ಕೋರ್ಟ್ ಕಣ್ಣು ತಪ್ಪಿಸಿ ಓಡುತ್ತಿರುವ ಮಲ್ಯಗೆ 'ಲಾಸ್ಟ್ ಚಾನ್ಸ್'! ಭಾರತಕ್ಕೆ ಮರಳುವ ಉದ್ದೇಶ ಇದೆಯೋ ಇಲ್ಲವೋ ಸ್ಪಷ್ಟಪಡಿಸಿ ಎಂದ ನ್ಯಾಯಪೀಠ | Vijay Mallya

ಬಾಂಬೆ ಹೈಕೋರ್ಟ್​, ಉದ್ಯಮಿ ವಿಜಯ್ ಮಲ್ಯ
ಬಾಂಬೆ ಹೈಕೋರ್ಟ್​, ಉದ್ಯಮಿ ವಿಜಯ್ ಮಲ್ಯ
Published on

ಪ್ರಮುಖ ಮುಖ್ಯಾಂಶಗಳು

  • ಆರ್ಥಿಕ ವಂಚನೆ ಹಿನ್ನಲೆ ಭಾರತ ಬಿಟ್ಟು ಲಂಡನ್​ ಸೇರಿರುವ ವಿಜಯ್​ ಮಲ್ಯ
  • ಭಾರತಕ್ಕೆ ಮರಳಲು ಮಲ್ಯಾಗೆ ಕೊನೆಯ ಅವಕಾಶ ನೀಡಿರುವ ಬಾಂಬೆ ಹೈಕೋರ್ಟ್​
  • ಭಾರತದ ನ್ಯಾಯಾಂಗದ ಮೇಲೆ ನಂಬಿಕೆ ಇದ್ದರೆ ದೇಶಕ್ಕೆ ಮರಳಿ ಎಂದ ನ್ಯಾಯಪೀಠ
ಮುಂಬೈ: ಭಾರತದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ(Vijay Mallya), ಪದೇ-ಪದೇ ನ್ಯಾಯಾಲಯದ ಪ್ರಕ್ರಿಯೆಯಲ್ಲಿ ಹಾಜರಾಗುತ್ತಿಲ್ಲ. ಹೀಗಾಗಿ ಅವರು ಮುಂದಿನ ವಿಚಾರಣೆಯಲ್ಲಿ ಸಹ ಇದೇ ರೀತಿಯ ವರ್ತನೆ ತೋರಿದರೆ ಅವರಿಗೆ ಯಾವುದೇ ಪರಿಹಾರವನ್ನು ನೀಡಲು ಸಧ್ಯವಾಗುವುದಿಲ್ಲ ಎಂದು ಗುರುವಾರ ಬಾಂಬೆ ಹೈಕೋರ್ಟ್ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ಗೌತಮ್ ಅಂಕದ್ ಅವರ ನ್ಯಾಯಪೀಠ, ವಿಜಯ್​ ಮಲ್ಯ ಭಾರತಕ್ಕೆ ಮರಳುವ ಉದ್ದೇಶವನ್ನು ಹೊಂದಿದ್ದಾರೋ? ಇಲ್ಲವೋ? ಎಂದು ಸ್ಪಷ್ಟಪಡಿಸಲು ಒಂದು ಕೊನೆಯ ಅವಕಾಶ ನೀಡಿದೆ. ಮರಳಲು ಅವರಿಗೆ ಮನಸ್ಸಿಲ್ಲದಿದ್ದರೆ ಇಲ್ಲಿ ನಾವು ಅವರ ಯಾವಯದೇ ಅರ್ಜಿಗಳನ್ನು ಆಲಿಸುವುದಿಲ್ಲ ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ.
ವಿಜಯ್​ ಮಲ್ಯ ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಕಾಯ್ದೆ (FEOA) ಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಮತ್ತು ಅವರನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಿಸುವ ಪ್ರಕ್ರಿಯೆಗಳನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿತ್ತು. ಡಿಸೆಂಬರ್‌ನಲ್ಲಿ, ಅವರು ಭಾರತಕ್ಕೆ ಮರಳಿದರೆ ಮತ್ತು ಅದರ ವ್ಯಾಪ್ತಿಗೆ ಒಳಪಟ್ಟರೆ ಮಾತ್ರ ಅವರ ಅರ್ಜಿಯನ್ನು ಪರಿಗಣಿಸುವುದಾಗಿ ನ್ಯಾಯಪೀಠ ಸ್ಪಷ್ಟಪಡಿಸಿತ್ತು. ಮಲ್ಯ ಉದ್ದೇಶಪೂರ್ವಕವಾಗಿ ನ್ಯಾಯಾಲಯದ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಮತ್ತು ಆದ್ದರಿಂದ ಅವರಿಗೆ ಸಮಾನ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ದಾಖಲಿಸುವುದಾಗಿ ನ್ಯಾಯಾಧೀಶರು ಹೇಳಿದ್ದಾರೆ.
ನೀವು ಭಾರತಕ್ಕೆ ಹಿಂತಿರುಗಲೇಬೇಕು, ನೀವು ಹಿಂತಿರುಗಲು ಸಾಧ್ಯವಾಗದಿದ್ದರೆ, ನಾವು ಈ ಅರ್ಜಿಯನ್ನು ಕೇಳಲು ಸಾಧ್ಯವಿಲ್ಲ. ನೀವು ನ್ಯಾಯಾಲಯದ ಪ್ರಕ್ರಿಯೆಯಿಂದ ಓಡಿಹೋಗುತ್ತಿದ್ದಿರಿ ಆದ್ದರಿಂದ ನೀವು ವಿಚಾರಣೆಯ ಲಾಭವನ್ನು ಪಡೆಯಲು ಸಾಧ್ಯವಿಲ್ಲ. ನಿಮ್ಮ ಅರ್ಜಿ ನ್ಯಾಯಸಮ್ಮತವಾಗಿದ್ದರೆ ನಾವು ಅದನ್ನು ವಜಾ ಮಾಡುವುದಿಲ್ಲ, ನಾವು ನಿಮಗೆ ದೇಶಕ್ಕೆ ಮರಳಲು ಕೊನೆಯ ಅವಕಾಶವನ್ನು ನೀಡುತ್ತಿಸದ್ದೇವೆ ಎಂದು ಹೇಳಿದರು.

