಖಲಾಗಿದೆ. ಚುನಾವಣಾ ಪ್ರಚಾರದ ಸಮಯದಲ್ಲಿ ಬ್ಯಾನರ್ಜಿ ಏಪ್ರಿಲ್ 27 ರಿಂದ ಮೇ 3 ರವರೆಗೆ ಅನೇಕ ಸ್ಥಳಗಳಲ್ಲಿ ಪ್ರಚೋದನಕಾರಿ ಭಾಷಣಗಳನ್ನು ಮಾಡಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಬೆದರಿಕೆ ಹಾಕಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಹಾಗೆಯೇ ಏಪ್ರಿಲ್ 7ರಂದು ಕೋಲ್ಕತ್ತಾದಲ್ಲಿ ನಡೆದ ಚುನವಣಾ ಪ್ರಚಾರದ ವೇಳೆ, ಮೇ 4ರಂದು ಅವರನ್ನು ರಕ್ಷಿಸಲು ಯಾರು ಬರುತ್ತಾರೆ ಎಂದು ನಾನು ನೋಡುತ್ತೇನೆ. ದೆಹಲಿಯ ಯಾವ ಗಾಡ್‌ಫಾದರ್ ಅವರ ರಕ್ಷಣೆಗೆ ಬರುತ್ತಾರೆ ನೋಡುತ್ತೇನೆ ಎಂದು ಬ್ಯಾನರ್ಜಿ ಹೇಳಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಬ್ಯಾನರ್ಜಿ ವಿರುದ್ಧ ದಾಖಲಾದ ಎಫ್​ಐಆರ್​ನಲ್ಲಿ ಬಿಎನ್​ಎಸ್​ ಕಾಯ್ದೆಯಡಿಯಲ್ಲಿ ಗಲಭೆಗಳನ್ನು ಪ್ರಚೋದಿಸುವುದು, ವಿವಿಧ ಗುಂಪುಗಳ ನಡುವೆ ಸಾಮರಸ್ಯವನ್ನು ಭಂಗಗೊಳಿಸುವ ಮೂಲಕ ದ್ವೇಷವನ್ನು ಹರಡುವುದು, ಸಾವಿನ ಭಯ ಹುಟ್ಟುಹಾಕುವುದು, ಬೆದರಿಕೆ ಆರೋಪವನ್ನು ಹೊರಿಸಲಾಗಿದೆ (ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net