‘ಅದ್ಭುತ ದೃಶ್ಯ ವೈಭವ’ ಎಂದ ನಿರ್ಮಾಪಕಿ: ತೆರೆ ಮೇಲೆ "ಪ್ರಳಯ್​​" ಸೃಷ್ಟಿಸಲು ಸಜ್ಜಾದ ರಣವೀರ್​: ಅನನ್ಯಾ ಬಿರ್ಲಾ ಹೇಳಿದ್ದೇನು? Ananya Birla

'Pralay' actor Ranveer Singh and producer Ananya Birla
'ಪ್ರಳಯ್' ನಟ ರಣವೀರ್ ಸಿಂಗ್ ಮತ್ತು ನಿರ್ಮಾಪಕಿ ಅನನ್ಯಾ ಬಿರ್ಲಾ
Published on: 

ಮುಂಬೈ: ಬಾಲಿವುಡ್​ನ ಪವರ್‌ಹೌಸ್ ರಣವೀರ್ ಸಿಂಗ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಪ್ರಳಯ್​’ ಬಗ್ಗೆ ಅಭಿಮಾನಿಗಳಲ್ಲಿ ಈಗಾಗಲೇ ಭಾರಿ ನಿರೀಕ್ಷೆ ಮನೆಮಾಡಿದೆ. ಧುರಂಧರ್​ನ ಯಶಸ್ಸಿನ ನಂತರ ರಣವೀರ್​ ಸಿಂಗ್​ ತೆರೆ ಮೇಲೆ ಹೇಗೆ ಕಾಣಿಸಿಕೊಳ್ಳಲ್ಲಿದ್ದಾರೆಂಬ ಪ್ರಶ್ನೆ ಪ್ರತಿಯೊಬ್ಬ ಸಿನಿ ಪ್ರೇಕ್ಷಕನಲ್ಲಿ ಕಾಡುತ್ತಿದೆ.

ಇದೀಗ ಈ ಚಿತ್ರದ ಕುರಿತು ನಿರ್ಮಾಪಕಿ ಅನನ್ಯಾ ಬಿರ್ಲಾ ಅವರು ಅಭಿಮಾನಿಗಳಿಗೆ ಸುಳಿವೊಂದನ್ನು ನೀಡಿದ್ದಾರೆ. ಜನಪ್ರಿಯ ಟಿವಿ ಕಾರ್ಯಕ್ರಮ ಕಾಫಿ ವಿತ್ ಕರಣ್ ನಲ್ಲಿ ಮಾತನಾಡಿರುವ ಅನನ್ಯಾ, ಪ್ರಳಯ್​ ಸಿನಿಮಾ ಪ್ರೇಕ್ಷಕರಿಗೆ ಒಂದು ಅದ್ಭುತ ದೃಶ್ಯ ವೈಭವವಾಗಲಿದೆ ಎಂದು ಹೇಳುವ ಮೂಲಕ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

‘ಕಾಫಿ ವಿತ್ ಕರಣ್’ ಶೋನಲ್ಲಿ ಅನನ್ಯಾ ಬಿರ್ಲಾ ಹೇಳಿದ್ದೇನು?

ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಶೋನಲ್ಲಿ ಭಾಗವಹಿಸಿದ್ದ ಅನನ್ಯಾ ಬಿರ್ಲಾಗೆ, ಅವರು ನಿರ್ಮಿಸುತ್ತಿರುವ ಪ್ರಳಯ್​ ಚಿತ್ರದ ಬಗ್ಗೆ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ಸಾಹದಿಂದ ಉತ್ತರಿಸಿದ ಅನನ್ಯಾ, ಈ ಸಿನಿಮಾ ಖಂಡಿತವಾಗಿಯೂ ಒಂದು ಅದ್ಭುತ ದೃಶ್ಯ ವೈಭವವಾಗಲಿದೆ. ಪ್ರೇಕ್ಷಕರಿಗೆ ಇದು ತುಂಬಾ ಇಷ್ಟವಾಗಲಿ ಎಂದು ನಾನು ಆಶಿಸುತ್ತೇನೆ ಮತ್ತು ಪ್ರಾರ್ಥಿಸುತ್ತೇನೆ. ಅಂತಿಮವಾಗಿ ಸಿನಿಮಾ ಗೆಲ್ಲುವುದು ದೇವರ ಕೈಯಲ್ಲಿದೆ ಮತ್ತು ಪ್ರೇಕ್ಷಕರ ಕೈಯಲ್ಲಿದೆ ಎಂದು ಹೇಳಿದ್ದಾರೆ.

