ಇಂದಿರಾ ಗಾಂಧಿ ಏರ್‌ಪೋರ್ಟ್‌ನಲ್ಲಿ ಮಿಂಚಿನ ಕಾರ್ಯಾಚರಣೆ: 48 ಕೋಟಿ ಮೌಲ್ಯದ ಗಾಂಜಾ ವಶ; ಇಬ್ಬರು ಥೈಯ್ ಪ್ರಜೆಗಳ ಬಂಧನ! Ganja Seized
ಒಟ್ಟು 48 ಕೋಟಿ ಮೌಲ್ಯದ ಗಾಂಜಾ ವಶಪಡಿಸಿಕೊಂಡ ಅಧಿಕಾರಿಗಳು
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ ಕಸ್ಟಮ್ ಅಧಿಕಾರಿಗಳ ಮಿಂಚಿನ ಕಾರ್ಯಾಚರಣೆ
ಒಟ್ಟು 48 ಕೋಟಿ ಮೌಲ್ಯದ ಗಾಂಜಾ ವಶಪಡಿಸಿಕೊಂಡ ಅಧಿಕಾರಿಗಳು
47 ಕೆ.ಜಿ ಗಾಂಜಾ ಹೊತ್ತು ತಂದಿದ್ದ ಇಬ್ಬರು ಥೈ ಪ್ರಜೆಗಳ ಬಂಧನ
ನವದೆಹಲಿ: ಬ್ಯಾಂಕಾಕ್ ಮೂಲಕ ದೆಹಲಿಗೆ ಬಂದಿಳಿದಿದ್ದ ಇಬ್ಬರು ಥೈಲ್ಯಾಂಡ್ ಪ್ರಜೆಗಳಿಂದ ಸುಮಾರು 48 ಕೋಟಿ ರೂಪಾಯಿ ಮೌಲ್ಯದ ಗಾಂಜಾವನ್ನು (Ganja Seized) ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಿಬ್ಬಂದಿ ವಶ ಪಡಿಸಿಕೊಂಡಿರುವುದಾಗಿ ವರದಿಯಾಗಿದೆ.
ಒಟ್ಟು ವಶಪಡಿಸಿಕೊಳ್ಳಲಾದ ವಸ್ತುಗಳ ಪೈಕಿ ಒಬ್ಬ ಪ್ರಯಾಣಿಕನಿಂದ ಸುಮಾರು 29 ಕೆಜಿ ತೂಕದ ನಾಲ್ಕು ಪ್ಯಾಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಎರಡನೇ ಪ್ರಯಾಣಿಕನಿಂದ ಸುಮಾರು 19 ಕೆಜಿ ತೂಕದ ಎರಡು ಪ್ಯಾಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಶಪಡಿಸಿಕೊಂಡಿರುವ ಒಟ್ಟು ಮಾದಕ ವಸ್ತುಗಳ ಪ್ರಮಾಣ ಸುಮಾರು 47 ಕೆ.ಜಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ದೆಹಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಳ್ಳಲಾದ ಮಾದಕವಸ್ತು ಪ್ರಮಾಣದಲ್ಲಿ ಇದು ಹೆಚ್ಚಿನದು ಎಂದು ವಿಮಾನ ನಿಲ್ದಾಣ ಸಿಬ್ಬಂದಿ ತಿಳಿಸಿದ್ದಾರೆ.
