

ಪಂಜಾಬ್: ಇನ್ನೇನು ಕೆಲವೇ ತಿಂಗಳುಗಳಲ್ಲಿ ಪಂಜಾಬ್ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಎಲ್ಲಾ ಪಕ್ಷಗಳು ಈಗಿನಿಂದಲೇ ಭರ್ಜರಿ ಸಿದ್ಧತೆ ಆರಂಭಿಸಿವೆ. ರಾಜ್ಯದಲ್ಲಿ ತನ್ನ ಅಧಿಕಾರವನ್ನು ಕಳೆದುಕೊಂಡಿದ್ದ ಕಾಂಗ್ರೆಸ್ ಪಕ್ಷವನ್ನು ಮತ್ತೊಮ್ಮೆ ಆಡಳಿತ ಪಕ್ಷವನ್ನಾಗಿ ಸ್ಥಾಪಿಸಲು ಕಾಂಗ್ರೆಸ್ ಹೈಕಮಾಂಡ್ ದೊಡ್ಡ ಮಟ್ಟದ ಕಾರ್ಯತಂತ್ರ ರೂಪಿಸಿದೆ.
ತಕ್ಷಣದಿಂದಲೇ ಜಾರಿಗೆ ಬರುವಂತೆ ಪಂಜಾಬ್‌ಗಾಗಿ 42 ಸದಸ್ಯರ ಬೃಹತ್ ‘ಪ್ರದೇಶ ಚುನಾವಣಾ ಸಮಿತಿ’ಯನ್ನು ರಚಿಸಿ ಎಐಸಿಸಿ (AICC) ಅಧಿಕೃತ ಆದೇಶ ಹೊರಡಿಸಿದೆ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ಸಮಿತಿಯ ರಚನೆಗೆ ಅನುಮೋದನೆ ನೀಡಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಂಜಾಬ್ ಕಾಂಗ್ರೆಸ್‌ನ ಎಲ್ಲಾ ಹಿರಿಯ ಮತ್ತು ಪ್ರಭಾವಿ ನಾಯಕರನ್ನು ಒಂದೇ ವೇದಿಕೆಯಡಿ ತರುವ ಪ್ರಯತ್ನವನ್ನು ಹೈಕಮಾಂಡ್ ಮಾಡಿದೆ. 42 ಸದಸ್ಯರ ಈ ಪಟ್ಟಿಯಲ್ಲಿ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ (PPCC) ಅಧ್ಯಕ್ಷ ಪರ್ಗತ್ ಸಿಂಗ್, ವಿರೋಧ ಪಕ್ಷದ ನಾಯಕ ಪ್ರತಾಪ್ ಸಿಂಗ್ ಬಾಜ್ವಾ, ಮಾಜಿ ಮುಖ್ಯಮಂತ್ರಿಗಳಾದ ಚರಣ್‌ಜಿತ್ ಸಿಂಗ್ ಚನ್ನಿ ಮತ್ತು ರಾಜಿಂದರ್ ಕೌರ್ ಭಟ್ಟಲ್, ಮಾಜಿ ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾ ವಾರಿಂಗ್, ಹಿರಿಯ ನಾಯಕರಾದ ಅಂಬಿಕಾ ಸೋನಿ, ಸುಖಜಿಂದರ್ ಸಿಂಗ್ ರಾಂಧವಾ ಹಾಗೂ ಸಂಸದ ಮನೀಶ್ ತಿವಾರಿ ಸೇರಿದಂತೆ ಪ್ರಮುಖ ನಾಯಕರು ಸ್ಥಾನ ಪಡೆದಿದ್ದಾರೆ.
