ಹೌಜ್ ರಾಣಿ ಪ್ರದೇಶದಲ್ಲಿರುವ ಹೋಟೆಲ್ಗೆ ಮುಂಜಾನೆ 8:50ಕ್ಕೆ ಹೋಟೆಲ್ನ ನೆಲ ಮಾಳಿಗೆಗೆ ಬೆಂಕಿ ಹೊತ್ತಿಕೊಂಡಿದನ್ನು ಮಾಲೀಕ ಲವಕೇಶ್ ಗಮನಿಸಿದ್ದರು. ಆದರೆ, ಸಿಕ್ಕಿಬೀಳುವ ಭಯದಿಂದ ಯಾರಿಗೂ ಈ ಬಗ್ಗೆ ಮಾಹಿತಿ ನೀಡದೆ, ಸಂತ್ರಸ್ತರನ್ನು ರಕ್ಷಿಸಲು ಹೋಗದೆ ಅಲ್ಲಿಂದ ಕಾಲ್ಕಿತ್ತಿದ್ದಾರೆ ಎನ್ನುವುದು ಪೊಲೀಸರ ವಿಚಾರಣೆಯಿಂದ ತಿಳಿದುಬಂದಿದೆ,