ಇದರ ಅರ್ಥವೇನು?: ಯಾವುದೇ ದೇಶದ ಮೇಲೆಯೂ ಭಾರತ ಮೊದಲು ಅಣ್ವಸ್ತ್ರ ದಾಳಿ ಮಾಡುವುದಿಲ್ಲ. ಆದರೆ, ಯಾವುದೇ ಶತ್ರು ದೇಶ ಭಾರತದ ಭೂಭಾಗದ ಮೇಲಾಗಲಿ ಅಥವಾ ಭಾರತೀಯ ಸೈನಿಕರ ಮೇಲಾಗಲಿ ಅಣ್ವಸ್ತ್ರ ದಾಳಿ ನಡೆಸಿದರೆ, ಅದಕ್ಕೆ ಪ್ರತಿಯಾಗಿ ಭಾರತವು ಅತ್ಯಂತ ಭೀಕರವಾಗಿ ತಿರುಗೇಟು ನೀಡಲು ಈ ಸಿದ್ಧತೆ ಮಾಡಿಕೊಂಡಿದೆ. ಭಾರತದ ಈ ಕ್ರಮವು ಯಾವುದೇ ದೇಶದೊಂದಿಗೆ ಯುದ್ಧ ಮಾಡಲು ಅಲ್ಲ, ಬದಲಿಗೆ ಶತ್ರುಗಳು ಭಾರತದ ತಂಟೆಗೆ ಬರದಂತೆ ತಡೆಯಲು (Deterrence) ಮಾತ್ರ ಎಂದು ವರದಿ ಹೇಳಿದೆ,(ಏಜೆನ್ಸೀಸ್).