ಕುಡಿತ ಬಿಡಲು ಹೋಗಿ ಪ್ರಾಣ ಬಿಟ್ಟರು: ಸೊಪ್ಪಿನ ರಸಾಯನ ಸೇವಿಸಿ ಇಬ್ಬರು ದುರ್ಮರಣ; ಮೂವರು ಅರೆಸ್ಟ್! Betul Tragedy

In Pathkheda village of Betul district, Madhya Pradesh, two people lost their lives after consuming a herbal concoction intended to cure alcohol addiction, while five others are undergoing treatment in the hospital. (Representative image)
ಮಧ್ಯಪ್ರದೇಶದ ಬೇತುಲ್ ಜಿಲ್ಲೆಯ ಪಾಠಖೇಡಾ ಗ್ರಾಮದಲ್ಲಿ ಮದ್ಯವ್ಯಸನ ಮುಕ್ತಿಗಾಗಿ ನೀಡಲಾಗಿದ್ದ ಸೊಪ್ಪಿನ ದ್ರಾವಣ ಸೇವಿಸಿ ಇಬ್ಬರು ಪ್ರಾಣ ಕಳೆದುಕೊಂಡಿದ್ದು, ಐವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. (ಸಾಂದರ್ಭಿಕ ಚಿತ್ರ)
Published on: 

ಬೇತುಲ್: ಮದ್ಯಪಾನದ ವ್ಯಸನದಿಂದ ಮುಕ್ತರಾಗಲು ಹೋಗಿ ಸೊಪ್ಪಿನ ರಸಾಯನವನ್ನು ಕುಡಿದ ಪರಿಣಾಮ ಇಬ್ಬರು ಸಾವನ್ನಪ್ಪಿ, ಐವರು ಆಸ್ಪತ್ರೆ ಪಾಲಾಗಿರುವ ಘಟನೆ ಮಧ್ಯಪ್ರದೇಶ ರಾಜ್ಯದ ಬೇತುಲ್​ನಲ್ಲಿ ವರದಿಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂರೆ ಮೂವರು ಆರೋಪಿಗಳನ್ನು ಹಾಗೂ ಸಾವನ್ನಪ್ಪಿದವರು ಸೇವಿಸಿದ ಸೊಪ್ಪಿನ ಮಿಶ್ರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾಗಿ ಮಾಹಿತಿ ಲಭ್ಯವಾಗಿದೆ.

ಚಟ ಬಿಡಿಸುವುದಾಗಿ ಹೇಳಿ ಚಟ್ಟ ಏರಿಸಿದರು!

ಈ ಘಟನೆ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಬೆತುಲ್‌ನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕಮಲೇಶ್ ಕುಮಾರ್, ಈ ಘಟನೆ ಜರಿಗಿರುವ ಪಾಠಖೇಡಾ ಗ್ರಾಮದಲ್ಲಿ ಕೆಲವೊಂದಿಷ್ಟು ಜನ, ತಾವು ಮದ್ಯದ ಚಟದಿಂದ ಮುಕ್ತಿಯನ್ನು ಕೊಡೆಸುತ್ತೇವೆಂದು ಹೇಳಿ ಕೆಲ ಗಿಡಮೂಲಿಕೆ, ಸೊಪ್ಪಿನಿಂದ ಮಾಡಿದ ಮಿಶ್ರಣವನ್ನು ನೀಡುತ್ತಾರೆ.

ಈ ರಸಾಯನವನ್ನು ಕಿಡಿದರೆ ತಮ್ಮ ವ್ಯನಸ ದೂರವಾಗುತ್ತದೆ ಎಂದು ನಂಬಿ ಕೆಲವರು ಇವರ ಬಳಿ ಹೋಗುತ್ತಿದ್ದಾರೆ. ಬುಧವಾರ (ನ.18) ಇಲ್ಲಿಗೆ ಹೋಗಿದ್ದವರಿಗೆ ಕೆಂಪು ಬಣ್ಣದ ದ್ರವವನ್ನು ನೀಡಿದ್ದು, ಅವರು ಅದನ್ನು ಸೇವಿಸಿದ್ದಾರೆ. ಅದನ್ನು ಕುಡಿದ ಬಳಿಕ ಇಬ್ಬರು ಪ್ರಾಣ ಕಳೆದುಕೊಂಡಿದ್ದು, ಐವರು ತೀವ್ರ ಅಸ್ವಸ್ತರಾಗಿದ್ದಾರೆ ಎಂದು ತಿಳಿಸಿದ್ದಾರೆ.

