ಮಾಳವೀಯ ನಗರ ಅಗ್ನಿ ದುರಂತ: ಹೋಟೆಲ್ ಮಾಲೀಕನ ಬಳಿಕ ಕುಕ್ ಕೇಶವ್ ನೇಗಿ ಅರೆಸ್ಟ್; ಸಾವಿನ ಸಂಖ್ಯೆ 21 ಕ್ಕೆ ಏರಿಕೆ! Malviya Nagar Fire Accident
ಹೋಟೆಲ್ ಮಾಲೀಕ ಲವಕೇಶ್ ಬೆನ್ನಲ್ಲೇ ಅಡುಗೆ ಭಟ್ಟ ಕೇಶವ್ ನೇಗಿ ಬಂಧನ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ದೆಹಲಿಯ ಮಾಳವೀಯ ನಗರದ ಹೋಟೆಲ್ ಅಗ್ನಿ ದುರಂತದಲ್ಲಿ ಸಾವಿನ ಸಂಖ್ಯೆ 21ಕ್ಕೆ ಏರಿಕೆ
ಹೋಟೆಲ್ ಮಾಲೀಕ ಲವಕೇಶ್ ಬೆನ್ನಲ್ಲೇ ಅಡುಗೆ ಭಟ್ಟ ಕೇಶವ್ ನೇಗಿ ಬಂಧನ
15 ಜನರಿಗೆ ಆಸ್ಪತ್ರೆಯಲ್ಲಿ ಮುಂದುವರೆದ ಚಿಕಿತ್ಸೆ
ನವದೆಹಲಿ: ಜೂನ್. 3 ರಂದು ಮಾಳವೀಯ ನಗರದ ಸಮೀಪವಿರುವ ಫ್ಲರಿಶ್ ಬೆಡ್ ಅಂಡ್ ಬ್ರೇಕ್ಫಾಸ್ಟ್ ಹೋಟೆಲ್ನಲ್ಲಿ ಬೆಂಕಿ ಕಾಣಿಸಿಕೊಂಡು (Malviya Nagar Fire Accident), 21 ಮಂದಿ ಸಜೀವ ದಹನಗೊಂಡ ಘಟನೆಗೆ ಸಂಬಂಧಿಸಿದಂತೆ ಹೋಟೆಲ್ನ ಕುಕ್ ಕೇಶವ್ ನೇಗಿ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜೂನ್. 4 ರಂದು ಹೋಟೆಲ್ ಮಾಲೀಕ, ಲವಕೇಶ್ ಬಜಾಜ್ನ ಬಂಧನದ ನಂತರ ಕೇಶವ್ ನೇಗಿಯನ್ನು ಬಂಧಿಸಲಾಗಿದೆ. ನೇಗಿಯ ಅಜಾಗರೂಕತೆ ಇಂದಲೇ ಅಗ್ನಿ ದುರಂತ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಜೂನ್. 3 ರಂದು ದೆಹಲಿಯ ಹೃದಯ ಭಾಗದಲ್ಲಿರುವ ಮಾಳವೀಯ ನಗರದಲ್ಲಿರುವ ಫ್ಲರಿಶ್ ಬೆಡ್ ಅಂಡ್ ಬ್ರೇಕ್ಫಾಸ್ಟ್ ಹೋಟೆಲ್ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಲಿಗೆಗ ಈಡೀ ಹೋಟೆಲ್ ಸುಟ್ಟು ಭಸ್ಮವಾಗಿದ್ದು, ಸುಮಾರು 21 ಜನ ಸಜೀವ ದಹನವಾಗಿದ್ದಾರೆ.
ಹೀಗೆ ಸಜೀವ ದಹನಗೊಂಡವರಲ್ಲಿ ಸುಮಾರು 13 ಜನ ವಿದೇಶಿಯರಿದ್ದು, ಉಳಿದವರು ಭಾರತದ ಮೂಲದವರಾಗಿದ್ದಾರೆ. ಸದ್ಯ 15 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅದರಲ್ಲಿ 13 ಜನ ವೆಂಟಿಲೇಟರ್ನಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಮಾಹಿತಿ ಲಭ್ಯವಾಗಿದೆ.
ನಾನು ಸ್ಥಳದಿಂದ ಓಡಿ ಹೋಗಿದ್ದೆ
ಪ್ರಕರಣಕ್ಕೆ ಸಂಬಂಧಿಸಿದಂತೆ ಹೋಟೆಲ್ ಮಾಲೀಕ ಲವಕೇಶ್ ಬಜಾಜ್ನನ್ನು ವಶಕ್ಕೆ ಪಡೆಯಲಾಗಿದೆ. ಪೊಲೀಸ್ ವಿಚಾರಣೆಯಲ್ಲಿ ಮಾಲೀಕ ಬಜಾಜ್, ನಾನು ಹೋಟೆಲ್ಗೆ ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿದೆ. ಆದರೆ ನನಗೆ ಭಯವಾಯ್ತು ಹೀಗಾಗಿ ನನ್ನ ಕಾರನ್ನು ತೆಗೆದುಕೊಂಡು ಅಲ್ಲಿಂದ ಹೊರಟುಬಿಟ್ಟೆ. ಮನೆಗೆ ಹೋಗಲು ಹೆದರಿಕೆಯಾಯ್ತು ಹೀಗಾಗಿ ಸುಮ್ಮನೆ ರಸ್ತೆಗಳಲ್ಲಿ ಅಡ್ಡಾಡುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ.
2022ರಲ್ಲಿ ಅಹ್ಲುವಾಲಿಯಾ ಎಂಬುವವರಿಂದ ಲವಕೇಶ್ ಅವರು ಹೋಟೆಲ್ನನ್ನು ಸ್ವಾದೀನ ಪಡಿಸಿಕೊಂಡರು ಎನ್ನಲಾಗಿದೆ. ಹೋಟೆಲ್ ಕಮ್ ಅತಿಥಿಗೃಹವಾಗಿರುವ ಈ ಕಟ್ಟಡದ ಹಿಂದೆ ಖಾದಿ ಅಂಗಡಿ ಇತ್ತು. ಖರೀದಿ ಮಾಡುವ ಸಮಯದಲ್ಲಿ ಕಟ್ಟಡ ಶಿಥಿಲಾವಸ್ಥೆಯಲ್ಲಿತ್ತು ಎಂದು ಹೇಳಿದ್ದಾರೆ, (ಏಜನ್ಸೀಸ್).