ರಣವೀರ್-ಕಲ್ಯಾಣಿ ಜೋಡಿಯ ಜೊಂಬಿ ಥ್ರಿಲ್ಲರ್!

ಧುರಂಧರ್​ ಸಿನಿಮಾದ ಭರ್ಜರಿ ಯಶಸ್ಸಿನ ನಂತರ ರಣವೀರ್ ಸಿಂಗ್ ಕಾಣಿಸಿಕೊಳ್ಳುತ್ತಿರುವ ಮುಂದಿನ ಸಿನಿಮಾ ಇದಾಗಿದೆ. ಜೈ ಮೆಹ್ತಾ ನಿರ್ದೇಶನದ ಪ್ರಳಯ್​ ಒಂದು ಜೊಂಬಿ ಥ್ರಿಲ್ಲರ್ ಕಥಾಹಂದರ ಹೊಂದಿದೆ ಎನ್ನಲಾಗುತ್ತಿದೆ. ವಿಶೇಷವೆಂದರೆ, ಈ ಚಿತ್ರದಲ್ಲಿ ರಣವೀರ್ ಸಿಂಗ್ ನಾಯಕನಾಗಿ ನಟಿಸುವುದರ ಜೊತೆಗೆ ನಿರ್ಮಾಪಕರಾಗಿಯೂ ಕೈಜೋಡಿಸಿದ್ದಾರೆ. ಇವರಿಗೆ ನಾಯಕಿಯಾಗಿ ಲೋಕ ಚಿತ್ರದ ಮೂಲಕ ಗಮನ ಸೆಳೆದಿರುವ ದಕ್ಷಿಣ ಭಾರತದ ನಟಿ ಕಲ್ಯಾಣಿ ಪ್ರಿಯದರ್ಶನ್ ಬಣ್ಣ ಹಚ್ಚುತ್ತಿದ್ದಾರೆ.

Also Read
ಪಂಜಾಬ್ ಅಸೆಂಬ್ಲಿ ಚುನಾವಣೆಗೆ ಕಾಂಗ್ರೆಸ್ ರಣತಂತ್ರ: 42 ಘಟಾನುಘಟಿ ನಾಯಕರ ‘ಪ್ರದೇಶ ಚುನಾವಣಾ ಸಮಿತಿ’ ರಚಿಸಿದ ಕೈಪಡೆ! Punjab Elections
'Pralay' actor Ranveer Singh and producer Ananya Birla

ಶೂಟಿಂಗ್ ಆರಂಭ

ಈ ಸಿನಿಮಾವನ್ನು ದೊಡ್ಡ ಮಟ್ಟದ ಥಿಯೇಟ್ರಿಕಲ್ ಆಕ್ಷನ್ ಥ್ರಿಲ್ಲರ್ ಆಗಿ ತೆರೆಗೆ ತರಲು ಚಿತ್ರತಂಡ ಪ್ಲಾನ್ ಮಾಡಿದ್ದು, ಹಲವು ತಿಂಗಳುಗಳ ಕಾಲ ತಾಂತ್ರಿಕ ಪೂರ್ವ-ನಿರ್ಮಾಣ ಕೆಲಸಗಳನ್ನು ಅಚ್ಚುಕಟ್ಟಾಗಿ ಮುಗಿಸಿರುವ ತಂಡ, ಇದೀಗ ಮುಖ್ಯ ಚಿತ್ರೀಕರಣವನ್ನು ಶುರು ಮಾಡಿದೆ. ಸೆಟ್‌ಗಳಿಗಿಂತ ಹೆಚ್ಚಾಗಿ ಮುಂಬೈ ಮತ್ತು ಸುತ್ತಮುತ್ತಲಿನ ನೈಜ ಸ್ಥಳಗಳಲ್ಲೇ ಶೂಟಿಂಗ್ ನಡೆಸಲು ಚಿತ್ರತಂಡ ನಿರ್ಧರಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ, (ಏಜೆನ್ಸೀಸ್​).