30 ಕೋಟಿ ರೂ. ಓಣಂ ಬಂಪರ್ ಲಾಟರಿ: ಅಸಲಿ ವಿಜೇತ ಯಾರು? ಕೇರಳದಲ್ಲಿ ಭಾರಿ ಸದ್ದು ಮಾಡುತ್ತಿರುವ ಎಐ ಮನುಷ್ಯ! Onam Bumper

ಮೂಲಗಳ ಪ್ರಕಾರ, ಕಣ್ಣೂರಿನ ಚಕ್ಕರಕಲ್ಲು ಮುತ್ತು ಏಜೆನ್ಸಿಯಿಂದ ತಳಿಪರಂಬಾದ ತಂಪುರಾನ್ ಏಜೆನ್ಸಿ ಪಡೆದುಕೊಂಡಿದ್ದ ಟಿಕೆಟ್ ಅನ್ನು ಸುಜಿತ್ ಎಂಬ ಬೀದಿ ಬದಿ ವ್ಯಾಪಾರಿ ಮಾರಾಟ ಮಾಡಿದ್ದರು.
Onam Bumper
ಓಣಂ ಬಂಪರ್ ಲಾಟರಿ
Published on: 

ತಿರುವನಂತಪುರಂ: ಕೇರಳ ಲಾಟರಿ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮೊತ್ತವಾದ ಭರ್ಜರಿ 30 ಕೋಟಿ ರೂ. ಓಣಂ ಬಂಪರ್ ( Onam Bumper ) ಬಹುಮಾನ ಗೆದ್ದುಕೊಂಡ ಆ ಅದೃಷ್ಟಶಾಲಿ ಯಾರೆಂಬ ಕುತೂಹಲ ಈಗ ಕೇರಳದಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬಿದೆ. ಒಂದೆಡೆ ಮಲಯಾಳಿಗಳು ಆ ಅದೃಷ್ಟಶಾಲಿಗಾಗಿ ಹುಡುಕಾಟ ನಡೆಸುತ್ತಿದ್ದರೆ, ಮತ್ತೊಂದೆಡೆ ಸಾಮಾಜಿಕ ಜಾಲತಾಣಗಳಲ್ಲಿ ನಾನಾ ರೀತಿಯ ಕಥೆಗಳು ಹರಿದಾಡುತ್ತಿದ್ದು, ಸಾಕಷ್ಟು ಗೊಂದಲ ಮೂಡಿಸಿವೆ.

ಮೂಲಗಳ ಪ್ರಕಾರ, ಕಣ್ಣೂರಿನ ಚಕ್ಕರಕಲ್ಲು ಮುತ್ತು ಏಜೆನ್ಸಿಯಿಂದ ತಳಿಪರಂಬಾದ ತಂಪುರಾನ್ ಏಜೆನ್ಸಿ ಪಡೆದುಕೊಂಡಿದ್ದ ಟಿಕೆಟ್ ಅನ್ನು ಸುಜಿತ್ ಎಂಬ ಬೀದಿ ಬದಿ ವ್ಯಾಪಾರಿ ಮಾರಾಟ ಮಾಡಿದ್ದರು. ಈ ಬಂಪರ್ ಬಹುಮಾನದ ಟಿಕೆಟ್ ಮಾರಾಟವಾಗಿರುವ ಕುರಿತು ಏಜೆಂಟ್ ಬಳಿ ಇದುವರೆಗೆ ಯಾರೂ ಅಧಿಕೃತವಾಗಿ ಬಂದು ತಲುಪಿಲ್ಲ. ಹಳ್ಳಿಯ ಸ್ಥಳೀಯರಿಗೇ ಹೆಚ್ಚಿನ ಟಿಕೆಟ್‌ಗಳು ಮಾರಾಟವಾಗಿರುವುದರಿಂದ, ಅಸಲಿ ಅದೃಷ್ಟಶಾಲಿ ಸ್ಥಳೀಯರೇ ಆಗಿರಬಹುದು ಎಂದು ಏಜೆಂಟ್ ತೀವ್ರವಾಗಿ ನಂಬಿದ್ದಾರೆ.

Also Read
ಓಣಂ ಬಂಪರ್​ ಲಾಟರಿ ಬಹುಮಾನ ಬರಲಿಲ್ಲ ಅಂತ ಅಂಗಡಿ ಮಾಲಕಿಗೆ ಚಾಕು ಇರಿದ ವ್ಯಕ್ತಿ: 30 ಕೋಟಿ ಒಲಿದಿದ್ದು ಯಾರಿಗೆ? Onam Bumper
Onam Bumper

ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿಗಳಿಗೆ ಮಿತಿಯೇ ಇಲ್ಲದಂತಾಗಿದೆ. ಕೃತಕ ಬುದ್ಧಿಮತ್ತೆಯಿಂದ (AI) ಸೃಷ್ಟಿಸಲಾದ ನಕಲಿ ವ್ಯಕ್ತಿಗಳು ಮೊದಲ ಪ್ರೈಜ್ ಟಿಕೆಟ್ ಹಿಡಿದುಕೊಂಡಿರುವ ಚಿತ್ರಗಳು ವಾಟ್ಸ್​ಆ್ಯಪ್​ ಮತ್ತು ಫೇಸ್‌ಬುಕ್‌ನಲ್ಲಿ ಸಖತ್ ವೈರಲ್ ಆಗುತ್ತಿವೆ. ಕಣ್ಣೂರಿನ ಮೊಕೇರಿ ಮೂಲದ ಮನು ಎಂಬುವವರಿಗೆ ಲಾಟರಿ ಒಲಿದಿದೆ ಎಂಬ ಸುದ್ದಿ ಹಾಗೂ ಕೆನರಾ ಬ್ಯಾಂಕಿನ ವಟ್ಟೋಲಿ ಶಾಖೆಯ ಮ್ಯಾನೇಜರ್ ಪ್ರವೀಣ್ ವಟ್ಟೋಲಿ ಅವರಿಗೆ ಆ ಲಾಟರಿ ಟಿಕೆಟ್ ಅನ್ನು ಹಸ್ತಾಂತರಿಸಲಾಗಿದೆ ಎಂಬ ಸುಳ್ಳು ಕಥೆಗಳು ಎಲ್ಲೆಡೆ ಹಬ್ಬಿವೆ.

ಕಳೆದ ಕೆಲವು ವರ್ಷಗಳಿಂದ ಭರ್ಜರಿ ಬಂಪರ್ ಬಹುಮಾನ ಗೆದ್ದ ಅದೃಷ್ಟಶಾಲಿಗಳು ಬಹಿರಂಗವಾಗಿ ಮಾಧ್ಯಮಗಳ ಮುಂದೆ ಬರುತ್ತಿಲ್ಲ. ಇದಕ್ಕೆ ಪ್ರಮುಖ ಕಾರಣ ಸಾರ್ವಜನಿಕರು ಹಾಗೂ ಸ್ಥಳೀಯರಿಂದ ದೂರ ಉಳಿಯುವುದೇ ಆಗಿದೆ. ಅನಗತ್ಯ ಗಮನ ಸೆಳೆಯುವುದನ್ನು ತಪ್ಪಿಸಲು ಮತ್ತು ಸಹಾಯದ ಹೆಸರಿನಲ್ಲಿ ಹಣ ಕೇಳಿಕೊಂಡು ಬರುವ ಜನರಿಂದ ರಕ್ಷಣೆ ಪಡೆದುಕೊಳ್ಳಲು ವಿಜೇತರು ಮೌನ ವಹಿಸುತ್ತಿದ್ದಾರೆ. ಇದಕ್ಕೆ ಉದಾಹರಣೆಯೆಂಬಂತೆ, ಕೆಲ ವರ್ಷಗಳ ಹಿಂದೆ ತಿರುವನಂತಪುರದ ಅನೂಪ್ ಎಂಬವರು 25 ಕೋಟಿ ಓಣಂ ಬಂಪರ್ ಗೆದ್ದಾಗ ನೇರವಾಗಿ ಮಾಧ್ಯಮಗಳ ಮುಂದೆ ಬಂದು ನಂತರ ತೀವ್ರ ತೊಂದರೆಗಳನ್ನು ಎದುರಿಸಬೇಕಾಗಿ ಬಂದಿತ್ತು.

ಸದ್ಯದ ಮಟ್ಟಿಗೆ 30 ಕೋಟಿ ಮೌಲ್ಯದ ಬಂಪರ್ ಟಿಕೆಟ್ ಅನ್ನು ಬ್ಯಾಂಕ್ ಮ್ಯಾನೇಜರ್‌ಗೆ ಒಪ್ಪಿಸಲಾಗಿದೆ ಎಂಬ ಸುದ್ದಿಗಳು ಹರಿದಾಡುತ್ತಿದ್ದರೂ, ನೈಜ ಅದೃಷ್ಟಶಾಲಿ ಯಾರೆಂಬುದು ಮಾತ್ರ ಇನ್ನೂ ನಿಗೂಢವಾಗಿಯೇ ಉಳಿದಿದೆ. ಎಐ (AI) ಚಿತ್ರಗಳು ಮತ್ತು ಬಗೆಬಗೆಯ ಕಥೆಗಳ ಅಬ್ಬರದ ನಡುವೆ, ಆ ಬಂಗಾರದ ಟಿಕೆಟ್ ಹಿಡಿದುಕೊಂಡು ಅಧಿಕೃತವಾಗಿ ಬ್ಯಾಂಕ್ ಅಥವಾ ಲಾಟರಿ ಕಚೇರಿಯ ಮೆಟ್ಟಿಲು ಹತ್ತುವ ಆ ಮಹಾಭಾಗ್ಯಶಾಲಿ ಯಾರು ಎಂಬ ಪ್ರಶ್ನೆಗೆ ಕಾಲವೇ ಉತ್ತರ ನೀಡಬೇಕಿದೆ.

