ಸಹರಾನ್‌ಪುರ: ಅವಳು ಪೊಲೀಸ್ ಇಲಾಖೆಗೆ ಸೇರಿ ದೇಶದ ಸೇವೆ ಮಾಡಬೇಕು, ಮೈಮೇಲೆ ಖಾಕಿ ಸಮವಸ್ತ್ರ ಧರಿಸಬೇಕು ಎಂದು ಕನಸು ಕಂಡಿದ್ದಳು. ಗಂಡ ಕೂಡ ಹೆಂಡತಿಯ ಕನಸಿಗೆ ಸಾಥ್ ನೀಡಿ, ಅವಳನ್ನು ಪೊಲೀಸ್ ನೇಮಕಾತಿ ಪರೀಕ್ಷೆಗೆ ಕರೆದುಕೊಂಡು ಬಂದಿದ್ದನು. ಆದರೆ, ಪರೀಕ್ಷೆ ಮುಗಿಸಿ ಖುಷಿಯಿಂದ ಮನೆಗೆ ಮರಳುವಷ್ಟರಲ್ಲಿ ಹೆಂಡತಿಯ ಕಣ್ಣೆದುರೇ ಪತಿಯನ್ನು ಗುಂಡಿಕ್ಕಿ ಕೊಲ್ಲಲಾದ ಭೀಕರ ಘಟನೆ ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ನಡೆದಿದೆ. ಕೇವಲ 4 ತಿಂಗಳ ಹಿಂದೆ ನಡೆದ ಪ್ರೇಮ ವಿವಾಹದ(Love Marriage) ದ್ವೇಷವೇ ಈ ಕೊಲೆಗೆ ಕಾರಣ ಎಂದು ತಿಳಿದುಬಂದಿದೆ.