ವಿದೇಶಿ ಪ್ರಯಾಣದ ಮೇಲಿನ ತೆರಿಗೆ ಸುದ್ದಿ ಸುಳ್ಳು: ಖಾಸಗಿ ಮಾಧ್ಯಮದ ವರದಿಗೆ ಪ್ರಧಾನಿ ಸ್ಪಷ್ಟನೆ; ಕ್ಷಮೆಯಾಚಿಸಿದ ಸಂಸ್ಥೆ | PM Modi
ಪ್ರಧಾನಿ ನರೇಂದ್ರ ಮೋದಿ
Published on:
Copied
Follow Us
ನವದೆಹಲಿ: ಕೇಂದ್ರ ಸರ್ಕಾರ ವಿದೇಶಿ ಪ್ರಯಾಣದ ಮೇಲೂ ಸೆಸ್ ಅಥವಾ ತೆರಿಗೆ ವಿಧಿಸುವ ಬಗ್ಗೆ ಉನ್ನತ ಮಟ್ಟದಲ್ಲಿ ಚರ್ಚಿಸಲಾಗುತ್ತಿದೆ ಎಂಬ ಖಾಸಗಿ ಸುದ್ದಿ ಮಾಧ್ಯಮದ ವರದಿಯನ್ನು ತಳ್ಳಿಹಾಕಿರುವ ಪ್ರಧಾನಿ ಮೋದಿ(PM Modi), ಅದು ಸುಳ್ಳು, ಸತ್ಯದ ಒಂದು ಅಂಶವೂ ಇಲ್ಲ ಎಂದು ಹೇಳಿದ್ದಾರೆ.
ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದಿಂದ ಉಂಟಾ ತೀವ್ರ ಆರ್ಥಿಕ ಪರಿಣಾಮವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ವಿದೇಶಿ ಪ್ರಯಾಣದ ಮೇಲೆ ಸೆಸ್, ತೆರಿಗೆ ಅಥವಾ ಸರ್‌ಚಾರ್ಜ್ ವಿಧಿಸುವ ಪ್ರಸ್ತಾಪವನ್ನು ಸರ್ಕಾರದ ಉನ್ನತ ಮಟ್ಟದಲ್ಲಿ ಚರ್ಚಿಸಲಾಗುತ್ತಿದೆ ಎಂದು ಸಿಎನ್ಬಿಸಿ-ಟಿವಿ 18 ವರದಿ ಮಾಡಿತ್ತು.
ಈ ಕುರಿತು ಶುಕ್ರವಾರ(ಮೇ 15) ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಇದು ಸಂಪೂರ್ಣ ಸುಳ್ಳು. ಇದರಲ್ಲಿ ಸ್ವಲ್ಪವೂ ಸತ್ಯವಿಲ್ಲ. ವಿದೇಶ ಪ್ರಯಾಣದ ಮೇಲೆ ಅಂತಹ ನಿರ್ಬಂಧಗಳನ್ನು ಹೇರುವ ಪ್ರಶ್ನೆಯೇ ಇಲ್ಲ. ನಮ್ಮ ಜನರಿಗೆ 'ವ್ಯವಹಾರ ಸುಲಭ' ಮತ್ತು 'ಜೀವನ ಸುಲಭ'ವನ್ನು ಸುಧಾರಿಸಲು ನಾವು ಬದ್ಧರಾಗಿದ್ದೇವೆ ಎಂದಿದ್ದಾರೆ.
ಕ್ಷಮೆಯಾಚಿಸಿದ ಸುದ್ದಿಸಂಸ್ಥೆ
ವರದಿಯನ್ನು ಪ್ರಧಾನಿ ಸುಳ್ಳು ಎಂದು ತಕ್ಷಣ ಎಚ್ಚೆತ್ತುಕೊಂಡ ಸಂಸ್ಥೆ, ಸರ್ಕಾರವು ವಿದೇಶ ಪ್ರಯಾಣದ ಮೇಲೆ ತೆರಿಗೆ/ಸೆಸ್ ಅನ್ನು ಪರಿಗಣಿಸುತ್ತಿದೆ ಎಂಬ ನಮ್ಮ ವರದಿ ನಿಖರವಾಗಿಲ್ಲ. ನಾವು ವರದಿಯನ್ನು ಹಿಂತೆಗೆದುಕೊಳ್ಳುತ್ತೇವೆ ಮತ್ತು ತಪ್ಪಿಗೆ ವಿಷಾದಿಸುತ್ತೇವೆ ಎಂದು ಪೋಸ್ಟ್ ಮಾಡಿದೆ (ಏಜೆನ್ಸೀಸ್).