ಪರಸ್ಪರ ಸ್ಪರ್ಧೆ ಇದ್ದಾಗ ಮಾತ್ರ ರಾಜ್ಯಗಳ ಅಭಿವೃದ್ದಿ: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು | Chandrababu Naidu

 Chandrababu Naidu | ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು
Chandrababu Naidu | ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು
Published on
ವಿಶಾಖಪಟ್ಟಣಂ: ಇತ್ತೀಚಿನ ಹೂಡಿಕೆ ಕ್ರಮಗಳ ಕುರಿತಾದ ಅಸಮಧಾನವು ಆರೋಗ್ಯಕರ ಒಕ್ಕೂಟ ವ್ಯವಸ್ಥೆಯ ಸಂಕೇತವಾಗಿದ್ದು, ಬೆಳವಣಿಗೆ ವೇಗಗೊಳ್ಳಬೇಕಾದರೆ ರಾಜ್ಯಗಳು ಪರಸ್ಪರ ಒತ್ತಡ ಹೇರಬೇಕು ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅಭಿಪ್ರಾಯಪಟ್ಟಿದ್ದಾರೆ.
ದಕ್ಷಿಣ ಕೊರಿಯಾದ ಪಾದರಕ್ಷೆ ಕಂಪನಿಯಾದ ಹ್ವಾಸುಂಗ್, ತನ್ನ ಪ್ರಸ್ತಾವಿತ ಯೋಜನೆಯನ್ನು ತಮಿಳುನಾಡಿನಿಂದ ಆಂಧ್ರಪ್ರದೇಶಕ್ಕೆ ವರ್ಗಾಯಿಸಿದ ಬಳಿಕ ಉಂಟಾಗಿರುವ ರಾಜಕೀಯ ಆರೋಪ ಪ್ರತ್ಯಾರೋಪಕ್ಕೆ ಪ್ರತಿಕ್ರಿಯೆ ನೀಡಿರುವ ನಾಯ್ಡು, ಈ ರೀತಿಯ ಪೈಪೋಟಿಗಳು ರಾಜ್ಯ ಅಭಿವೃದ್ದಿಯ ದೃಷ್ಠಿಯಿಂದ ಅತ್ಯಗತ್ಯ ಎಂದಿದ್ದಾರೆ.
ರಾಜ್ಯದ ಹಿತದೃಷ್ಠಿಯಿಂದ ಈ ರೀತಿಯ ಸ್ಪರ್ಧೆಗಳು ಅನಿವಾರ್ಯವಾಗುತ್ತವೆ, ಇಂತಹ ವಿಚಾರದಲ್ಲಿ ಪರಸ್ಪರ ಸ್ಪರ್ಧೆ ಇದ್ದಾಗ ಮಾತ್ರ ಜನರಿಗೆ ಉಪಯೋಗವಾಗುತ್ತದೆ. ಎಲ್ಲರೂ ಸಂತೃಪ್ತರಾದರೆ, ಹೂಡಿಕೆಗಳು ಹೇಗೆ ಬೆಳೆಯಲು ಸಾಧ್ಯ ಎಂದು ಪ್ರಶ್ನಿಸಿದರು. ರಾಷ್ಟ್ರೀಯ ಸ್ಥಿರತೆಯನ್ನು ಒದಗಿಸಿದ್ದಕ್ಕಾಗಿ ಮತ್ತು ಆರ್ಥಿಕ ಸುಧಾರಣೆಗಳನ್ನು ಮುನ್ನಡೆಸಿದ್ದಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದರು.
