ಇರಾನ್ ಇತ್ತೀಚೆಗೆ ಸ್ಟ್ರೇಟ್ ಆಫ್ ಹೊರ್ಮುಜ್ ಜಲಮಾರ್ಗವನ್ನು ಸಂಪೂರ್ಣವಾಗಿ ಮುಚ್ಚಿದ ನಂತರ, ಅಮೆರಿಕ ಸೇನೆಯು ಇರಾನ್ ವಿರುದ್ಧ ಆಕ್ರಮಣಕಾರಿ ಕಾರ್ಯಾಚರಣೆಗೆ ಇಳಿದಿತ್ತು. ಇದರ ಭಾಗವಾಗಿ ಅಪಾಚೆ ಹೆಲಿಕಾಪ್ಟರ್ಗಳು, ಎಂಕ್ಯೂ-9 ರೀಪರ್ ಡ್ರೋನ್ಗಳು ಹಾಗೂ ಎಫ್-35 ಯುದ್ಧ ವಿಮಾನಗಳನ್ನು ಈ ಪ್ರದೇಶದಲ್ಲಿ ಗಸ್ತಿಗೆ ನಿಯೋಜಿಸಲಾಗಿತ್ತು. ಫೆಬ್ರವರಿ 28 ರಿಂದ ಆರಂಭವಾದ ಈ ಸಂಘರ್ಷದಲ್ಲಿ ಅಮೆರಿಕ ಈಗಾಗಲೇ ಸುಮಾರು 30 ಡ್ರೋನ್ಗಳು ಮತ್ತು ಕೆಲವು ಯುದ್ಧ ವಿಮಾನಗಳನ್ನು ಕಳೆದುಕೊಂಡಿದೆ. ಆದರೆ, ಈ ಯುದ್ಧದಲ್ಲಿ ಅಮೆರಿಕದ ಹೆಮ್ಮೆಯ ಅಪಾಚೆ ಹೆಲಿಕಾಪ್ಟರ್ ಪತನಗೊಂಡಿರುವುದು ಇದೇ ಮೊದಲು ಎನ್ನಲಾಗಿದೆ.