ದುಬಾರಿ ಸೂಪರ್‌ಫುಡ್‌ ಬೇಡವೇ ಬೇಡ: ಈ ಒಂದು ಸಾಮಾನ್ಯ ಹಣ್ಣಿನಲ್ಲಿದೆ ನಮ್ಮೆಲ್ಲರ ಆರೋಗ್ಯದ ಗುಟ್ಟು..! Healthy Fruits

ಪೇರಲ ಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ದೇಹದ ರೋಗನಿರೋಧಕ ವ್ಯವಸ್ಥೆಯ ಸಾಮಾನ್ಯ ಕಾರ್ಯಕ್ಕೆ ನೆರವಾಗುತ್ತದೆ. ಜತೆಗೆ ದೇಹದಲ್ಲಿ ಕಬ್ಬಿಣದ ಹೀರಿಕೊಳ್ಲುವಿಕೆ ವಿಟಮಿನ್ ಸಿ ಸಹಾಯಕವಾಗುತ್ತದೆ. ಸುಮಾರು 100 ಗ್ರಾಂ ಪೇರ ಹಣ್ಣಿನಲ್ಲಿ 228 ಮಿ.ಗ್ರಾಂನಷ್ಟು ವಿಟಮಿನ್ ಸಿ ಇರುತ್ತದೆ.
Healthy Fruits
ಸಾಂದರ್ಭಿಕ ಚಿತ್ರ
Published on: 

Healthy Fruits : ಸೂಪರ್​ಫುಡ್ ಎಂದಾಕ್ಷಣ ದುಬಾರಿ ಹಣ್ಣುಗಳು, ಬೀಜಗಳು ನೆನಪಾಗುತ್ತವೆ. ಆದರೆ, ನಮ್ಮ ಸುತ್ತಮುತ್ತ ಸುಲಭವಾಗಿ ಸಿಗುವ ಕೆಲವು ಹಣ್ಣುಗಳಲ್ಲೇ ದೇಹಕ್ಕೆ ಬೇಕಾದ ಹಲವು ಪೋಷಕಾಂಶಗಳು ಅಡಗಿವೆ. ಅಂತಹ ಹಣ್ಣುಗಳಲ್ಲಿ ಪೇರಲ ಅಥವಾ ಸೀಬೆಹಣ್ಣು ಕೂಡ ಒಂದು. ರುಚಿಯಾಗಿರುವುದರ ಜತೆಗೆ ವಿಟಮಿನ್​ಗಳು, ಫೈಬರ್ ಮತ್ತು ಆ್ಯಂಟಿಆಕ್ಸಿಡೆಂಟ್​ಗಳ ಉತ್ತಮ ಮೂಲವಾಗಿರುವ ಈ ಹಣ್ಣು ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಬಹುದಾದ ಆರೊಗ್ಯಕರ ಆಯ್ಕೆಯಾಗಿದೆ.

ವಿಟಮಿನ್‌ ಸಿ ಯ ಉತ್ತಮ ಮೂಲ

ಪೇರಲ ಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ದೇಹದ ರೋಗನಿರೋಧಕ ವ್ಯವಸ್ಥೆಯ ಸಾಮಾನ್ಯ ಕಾರ್ಯಕ್ಕೆ ನೆರವಾಗುತ್ತದೆ. ಜತೆಗೆ ದೇಹದಲ್ಲಿ ಕಬ್ಬಿಣದ ಹೀರಿಕೊಳ್ಲುವಿಕೆ ವಿಟಮಿನ್ ಸಿ ಸಹಾಯಕವಾಗುತ್ತದೆ. ಸುಮಾರು 100 ಗ್ರಾಂ ಪೇರ ಹಣ್ಣಿನಲ್ಲಿ 228 ಮಿ.ಗ್ರಾಂನಷ್ಟು ವಿಟಮಿನ್ ಸಿ ಇರುತ್ತದೆ.