30 ಕೋಟಿ ರೂ. ಬಂಪರ್​ ಯಾರಿಗೆ?

ಕೇರಳ ಸರ್ಕಾರದ ಪ್ರತಿಷ್ಠಿತ ಓಣಂ ಬಂಪರ್ ಲಾಟರಿ ಫಲಿತಾಂಶ ಪ್ರಕಟವಾಗಿದ್ದು, ಬರೋಬ್ಬರಿ 30 ಕೋಟಿ ರೂ.ಗಳ ಪ್ರಥಮ ಬಹುಮಾನವನ್ನು TL 360615 ಸಂಖ್ಯೆಯ ಲಾಟರಿ ಟಿಕೆಟ್ ಪಡೆದುಕೊಂಡಿದೆ. ಕಣ್ಣೂರಿನ ಚಕ್ಕರಕಲ್‌ನಲ್ಲಿರುವ 'ಮುತ್ತು ಲಾಟರಿ ಏಜೆನ್ಸಿ'ಯಿಂದ ಈ ವಿಜೇತ ಟಿಕೆಟ್ ಮಾರಾಟವಾಗಿದೆ. ತಿರುವನಂತಪುರಂನ ಗೋರ್ಕಿಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಕೆ. ಮುರಳೀಧರನ್ ಅವರು ಲಾಟರಿ ಡ್ರಾವನ್ನು ಉದ್ಘಾಟಿಸಿದರು ಹಾಗೂ ಪೂಜಾ ಬಂಪರ್ ಟಿಕೆಟ್ ಬಿಡುಗಡೆಗೊಳಿಸಿದರು.

Also Read
ದುಬಾರಿ ಸೂಪರ್‌ಫುಡ್‌ ಬೇಡವೇ ಬೇಡ: ಈ ಒಂದು ಸಾಮಾನ್ಯ ಹಣ್ಣಿನಲ್ಲಿದೆ ನಮ್ಮೆಲ್ಲರ ಆರೋಗ್ಯದ ಗುಟ್ಟು..! Healthy Fruits
Onam Bumper

ಪ್ರಮುಖ ಬಹುಮಾನಗಳು

ದ್ವಿತೀಯ ಬಹುಮಾನ ತಲಾ 1 ಕೋಟಿ ರೂ., ತೃತೀಯ ಬಹುಮಾನ 25 ಲಕ್ಷ ರೂ., ನಾಲ್ಕನೇ ಬಹುಮಾನ 5 ಲಕ್ಷ ರೂ. ಹಾಗೂ ಐದನೇ ಬಹುಮಾನ 2 ಲಕ್ಷ ರೂ. ನೀಡಲಾಗುತ್ತದೆ. ಇದರೊಂದಿಗೆ 5000, 2000, 1000 ಮತ್ತು 500 ರೂ.ಗಳ ಸಮಾಧಾನಕರ ಬಹುಮಾನಗಳೂ ಇವೆ.

ಮೊತ್ತ ಪಡೆಯುವ ವಿಧಾನ

30 ಕೋಟಿ ರೂ.ಗಳ ಪ್ರಥಮ ಬಹುಮಾನಕ್ಕೆ ಅರ್ಹರಾಗಿದ್ದರೆ, ಆದಷ್ಟು ಬೇಗ ಲಾಟರಿ ಇಲಾಖೆಗೆ ಮಾಹಿತಿ ನೀಡಬೇಕು. ಅಗತ್ಯ ದಾಖಲೆಗಳೊಂದಿಗೆ ಟಿಕೆಟ್ ಸಲ್ಲಿಸಿದರೆ, ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡು ಸುಮಾರು 15 ರಿಂದ 20 ದಿನಗಳಲ್ಲಿ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ.

ಐತಿಹಾಸಿಕ ದಾಖಲೆ

ರಾಜ್ಯ ಲಾಟರಿ ಇತಿಹಾಸದಲ್ಲೇ ಮೊದಲ ಬಾರಿಗೆ ಮುದ್ರಿಸಲಾದ ಎಲ್ಲಾ 90 ಲಕ್ಷ (9 ಮಿಲಿಯನ್) ಟಿಕೆಟ್‌ಗಳು ಸಂಪೂರ್ಣವಾಗಿ ಮಾರಾಟವಾಗಿವೆ! 30 ಕೋಟಿ ರೂ. ಪ್ರಥಮ ಬಹುಮಾನದ ಈ ಬಂಪರ್ ಟಿಕೆಟ್‌ಗಳ ಮಾರಾಟದಲ್ಲಿ ಪಾಲಕ್ಕಾಡ್ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ (20,95,300 ಟಿಕೆಟ್‌ಗಳು). ತ್ರಿಸ್ಸೂರು ಎರಡನೇ ಸ್ಥಾನದಲ್ಲಿದ್ದರೆ (10,62,000), ತಿರುವನಂತಪುರಂ ಮೂರನೇ ಸ್ಥಾನದಲ್ಲಿದೆ (8,64,100), (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net