ಈ 42 ನಾಯಕರ ಜೊತೆಗೆ, ಪಂಜಾಬ್ ರಾಜ್ಯ ಉಸ್ತುವಾರಿ ವಹಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ, ಅವರಿಗೆ ಸಹಾಯಕರಾಗಿರುವ ಎಐಸಿಸಿ ಕಾರ್ಯದರ್ಶಿಗಳು ಮತ್ತು ಪಂಜಾಬ್ ಕಾಂಗ್ರೆಸ್‌ನ ವಿವಿಧ ಅಂಗಸಂಸ್ಥೆಗಳ ರಾಜ್ಯ ಮುಖ್ಯಸ್ಥರು ಈ ಸಮಿತಿಯಲ್ಲಿ ಪದನಿಮಿತ್ತ ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಪರ್ಗತ್ ಸಿಂಗ್
ಪ್ರತಾಪ್ ಸಿಂಗ್ ಬಾಜ್ವಾ
ಅಂಬಿಕಾ ಸೋನಿ
ರಾಜಿಂದರ್ ಕೌರ್ ಭಟ್ಟಲ್
ಚರಣ್‌ಜಿತ್ ಸಿಂಗ್ ಚನ್ನಿ
ಸುಖಜಿಂದರ್ ಸಿಂಗ್ ರಾಂಧವಾ
ಮನೀಶ್ ತಿವಾರಿ
ವಿಜಯ್ ಇಂದರ್ ಸಿಂಗ್ಲಾ
ಅಮರಿಂದರ್ ಸಿಂಗ್ ರಾಜಾ ವಾರಿಂಗ್
ಶಂಶೇರ್ ಸಿಂಗ್ ದುಲ್ಲೊ
ಸುಖಪಾಲ್ ಸಿಂಗ್ ಖೈರಾ
ಅಮರ್ ಸಿಂಗ್
ಗುರ್ಜಿತ್ ಸಿಂಗ್ ಔಜ್ಲಾ
ಶೇರ್ ಸಿಂಗ್ ಘುಬಯಾ
ಧರ್ಮವೀರ ಗಾಂಧಿ
ಕಿಶೋರಿ ಲಾಲ್ ಶರ್ಮಾ
ಸಂಗತ್ ಸಿಂಗ್ ಗಿಲ್ಜಿಯಾನ್
ಸುಖ್ವಿಂದರ್ ಸಿಂಗ್ ಡ್ಯಾನಿ
ರಾಜ್ ಕುಮಾರ್ ವೆರ್ಕಾ
ಕುಲ್ಜಿತ್ ಸಿಂಗ್ ನಾಗ್ರಾ
ಗುರ್ಕಿರತ್ ಸಿಂಗ್
ಓಂ ಪ್ರಕಾಶ್ ಸೋನಿ
ಸಂತೋಷ್ ಚೌಧರಿ
ಮಾಲ್ತಿ ಥಾಪರ್
ರಾಣಾ ಕೆ.ಪಿ. ಸಿಂಗ್
ಭರತ್ ಭೂಷಣ್ ಆಶು
ಅರುಣಾ ಚೌಧರಿ
ಬ್ರಹ್ಮ ಮಹೀಂದ್ರ
ರಜಿಯಾ ಸುಲ್ತಾನಾ
ಟ್ರಿಪ್ಟ್ ರಾಜಿಂದರ್ ಸಿಂಗ್ ಬಾಜ್ವಾ
ರಾಣಾ ಗುರ್ಜಿತ್ ಸಿಂಗ್
ಸುಖಬಿಂದರ್ ಸಿಂಗ್ ಸರ್ಕಾರಿಯಾ
ಗುರುಪ್ರೀತ್ ಸಿಂಗ್ ಕಂಗಾರ್
ಬಲ್ಬೀರ್ ಸಿಂಗ್ ಸಿಧು
ಸಾಧು ಸಿಂಗ್ ಧರ್ಮಸೋತ್
ರಣದೀಪ್ ಸಿಂಗ್ ನಾಭಾ
ಅವತಾರ್ ಹೆನ್ರಿ
ಕುಶಾಲದೀಪ್ ಸಿಂಗ್ ಧಿಲ್ಲೋ
ಹರ್ದೇವ್ ಸಿಂಗ್ ಲಡ್ಡಿ
ಕ್ಯಾಪ್ಟನ್ ಸಂದೀಪ್ ಸಿಂಗ್ ಸಂಧು
ಅಜಿತ್ ಇಂದರ್ ಸಿಂಗ್ ಮೊಫರ್
ಪ್ರೊ. ಇಮ್ಯಾನುಯೆಲ್ ನಹರ್
ಇದಷ್ಟೇ ಅಲ್ಲದೆ, ಮುಂಬರುವ ಚುನಾವಣೆಯ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ ಮತ್ತು ಮಣಿಪುರ ರಾಜ್ಯಗಳಿಗೆ ಕಾಂಗ್ರೆಸ್ ಈಗಾಗಲೇ ಸ್ಕ್ರೀನಿಂಗ್ ಸಮಿತಿಗಳನ್ನು ರಚಿಸಿದೆ. ಜೊತೆಗೆ, ಬೇರೆ ಪಕ್ಷಗಳಿಂದ ಕಾಂಗ್ರೆಸ್‌ಗೆ ಸೇರ್ಪಡೆಯಾಗುವ ನಾಯಕರನ್ನು ಬರಮಾಡಿಕೊಳ್ಳಲು ಮತ್ತು ಸಂಘಟಿಸಲು ಪಂಜಾಬ್ ಕಾಂಗ್ರೆಸ್ 4 ಸದಸ್ಯರ ಪ್ರತ್ಯೇಕ ಸಮಿತಿಯನ್ನೂ ರಚಿಸಿದೆ.
ಒಟ್ಟಿನಲ್ಲಿ, 2027ರ ಪಂಜಾಬ್ ಅಸೆಂಬ್ಲಿ ಚುನಾವಣೆಗೆ ಎಲ್ಲಾ ರಾಜಕೀಯ ಪಕ್ಷಗಳು ತಾಲೀಮು ಶುರು ಮಾಡಿದ್ದು, ಕಾಂಗ್ರೆಸ್ ತನ್ನ ಹಿರಿಯ ಮತ್ತು ಕಿರಿಯ ನಾಯಕರ ಬಲದೊಂದಿಗೆ ಅಖಾಡಕ್ಕೆ ಇಳಿಯಲು ಸರ್ವಸಿದ್ಧವಾಗಿದೆ, (ಏಜೆನ್ಸೀಸ್).