ಭಾರತದ ನ್ಯಾಯ ವ್ಯವಸ್ಥೆ ಮೇಲೆ ನಂಬಿಕೆಯಿಡಿ

ಜಾರಿ ನಿರ್ದೇಶನಾಲಯ (ಇಡಿ) ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಮಲ್ಯ ಅವರು ಬ್ಯಾಂಕುಗಳ ಹಕ್ಕುಗಳನ್ನು ಪ್ರಶ್ನಿಸಿ ಅಫಿಡವಿಟ್ ಸಲ್ಲಿಸಿದ್ದಾರೆ ಮತ್ತು ಈ ವಿಷಯವನ್ನು ವಸೂಲಾತಿ ಪ್ರಕ್ರಿಯೆಗಳಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ವಾದಿಸಿದರು.
ಮಲ್ಯ ಅವರನ್ನು ಪರಾರಿಯಾಗಿದ್ದಾನೆಂದು ಘೋಷಿಸಿದ ನಂತರ ಮತ್ತು ಲಂಡನ್‌ನಲ್ಲಿ ಹಸ್ತಾಂತರ ಪ್ರಕ್ರಿಯೆಗಳು ಮುಂದುವರಿದ ಹಂತದಲ್ಲಿದ್ದಾಗ ಮಾತ್ರ ಎಫ್‌ಇಒಎಗೆ ಸವಾಲು ಹಾಕಿದರು ಎಂದು ಮೆಹ್ತಾ ವಾದ ಮಂಡಸಿದರು. ಮಲ್ಯ ಭಾರತಕ್ಕೆ ಮರಳಲು ಮತ್ತು ಹೊಣೆಗಾರಿಕೆ ಸೇರಿದಂತೆ ತಮ್ಮ ಎಲ್ಲಾ ವಾದಗಳನ್ನು ಎತ್ತಲು ಸ್ವತಂತ್ರರು, ಆದರೆ ಭಾರತೀಯ ನ್ಯಾಯಾಲಯಗಳಿಂದ ಸಮಾನ ಪರಿಹಾರವನ್ನು ಕೋರುವಾಗ ಅವರು ಭಾರತೀಯ ಕಾನೂನನ್ನು ನಂಬಬೇಕು ಎಂದು ಅವರು ವಾದಿಸಿದರು.
ವಿಜಯ್​ ಮಲ್ಯ ಪರ ವಕೀಲ ಅಮಿತ್ ದೇಸಾಯಿ, ಮಲ್ಯ ಭಾರತಕ್ಕೆ ಭೌತಿಕವಾಗಿ ಹಿಂತಿರುಗದೆಯೇ ತಮ್ಮ ಕಕ್ಷಿದಾರರ ವಿಚಾರಣೆ ನಡೆಸಬಹುದು ಎಂದು ವಾದಿಸಿದರು. ಆದರೆ ಮಲ್ಯ ನ್ಯಾಯಾಲಯಕ್ಕೆ ಸಲ್ಲಿಸಿರುವ ಅಫಿಡವಿಟ್ ಪ್ರಕಾರ ಅವರು ನಡೆದುಕೊಳ್ಳತ್ತಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಮಲ್ಯ ಭಾರತಕ್ಕೆ ಹಿಂದಿರುಗುವುದಿಲ್ಲ ಎಂದೂ ಅಫಿಡವಿಟ್ ಸಲ್ಲಿಸಬಹುದು. ಆದರೆ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸದ ಹೊರತು ಆರ್ಥಿಕ ಅಪರಾಧಗಳಿಂದ ಅವರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ. ಈ ವಿಷಯದ ವಿಚಾರಣೆಯು ಮುಂದಿನ ವಾರ ನಡೆಯಲಿದ್ದು, ನ್ಯಾಯಪೀಠ ವಿಜಯ್​ ಮಲ್ಯಾಗೆ ದೇಶಕ್ಕೆ ಮರಳಲು ಅಂತಿಮ ಅವಕಾಶವನ್ನು ನೀಡಿದೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net