ನಿಖರ ಮಾಹಿತಿ ಮೇರೆಗೆ ಈ ಮಾದಕ ವಸ್ತು ಭಾರತಕ್ಕೆ ಸೇರುವುದನ್ನು ತಡೆಯಲಾಗಿದೆ. ಹಾಗೆಯೇ ಬಂಧಿತ ಆರೋಪಿಗಳನ್ನು ಮಾದಕ ದ್ರವ್ಯಗಳು ಮತ್ತು ಮನೋವಿಕೃತ ಪದಾರ್ಥಗಳ (NDPS) ನಿಷೇಧ ಕಾಯ್ದೆ ಅಡಿಯಲ್ಲಿ ಬಂಧಿಸಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮಾದಕ ದ್ರವ್ಯಗಳು ಮತ್ತು ಸೈಕೋಟ್ರೋಪಿಕ್ ಪದಾರ್ಥಗಳ ಕಾಯ್ದೆ (NDPS Act)
ಭಾರತದಲ್ಲಿ ಮಾದಕ ದ್ರವ್ಯಗಳ ಅಕ್ರಮ ಸಾಗಣೆ, ಉತ್ಪಾದನೆ, ಮಾರಾಟ, ಬಳಕೆ ಮತ್ತು ಸಾಗಾಟವನ್ನು ಸಂಪೂರ್ಣವಾಗಿ ನಿಯಂತ್ರಿಸುವ ಮತ್ತು ನಿಷೇಧಿಸುವ ಉದ್ದೇಶದಿಂದ 1985ರಲ್ಲಿ ಈ ಕಾಯ್ದೆಯನ್ನು ಜಾರಿಗೆ ತರಲಾಯಿತು. ಈ ಕಾಯ್ದೆಯ ಮುಖ್ಯ ಉದ್ದೇಶವೆಂದರೆ ಸಮಾಜದಲ್ಲಿ ಯುವ ಪೀಳಿಗೆಯನ್ನು ಮಾದಕ ವ್ಯಸನದಿಂದ ರಕ್ಷಿಸುವುದು ಮತ್ತು ದೇಶದ ಆಂತರಿಕ ಭದ್ರತೆಯನ್ನು ಕಾಪಾಡುವುದಾಗಿದೆ.
ಈ ಕಾನೂನಿನ ಅಡಿಯಲ್ಲಿ ಗಾಂಜಾ, ಅಫೀಮು, ಹೆರಾಯಿನ್, ಕೊಕೇನ್‌ನಂತಹ ನೈಸರ್ಗಿಕ ಮಾದಕ ದ್ರವ್ಯಗಳು ಹಾಗೂ ಎಲ್‌ಎಸ್‌ಡಿ (LSD), ಎಂಡಿಎಂಎ (MDMA) ನಂತಹ ಕೃತಕವಾಗಿ ತಯಾರಿಸಿದ ಸೈಕೋಟ್ರೋಪಿಕ್ ರಾಸಾಯನಿಕಗಳನ್ನು ನಿಷೇಧಿತ ವಸ್ತುಗಳ ಪಟ್ಟಿಗೆ ಸೇರಿಸಲಾಗಿದೆ.
ಈ ಕಾಯ್ದೆಯಲ್ಲಿ ದ್ರವ್ಯಗಳ ಪ್ರಮಾಣವನ್ನು ಅಲ್ಪ ಪ್ರಮಾಣ (Small Quantity) ಮತ್ತು ವಾಣಿಜ್ಯ ಪ್ರಮಾಣ (Commercial Quantity) ಎಂದು ವರ್ಗೀಕರಿಸಲಾಗಿದೆ. ವೈಯಕ್ತಿಕ ಬಳಕೆಗಾಗಿ ಅಲ್ಪ ಪ್ರಮಾಣದಲ್ಲಿ ಮಾದಕ ದ್ರವ್ಯ ಹೊಂದಿದ್ದರೆ ಕನಿಷ್ಠ ಶಿಕ್ಷೆ ಅಥವಾ ದಂಡ ವಿಧಿಸಲಾಗುತ್ತದೆ. ಆದರೆ, ಮಾರಾಟ ಅಥವಾ ಸಾಗಾಟದ ಉದ್ದೇಶದ ವಾಣಿಜ್ಯ ಪ್ರಮಾಣದ ದ್ರವ್ಯಗಳು ಪತ್ತೆಯಾದರೆ 10 ರಿಂದ 20 ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆ ಮತ್ತು ಲಕ್ಷಾಂತರ ರೂಪಾಯಿಗಳ ದಂಡವನ್ನು ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ, (ಏಜನ್ಸೀಸ್).