Also Read
‘ಅದ್ಭುತ ದೃಶ್ಯ ವೈಭವ’ ಎಂದ ನಿರ್ಮಾಪಕಿ: ತೆರೆ ಮೇಲೆ "ಪ್ರಳಯ್​​" ಸೃಷ್ಟಿಸಲು ಸಜ್ಜಾದ ರಣವೀರ್​: ಅನನ್ಯಾ ಬಿರ್ಲಾ ಹೇಳಿದ್ದೇನು? Ananya Birla
In Pathkheda village of Betul district, Madhya Pradesh, two people lost their lives after consuming a herbal concoction intended to cure alcohol addiction, while five others are undergoing treatment in the hospital. (Representative image)

ಕೇಸ್​ ದಾಖಲು; ಕ್ರಮ ಕೈಗೊಳ್ಳುತ್ತೇವೆ!

ಇನ್ನು ಮೃತ ದುರ್ದೈವಿಗಳನ್ನು ದೆಹ್‌ಗುಡ್ ನಿವಾಸಿ ರಾಮ್‌ಕಿಶೋರ್ ಝಾಡೆ (35) ಮತ್ತು ಚಿಚೋಲಿಯ ಇಮ್ಲಿಧಾನಾ ನಿವಾಸಿ ಸಂಜಯ್ ಉಯ್ಕೆ (22) ಎಂದು ಗುರುತಿಸಲಾಗಿದೆ. ಇನ್ನು ಅವರ ಜತೆಗೆ ಆ ಸೊಪ್ಪಿನ ಮಿಶ್ರಣ ಸೇವಿಸಿದ ಐವರನ್ನು ಬೇತುಲ್​​ನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಅವರಿಗೆ ವೈಧ್ಯಕೀಯ ಚಿಕೆತ್ಸೆ ಮುಂದುವರಿದಿದೆ.

ಇನ್ನೂ ಈ ದ್ರಾವಣ ನೀಡಿದ ಮೂವರ ಮೇಲೆ ಭಾರತೀಯ ನ್ಯಾಯ ಸಂಹಿತೆಯ, ಕೊಲೆಯಾಗದ ಅಪರಾಧಕರ ನರಹತ್ಯೆಗೆ ಸಂಬಂಧಿಸಿ ಸೆಕ್ಷನ್ 105, ಮತ್ತು ವಿಷಕಾರಿ ವಸ್ತುವಿಗೆ ಸಂಬಂಧಿಸಿದ ನಿರ್ಲಕ್ಷ್ಯದ ನಡವಳಿಕೆಗೆ ಸಂಬಂಧಿಸಿದ ಸೆಕ್ಷನ್ 286 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇನ್ನು ಆ ಸೊಪ್ಪಿನ ಮಿಶ್ರಣವನ್ನು ಪ್ರಯೋಗಾಲಕ್ಕೆ ಕಳುಹಿಸಲಾಗಿದ್ದು, ಅಲ್ಲಿ ವರದಿ ದೊರೆತ ಮೇಲೆ ಪ್ರಕರಣದ ಸ್ವರೂಪ ಬದಲಾಗಲಿದೆ. ಆದರೆ, ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಈ ದ್ರಾವಣ ಸೇವೆನಯಿಂದಲೇ ಸಾವು ಸಂಭವಿಸಿದೆ ಎಂದು ಹೇಳಲಾಗುತ್ತಿದ್ದು, ತಪ್ಪಿತಸ್ಥರು ಯಾರೇ ಇದ್ದರೂ ಶಿಕ್ಷೆ ಕೊಡಿಸುವುದಾಗಿ, ಪೊಲೀಸ್ ವರಿಷ್ಠಾಧಿಕಾರಿ ಕಮಲೇಶ್ ಕುಮಾರ್ ಆಶ್ವಾಸನೆ ನೀಡಿದ್ದಾರೆ, (ಏಜೆನ್ಸೀಸ್​).