Also Read
ಮಧುಮೇಹಿಗಳಿಗೆ ಕರಿಬೇವು ನೀರು ಅಮೃತವಂತೆ!
Healthy Fruits

ಜೀರ್ಣಕ್ರಿಯೆಗೆ ಫೈಬರ್‌

ಪೇರಲ ಹಣ್ಣಿನಲ್ಲಿ ಆಹಾರದ ನಾರಿನಾಂಶ ಇದೆ. ಆಹಾರದಲ್ಲಿ ಸಾಕಷ್ಟು ಫೈಬರ್‌ ಇರುವುದರಿಂದ ಜೀರ್ಣಕ್ರಿಯೆ ಸರಾಗವಾಗಲು ಮತ್ತು ಮಲಬದ್ಧತೆ ಕಡಿಮೆಯಾಗಲು ಸಹಾಯವಾಗಬಹುದು. ಹೊಟ್ಟೆ ತುಂಬಿದ ಅನುಭವವನ್ನು ನೀಡುವುದರಿಂದ ಅನಗತ್ಯವಾಗಿ ಪದೇಪದೇ ತಿನ್ನುವುದನ್ನು ನಿಯಂತ್ರಿಸಲು ಕೂಡ ನೆರವಾಗಬಹುದು. ಪೇರಲ ಹಣ್ಣಿನಲ್ಲಿ ಪ್ರತಿ 100 ಗ್ರಾಂಗೆ ಸುಮಾರು 5 ಗ್ರಾಂನಷ್ಟು ಫೈಬರ್ ಇರುತ್ತದೆ. ಇದರಿಂದ ಫೈಬರ್​ಯುಕ್ತ ಆಹಾರವು ಕೊಲೆಸ್ಟ್ರಾಲ್ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸುವಲ್ಲಿ ಸಹಾಯಕವಾಗಿದೆ.

ತೂಕ ನಿಯಂತ್ರಣಕ್ಕೆ ಸಹಾಯಕವೇ?

ಪೇರಲ ಹಣ್ಣು ಫೈಬರ್‌ ಹೊಂದಿರುವುದರಿಂದ ಹೊಟ್ಟೆ ತುಂಬಿದ ಅನುಭವ ನೀಡಬಹುದು. ಹೀಗಾಗಿ ಸಮತೋಲಿತ ಆಹಾರದ ಭಾಗವಾಗಿ ಸೇವಿಸಿದರೆ ತೂಕ ನಿಯಂತ್ರಣದ ಪ್ರಯತ್ನಗಳಿಗೆ ಸಹಾಯಕವಾಗಬಹುದು. ಆದರೆ ಕೇವಲ ಪೇರಲ ಹಣ್ಣು ತಿನ್ನುವುದರಿಂದ ತೂಕ ಕಡಿಮೆಯಾಗುವುದಿಲ್ಲ. ಒಟ್ಟಾರೆ ಆಹಾರ ಪದ್ಧತಿ ಮತ್ತು ದೈಹಿಕ ಚಟುವಟಿಕೆಯೂ ಮುಖ್ಯ.

Also Read
ಬಸ್‌ನಲ್ಲಿ ಕೂತ ತಕ್ಷಣ ವಾಕರಿಕೆ, ತಲೆಸುತ್ತು ಕಾಡುತ್ತಾ? ಕಾರಣ ಏನು? ಪರಿಹಾರವೂ ಇದೆ! | Travel Sickness
Healthy Fruits

ಪಿಂಕ್ ಪೇರಲ ವಿಶೇಷವೇ?

ಗುಲಾಬಿ ಅಥವಾ ಪಿಂಕ್‌ ಪೇರಲ ಬಣ್ಣಕ್ಕೆ ಲೈಕೋಪೀನ್‌ ಎಂಬ ಆ್ಯಂಟಿಆಕ್ಸಿಡೆಂಟ್‌ ಕಾರಣವಾಗಿದೆ. ಇದೇ ಸಂಯುಕ್ತ ಟೊಮ್ಯಾಟೋದಲ್ಲಿಯೂ ಕಂಡುಬರುತ್ತದೆ. ಲೈಕೋಪೀನ್‌ ದೇಹದಲ್ಲಿನ ಆಕ್ಸಿಡೇಟಿವ್‌ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುವ ಆ್ಯಂಟಿಆಕ್ಸಿಡೆಂಟ್‌ಗಳಲ್ಲಿ ಒಂದಾಗಿದೆ. ಪೇರಲವನ್ನು ಜ್ಯೂಸ್‌ ಮಾಡಿಕೊಂಡು ಕುಡಿಯುವುದಕ್ಕಿಂತ ಪೂರ್ತಿ ಹಣ್ಣನ್ನೇ ತಿನ್ನುವುದು ಉತ್ತಮ, ಏಕೆಂದರೆ ಹಣ್ಣಿನಲ್ಲಿರುವ ಫೈಬರ್‌ ಉಳಿಯುತ್ತದೆ.

ಒಟ್ಟಿನಲ್ಲಿ, ದುಬಾರಿ ಹಣ್ಣುಗಳ ಹಿಂದೆ ಓಡುವ ಬದಲು ಸ್ಥಳೀಯವಾಗಿ ಸುಲಭವಾಗಿ ಸಿಗುವ ಪೇರು ಹಣ್ಣನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಪೌಷ್ಟಿಕಾಂಶಗಳಿರುವ ಈ ಸರಳ ಹಣ್ಣು ದೈನಂದಿನ ಆರೋಗ್ಯಕರ ಆಹಾರ ಪದ್ಧತಿಯ ಒಂದು ಭಾಗವಾಗಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net