ಬೇರೆ ರಾಜ್ಯಗಳು ಉತ್ತಮವಾಗಿ ಕಾರ್ಯನಿರ್ವಹಿಸಿದರೆ, ಹೂಡಿಕೆದಾರರು ಅಲ್ಲಿಗೆ ಹೋಗುತ್ತಾರೆ; ನಮ್ಮ ರಾಜ್ಯದಲ್ಲಿ ಚೆನ್ನಾಗಿ ಕೆಲಸ ಮಾಡಿದರೆ0 ಅವರು ನಮ್ಮ ಬಳಿಗೆ ಬರುತ್ತಾರೆ. ನಾನು ಯಾವಾಗಲೂ ಸ್ಪರ್ಧೆಯನ್ನು ಪ್ರೋತ್ಸಾಹಿಸುತ್ತಾ ಬಂದಿದ್ದು, ಅದನ್ನೂ ಮುಂದುವರೆಸುತ್ತೇನೆ, ನನ್ನ ಸಂಪುಟದ ಸದಸ್ಯರಿಗು ಸಹ ಯಾವತ್ತಿಗೂ ಒಂದೇ ವಿಷಯದಲ್ಲಿ ಸಂತೃಪ್ತರಾಗಬಾರದು ಎಂದು ಹೇಳಿರುವುದಾಗಿ ತಿಳಿಸಿದರು.
ಏನಿದು ವಿವಾದ...?
ದಕ್ಷಿಣ ಕೋರಿಯಾದ ಹ್ವಾಸೇಂಗ್ ಪಾದರಕ್ಷೆ ಕಂಪನಿ ತನ್ನ ಪ್ರಸ್ತಾವಿತ ರೂ.1,720 ಕೋಟಿ ವೆಚ್ಚದ ಯೋಜನೆಯನ್ನು ತಮಿಳುನಾಡಿನಿಂದ ಆಂಧ್ರಪ್ರದೇಶಕ್ಕೆ ವರ್ಗಾಯಿಸಲಿಸಲು ನಿರ್ಧಾರಿಸಿದ್ದು, ಈ ಸೌಲಭ್ಯವು ಸುಮಾರು 20,000 ನೇರ ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ಹೇಳಲಾಗುತ್ತಿದೆ. ಈ ಹೊಸ ಸ್ಥಾವರವು ನಾಯ್ಡು ತವರು ಕ್ಷೇತ್ರವಾದ ಕುಪ್ಪಂನಲ್ಲಿ ಸ್ಥಾಪನೆಯಾಗಲಿದ್ದು, ಎರಡು ಹಳ್ಳಿಗಳಲ್ಲಿ 100 ಎಕರೆ ಭೂಮಿಯನ್ನು ಹಂಚಿಕೆ ಮಾಡಲಾಗುವುದು. ಈ ಸೌಲಭ್ಯವು ವಾರ್ಷಿಕವಾಗಿ ಸುಮಾರು 20 ಮಿಲಿಯನ್ ಸ್ಪೋರ್ಟ್ಸ್​ ಬೂಟುಗಳನ್ನು ತಯಾರಿಸುವ ಗುರಿ ಹೊಂದಿದೆ. 
ಟುಟಿಕೋರಿನ್‌ನಲ್ಲಿ ಈ ಸ್ಥಾವರವನ್ನು ಸ್ಥಾಪಿಸಲು ಹ್ವಾಸೆಂಗ್ 2025 ರ ಆಗಸ್ಟ್​ನಲ್ಲಿ ತಮಿಳುನಾಡಿನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತ್ತು. ಸದ್ಯ ಆಂಧ್ರಪ್ರದೇಶವು ಈ ಒಪ್ಪಂದವನ್ನು ಪಡೆದುಕೊಂಡ ಬಳಿಕ ರಾಜಕೀಯ ಸಂಘರ್ಷ ಆರಂಭವಾಗಿದ್ದು. ಕಂಪನಿಯು ಆಂಧ್ರ ನೀಡುವ ಪ್ರೋತ್ಸಾಹ ಮತ್ತು ದೀರ್ಘಾವಧಿಯ ಗುತ್ತಿಗೆಯ ಮೇಲೆ ಭೂಮಿಯನ್ನು ನೀಡುವುದು ಎಂದು ವರದಿಗಳು ಉಲ್ಲೇಖಿಸಿವೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net